Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಆರ್​ಟಿಇ ಸೀಟಿಗೆ ಅಧಿಕ ಶುಲ್ಕ ವಸೂಲಿ

Friday, 19.05.2017, 3:11 AM       No Comments

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಮೂಲಕ ಖಾಸಗಿ ಶಾಲೆಯಲ್ಲಿ ಸೀಟು ಪಡೆದ ಶೇ. 92 ವಿದ್ಯಾರ್ಥಿಗಳ ಪಾಲಕರು ಹೆಚ್ಚುವರಿ ಶುಲ್ಕವಾಗಿ ಐದು ವರ್ಷದಲ್ಲಿ 16.24 ಲಕ್ಷ ರೂ. ಪಾವತಿಸಿರುವುದು ಆರ್​ಟಿಇ ಕಾರ್ಯಪಡೆ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದೆ.

ಆರ್​ಟಿಇ ಕಾರ್ಯಪಡೆ 2012-13 ರಿಂದ 2016-17ನೇ ಸಾಲಿನವರೆಗೂ ಆರ್​ಟಿಇ ಮೂಲಕ ಖಾಸಗಿ ಶಾಲೆಯಲ್ಲಿ ಸೀಟು ಪಡೆದ 100 ವಿದ್ಯಾರ್ಥಿಗಳ ಪಾಲಕರೊಂದಿಗೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಅರಮನೆ ರಸ್ತೆಯಲ್ಲಿರುವ ಜೈನ್ ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವರದಿ ಬಿಡುಗಡೆ ಮಾಡಿದರು.

ಸಮೀಕ್ಷೆಯಲ್ಲಿ 100 ಪಾಲಕರನ್ನು ಸಂರ್ಪಸಲಾಗಿದ್ದು, 92 ಪಾಲಕರು ಪ್ರತಿ ವರ್ಷ ಹೆಚ್ಚುವರಿ ಶುಲ್ಕ ಪಾವತಿಸಿದ್ದಾರೆ. ಉಳಿದ 8 ಪಾಲಕರು ಮಾತ್ರ ಹೆಚ್ಚುವರಿ ಶುಲ್ಕ ಪಾವತಿಸಿಲ್ಲ. 2012-13ರಲ್ಲಿ 17 ಪಾಲಕರು 4,07,790 ರೂ., 2013-14ರಲ್ಲಿ 19 ಪಾಲಕರು 2,83,825 ರೂ., 2014-15ರಲ್ಲಿ 20 ಪಾಲಕರು 5,45,000 ರೂ., 2015-16ರಲ್ಲಿ 24 ಪಾಲಕರು 2,22,660 ರೂ., 2016-17ರಲ್ಲಿ 12 ಪಾಲಕರು 1,65,175 ರೂ. ಪಾವತಿಸಿದ್ದು, ಒಟ್ಟಾರೆ 5 ವರ್ಷದಲ್ಲಿ 92 ಪಾಲಕರು 16.24 ಲಕ್ಷ ರೂ. ಪಾವತಿಸಿರುವುದು ವರದಿಯಿಂದ ತಿಳಿದುಬಂದಿದೆ. ಇದರಿಂದಾಗಿ ಹೆಚ್ಚುವರಿ ಶುಲ್ಕಕ್ಕೆ ಸರ್ಕಾರದಿಂದ ಯಾವುದೇ ಕಡಿವಾಣ ಬಿದ್ದಿಲ್ಲವೆಂಬುದು ಸ್ಪಷ್ಟವಾಗಿದೆ.

ಹಣ ಪಾವತಿಸಿರುವ 92 ಪಾಲಕರ ಪೈಕಿ ಶೇ.40 ಪಾಲಕರಿಗೆ ಮಾತ್ರ ಪಾವತಿಸಿದ ಹಣಕ್ಕೆ ಶಾಲಾ ಆಡಳಿತ ಮಂಡಳಿಯವರು ರಸೀದಿ ನೀಡಿದ್ದಾರೆ. ಉಳಿದ ಶೇ.60 ಪಾಲಕರು ಯಾವುದೇ ರಸೀದಿ ನೀಡಿಲ್ಲವೆಂದು ತಿಳಿಸಿದ್ದಾರೆ. ಪಠ್ಯಪುಸ್ತಕ- ಶೇ. 31, ಶಾಲೆಯ ಒತ್ತಡ- ಶೇ. 61, ನಿರ್ವಹಣೆ- ಶೇ.8ರಂತೆ ವಿವಿಧ ರೀತಿಯಲ್ಲಿ ಶುಲ್ಕ ಪಾವತಿಸಲಾಗಿದೆ. ಹೆಚ್ಚು ವರಿ ಶುಲ್ಕದ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ 10 ಪಾಲಕರು ಬಿಇಒಗಳಿಗೆ ದೂರು ನೀಡಿದರೆ,

14 ಪಾಲಕರು ಬಿಇಒ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಪೈಕಿ 5 ಪಾಲಕರಿಗೆ ಮಾತ್ರ ತಾವು ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಿಳಿದುಬಂದಿದೆ.

ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಆರ್​ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್ ತಿಳಿಸಿದ್ದಾರೆ.

 ಬಡಮಕ್ಕಳಿಗೆ ಗುಣಮಟ್ಟ ಶಿಕ್ಷಣ ದೊರೆಯುವುದು ಮರೀಚಿಕೆಯಾಗಿದೆ. ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಅನ್ಯಾಯ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

| ಎಚ್.ಎಸ್. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ

 

ಬಡಜನರಿರುವ ಪ್ರದೇಶದಲ್ಲಿ ಸಮೀಕ್ಷೆ

ಜಯನಗರ, ಜೆ.ಪಿ. ನಗರ, ಬಸವನಗುಡಿ, ಹನುಮಂತನಗರ, ಕುರುಬರಹಳ್ಳಿ, ಲಗ್ಗೆರೆ, ಇಂದಿರಾನಗರ, ಬನ್ನೇರುಘಟ್ಟ, ಲಿಂಗರಾಜಪುರ ಮತ್ತಿತರ ಕಡೆ ತೀರಾ ಬಡಜನರು ನೆಲೆಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಶಾಲಾ ಆಡಳಿತ ಮಂಡಳಿಯವರು ಮಗುವಿಗೆ ತೊಂದರೆ ಮಾಡುವ ಭಯದಿಂದ ಬಹು ತೇಕರು ಮಾಹಿತಿ ಹಂಚಿಕೊಂಡಿಲ್ಲ. 100 ಪಾಲಕರು ಮಾತ್ರ ಮಾಹಿತಿ ನೀಡಿದ್ದಾರೆ.


ಸೀಟು ನೀಡಲು ಸೂಚನೆ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್​ಟಿಇ) ಕಾಯ್ದೆಯಡಿಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಹಂಚಿಕೆ ಮಾಡಿರುವ 24 ವಿದ್ಯಾರ್ಥಿಗಳಿಗೆ ಒಂದನೇ ತರಗತಿಗೆ ಪ್ರವೇಶ ನೀಡುವಂತೆ ರಾಜರಾಜೇಶ್ವರಿನಗರದ ನ್ಯಾಷನಲ್ ಹಿಲ್​ವ್ಯೂ ಶಾಲೆಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.

ಆರ್​ಟಿಇ ಅಡಿಯ ಸೀಟುಗಳಿಗೆ ತಮಗೆ ಪ್ರವೇಶ ನಿರಾಕರಿಸಿದ್ದ ಶಾಲೆಯ ಕ್ರಮ ಪ್ರಶ್ನಿಸಿ ಪ್ರತೀಕ್ಷಾ ಕೆ. ಗೌಡ ಸೇರಿ 24 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ. ಮನೋಹರ ಅವರಿದ್ದ ರಜಾಕಾಲದ ಪೀಠ ಈ ಆದೇಶ ನೀಡಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಉಪ ನಿರ್ದೇಶಕರು, ಬೆಂ. ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ನ್ಯಾಷನಲ್ ಹಿಲ್​ವ್ಯೂ ಶಾಲೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ಅರ್ಜಿದಾರ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನ್ಯಾಷನಲ್ ಹಿಲ್​ವ್ಯೂ ಶಾಲೆಯಲಿ ಆರ್​ಟಿಇ ಅಡಿಯಲ್ಲಿ ಸೀಟು ಹಂಚಿಕೆ ಮಾಡಿದ್ದರು. ಆದರೆ, ಶಾಲಾ ಆಡಳಿತ ಮಂಡಳಿ ಸೀಟು ಕಲ್ಪಿಸಲು ನಿರಾಕರಿಸಿತ್ತು. ಶಾಲಾ ಆಡಳಿತ ಮಂಡಳಿ ವಿರುದ್ಧ ಮಕ್ಕಳ ಪಾಲಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಶಿಕ್ಷಣ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಹೈಕೋರ್ಟ್ ಮೊರೆ ಹೋಗಿದ್ದರು.

Leave a Reply

Your email address will not be published. Required fields are marked *

Back To Top