Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :

ಇಂಡೋನೇಷ್ಯಾದಲ್ಲೂ ಕಂಬಳ !

Tuesday, 21.03.2017, 7:45 AM       No Comments

ಇತ್ತೀಚೆಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಿದ ನಂತರದಲ್ಲಿ ಕರ್ನಾಟಕದ ಸಾಂಸ್ಕೃತಿಕ ಕ್ರೀಡೆ ಕಂಬಳದ ಮೇಲೆ ಹೇರಿರುವ ನಿಷೇಧವನ್ನೂ ತೆರವುಗೊಳಿಸುವಂತೆ ಹೋರಾಟಗಳು ಆರಂಭವಾಗಿದ್ದವು. ಕಂಬಳದ ಮಾದರಿಯನ್ನೇ ಹೋಲುವ ವಿಶಿಷ್ಟ ಕ್ರೀಡೆಯೊಂದನ್ನು ಇಂಡೋನೇಷ್ಯಾದಲ್ಲಿ ಕಳೆದ 400 ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಎತ್ತುಗಳನ್ನು ಕೆಸರುಗದ್ದೆಯಲ್ಲಿ ಓಡಿಸಲಾಗುತ್ತದೆ. ‘ಪಾಕು ಜವಿ’ ಎಂಬುದು ಈ ಸ್ಪರ್ಧೆಯ ಹೆಸರು. ಕೆಸರುಗದ್ದೆಯಲ್ಲಿ ಎತ್ತುಗಳನ್ನು ನಿಲ್ಲಿಸಲಾಗುತ್ತದೆ. ನಂತರ ಎರಡು ಎತ್ತುಗಳ ದೇಹದ ಮೇಲೆ ಮರದ ಚೌಕಟ್ಟನ್ನು ಹಾಕಲಾಗುತ್ತದೆ. ಈ ಎತ್ತಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವ ವ್ಯಕ್ತಿ ಮರದ ಹಲಗೆ ಮೇಲೆ ನಿಂತುಕೊಂಡು ಎತ್ತುಗಳನ್ನು ನಿಯಂತ್ರಿಸುತ್ತಾನೆ. ಎತ್ತುಗಳು ನಿಧಾನ ಸಾಗಿದರೆ ಎತ್ತುಗಳ ಬಾಲವನ್ನು ಆತ ಗಟ್ಟಿಯಾಗಿ ಕಚ್ಚಿ ಎತ್ತುಗಳ ವೇಗ ಹೆಚ್ಚಿಸುತ್ತಾನೆ. ಎತ್ತುಗಳನ್ನು ಮಾರಾಟ ಮಾಡುವವರು ಸಾಮಾನ್ಯವಾಗಿ ಈ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಅವರು ತಮ್ಮ ಎತ್ತುಗಳ ಸಾಮರ್ಥ್ಯವನ್ನು ಖರೀದಿದಾರರಿಗೆ ತಿಳಿಯಪಡಿಸುತ್ತಾರೆ. ಗೆದ್ದ ಎತ್ತಗಳನ್ನು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲಾಗುತ್ತದೆ.

– ಏಜೆನ್ಸೀಸ್

 

Leave a Reply

Your email address will not be published. Required fields are marked *

11 + five =

Back To Top