Saturday, 21st July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಆಸ್ಟ್ರೇಲಿಯಾಕ್ಕೂ ಪಸರಿಸಿದ ಪಿಂಕ್

Sunday, 13.08.2017, 3:02 AM       No Comments

ಳೆದ ವರ್ಷ ಸೆಪ್ಟೆಂಬರ್​ನಲ್ಲಿ ತೆರೆಕಂಡ ‘ಪಿಂಕ್’ ಸಿನಿಮಾ ಮಾಡಿದ ಹವಾ ಅಷ್ಟಿಷ್ಟಲ್ಲ. ತಾಪ್ಸೀ ಪನ್ನೂ ಮತ್ತು ಅಮಿತಾಭ್ ಬಚ್ಚನ್ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದ ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಮಾಯಿ ಮಾಡಿದ ಬಳಿಕ ‘ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ’ ರಾಷ್ಟ್ರಪ್ರಶಸ್ತಿಯ ಹಿರಿಮೆಗೂ ಪಾತ್ರವಾಯಿತು. ‘ಪಿಂಕ್’ ಸದ್ದು ಇಷ್ಟಕ್ಕೇ ನಿಂತಿಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದೆ. ಇದರಿಂದ ತಾಪ್ಸೀ ಸಂತಸ ದುಪ್ಪಟ್ಟಾಗಿದೆ.

‘ನಮ್ಮ ಸಿನಿಮಾದ ಕಥೆಗೆ ಮಾನವೀಯ ಗುಣವಿತ್ತು. ಅದು ದೇಶ-ವಿದೇಶಗಳ ಗಡಿ ದಾಡಿ, ಎಲ್ಲ ಬಗೆಯ ಪ್ರೇಕ್ಷಕರನ್ನು ತಲುಪಬೇಕು ಎಂಬ ಆಶಯ ನಮ್ಮದಾಗಿತ್ತು. ಈ ಚಿತ್ರೋತ್ಸವದ ಮೂಲಕ ಅದು ಈಡೇರಿದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಚಿತ್ರದ ನಿರ್ವಪಕರಲ್ಲೊಬ್ಬರಾದ ಸುಜಿತ್ ಸರ್ಕಾರ್.

ಈ ಹಿಂದೆ ತಾಪ್ಸೀ ನಟಿಸಿದ್ದ ‘ಬೇಬಿ’, ‘ನಾಮ್ ಶಬನಾ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ ಮಾಡಿದ್ದವು. ಪರಿಣಾಮ,ಬಾಲಿವುಡ್​ನಲ್ಲಿ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಬೇರೆ ನಟಿಮಣಿಯರಾಗಿದ್ದರೆ ‘ಹೀರೋಗಳಿಗೆ ಕೊಡುವಷ್ಟೇ ಸಂಭಾವನೆಯನ್ನು ನನಗೂ ಕೊಡಿ’ ಎಂದು ಪಟ್ಟು ಹಿಡಿಯುತ್ತಿದ್ದರು. ಆದರೆ ತಾಪ್ಸೀ ಹಾಗಲ್ಲ. ಸಂಭಾವನೆ ತಾರತಮ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಸದ್ಯಕ್ಕೆ ನಾಯಕಿ ಪ್ರಧಾನ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ. ನಮ್ಮ ಚಿತ್ರಗಳು ಕೂಡ ಹೀರೋಗಳ ಸಿನಿಮಾಗಳ ರೀತಿ ಮೊದಲ ದಿನವೇ 10 ಕೋಟಿ ರೂ.ಗಿಂತ ಹೆಚ್ಚು ಕಮಾಯಿ ಮಾಡುವಂತಾದರೆ ಮಾತ್ರ ಸಮ ಪ್ರಮಾಣದಲ್ಲಿ ಸಂಭಾವನೆ ಕೇಳಬಹುದು. ಇಲ್ಲದಿದ್ದರೆ ನಮ್ಮ ಬೇಡಿಕೆ ತಪ್ಪಾಗುತ್ತದೆ’ ಎಂದಿದ್ದಾರೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top