Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಆಸ್ಕರ್​ಗೆ ಎಂಟ್ರಿ ಪಡೆದ ನ್ಯೂಟನ್

Saturday, 23.09.2017, 3:00 AM       No Comments

ಶುಕ್ರವಾರವಷ್ಟೇ ತೆರೆಕಂಡ ಬಾಲಿವುಡ್​ನ ‘ನ್ಯೂಟನ್’ ಚಿತ್ರತಂಡವೀಗ ಹೆಮ್ಮೆಯ ಅಲೆಯಲ್ಲಿ ತೇಲುತ್ತಿದೆ. ಇದಕ್ಕೆ ಕಾರಣ, ಆಸ್ಕರ್! 2018ರಲ್ಲಿ ಆಸ್ಕರ್ ಪ್ರಶಸ್ತಿಗಾಗಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ‘ನ್ಯೂಟನ್’ ಚಿತ್ರ ಆಯ್ಕೆಯಾಗಿದೆ. 26 ಚಿತ್ರಗಳ ಪೈಕಿ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ ಎಂದು ಭಾರತೀಯ ಸಿನಿಮಾ ಒಕ್ಕೂಟ ತಿಳಿಸಿದೆ. ಪ್ರಸ್ತುತ ರಾಜಕೀಯ ಹಾಗೂ ನಕ್ಸಲ್​ಪೀಡಿತ ಪ್ರದೇಶದಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಗಮನದಲ್ಲಿಟ್ಟುಕೊಂಡು ಅಮಿತ್ ಮಸೂರ್​ಕರ್ ಕಥೆ ಹೆಣೆದು ‘ನ್ಯೂಟನ್’ ನಿರ್ದೇಶನ ಮಾಡಿದ್ದಾರೆ. 2013ರಲ್ಲಿ ‘ಸುಲೇಮಾನಿ ಕೀಡಾ’ ಶೀರ್ಷಿಕೆಯ ಒಂದೂವರೆ ಗಂಟೆಯ ಸಿನಿಮಾವೊಂದಕ್ಕೆ ಆಕ್ಷನ್-ಕಟ್ ಹೇಳಿದ್ದ ಅಮಿತ್, ಇದೀಗ ‘ನ್ಯೂಟನ್’ ಮೂಲಕ ನಟ ರಾಜ್​ಕುಮಾರ್ ರಾವ್ ಕಡೆಯಿಂದ ನೂತನ್​ಕುಮಾರ್ ಪಾತ್ರ ಮಾಡಿಸಿದ್ದಾರೆ. 2018ರ ಮಾ. 4ರಿಂದ ಲಾಸ್ ಏಂಜಲಿಸ್​ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top