Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ಇಂಗ್ಲೆಂಡಿಗೂ ಬಂತು ಕ್ಯಾಪ್ಸೂಲ್ ಹೋಟೆಲ್

Tuesday, 13.02.2018, 3:00 AM       No Comments

ಸಹಜವಾಗಿಯೇ ಸ್ಥಳಾವಕಾಶದ ಕೊರತೆಯಾಗುತ್ತದೆ. ಇಕ್ಕಟ್ಟಿನ ಪರಿಸ್ಥಿತಿ ನಿರ್ವಣವಾದಾಗ ಸುಗಮ ಜೀವನಕ್ಕಾಗಿ ವಿವಿಧ ವ್ಯವಸ್ಥೆ ಮತ್ತು ಅನುಕೂಲ ಕಲ್ಪಿಸಲು ಕಟ್ಟಡ ನಿರ್ವಣಕಾರರು, ಶಿಲ್ಪಿಗಳು ಮತ್ತು ತಂತ್ರಜ್ಞಾನ ಪರಿಣತರು ನೆರವಾಗುತ್ತಾರೆ. ಅದರಂತೆ ಜಪಾನಿನ ವಿನ್ಯಾಸಗಾರರು ರೂಪಿಸಿರುವ ಕ್ಯಾಪ್ಸೂಲ್ ಮಾದರಿಯ ಕೋಣೆಯನ್ನು ಇಂಗ್ಲೆಂಡಿನ ಹೋಟೆಲ್ ಅಳವಡಿಸಿಕೊಂಡಿದೆ.

ಲಂಡನ್ ಬ್ರಿಜ್ ಸಮೀಪ ಇರುವ ‘ಸೇಂಟ್ ಕ್ರಿಸ್ಟೋಫರ್ ಇನ್’ ಹೋಟೆಲ್​ನಲ್ಲಿ 26 ಪುಟ್ಟ ಕ್ಯಾಬಿನ್ ಕೋಣೆಗಳನ್ನು ನಿರ್ವಿುಸಲಾಗಿದ್ದು, ತಂಗಲು ಪ್ರತಿ ರಾತ್ರಿಗೆ 25 ಪೌಂಡ್ ಶುಲ್ಕ ವಿಧಿಸಲಾಗುತ್ತದೆ. ಈ ಕ್ಯಾಬಿನ್ ಕೊಠಡಿಯಲ್ಲಿ ಮೂಡ್ ಲೈಟಿಂಗ್ ವ್ಯವಸ್ಥೆಯಿದ್ದು, ಉಚಿತ ವೈ-ಫೈ ಕೂಡ ಲಭ್ಯವಿದೆ. ಗ್ರಾಹಕರು ಮೊಬೈಲ್, ಲ್ಯಾಪ್​ಟಾಪ್ ಬಳಸಲು ಅನುಕೂಲ ಕಲ್ಪಿಸಲಾಗಿದೆ.

ಏಕಾಂತ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ದುಬಾರಿ ವಸತಿ ದರಕ್ಕೆ ಪರ್ಯಾಯವಾಗಿದೆ. ದಪ್ಪನೆಯ ಬೆಡ್, ಪರದೆ, ಇಯರ್ ಪ್ಲಗ್ ಕೂಡ ನೀಡಲಾಗುತ್ತದೆ.

ಜಪಾನಿನ ಈ ವಿನ್ಯಾಸ ಫೇಮಸ್ ಆಗುತ್ತಿದ್ದು, ಪ್ರವಾಸಿಗರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಶೇಷ ವಾತಾನುಕೂಲ ವ್ಯವಸ್ಥೆಯೂ ಇದ್ದು, ಆರಾಮದಾಯಕ ಅನುಭವ ನೀಡಲು ಹೋಟೆಲ್ ಆಡಳಿತ ಮಂಡಳಿ ಎಲ್ಲ ಸೌಲಭ್ಯ ಕಲ್ಪಿಸಿದೆ. ಕಡಿಮೆ ಬಾಡಿಗೆ ವಿಧಿಸುವ ಕ್ಯಾಪ್ಸೂಲ್ ಹೋಟೆಲ್ ಕೊಠಡಿಗೆ ಭಾರಿ ಬೇಡಿಕೆಯೂ ಕಂಡುಬಂದಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top