ಐಪಿಎಲ್ ಟೂರ್ನಿಯ ತವರು ಚರಣದ ಒಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ. ಇದಕ್ಕೆ ಕಾರಣ ಹಚ್ಚ ಹಸಿರಿನ ಪರಿಸರ ಉಳಿಸಿ ಎಂಬ ಸಂದೇಶ. ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಜೆರ್ಸಿಯೊಂದಿಗೆ ಕಣಕ್ಕಿಳಿಯಿತು. ಕೊಹ್ಲಿ ಪಂದ್ಯದ ಆರಂಭಕ್ಕೂ ಮುನ್ನ ಗಿಡವೊಂದನ್ನು ಅಜಿಂಕ್ಯ ರಹಾನೆಗೆ ಹಸ್ತಾಂತರಿಸುವ ಮೂಲಕ ಗ್ರೋ ಗ್ರೀನ್ ಪಂದ್ಯಕ್ಕೆ ಚಾಲನೆ ನೀಡಿದರು. ಆರ್ಸಿಬಿ ಪ್ರತಿ ಬಾರಿ ಆಡುವ ಗೋ ಗ್ರೀನ್ ಪಂದ್ಯವೂ ಸಂಜೆ 4 ಗಂಟೆ ನಿಗದಿಯಾಗಿರುತ್ತದೆ. ಆರ್ಸಿಬಿ 2011ನೇ ಆವೃತ್ತಿಯಿಂದ ಗೋ ಗ್ರೀನ್ ಜಾಗೃತಿಯ ಪಂದ್ಯ ಆರಂಭಿಸಿದ್ದು, ಇದು 8ನೇ ಪಂದ್ಯವಾಗಿದೆ. ಇದರ ಕೆಲವು ಝುಲಕ್ಗಳಿವು….