Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಆರ್ಟ್ ಡೆಕೊ

Sunday, 08.07.2018, 3:03 AM       No Comments

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಮುಂಬೈನ ಆರ್ಟ್ ಡೆಕೊ ಈ ಪಟ್ಟಿಯ ಹೊಸ ಸೇರ್ಪಡೆ. ಈ ಮೂಲಕ ಭಾರತದ 37 ತಾಣಗಳು ಜಾಗ ಪಡೆದುಕೊಂಡಿವೆ.

| ಚಂದ್ರಶೇಖರ ಗಂಧನಹಳ್ಳಿ

ಇದು ಕಲಾತ್ಮಕ ಕಟ್ಟಡಗಳ ತಾಣ. ಬರೋಬ್ಬರಿ 66 ಹೆಕ್ಟೇರ್ ಪ್ರದೇಶದಲ್ಲಿರುವ 100ಕ್ಕೂ ಅಧಿಕ ಕಲಾತ್ಮಕ ಹಾಗೂ ವಿಕ್ಟೋರಿಯನ್ ಗೋಥಿಕ್ ಶೈಲಿಯ ಕಟ್ಟಡಗಳು ಈ ಪ್ರದೇಶದ ಸೌಂದರ್ಯ ಹೆಚ್ಚಿಸಿವೆ. ಇದು ಮುಂಬೈನ ಪೋರ್ಟ್ ಪ್ರದೇಶ. ಸದಾ ಪ್ರವಾಸಿಗರಿಂದ ಕಿಕ್ಕಿರಿದಿರುವ ಈ ಪ್ರದೇಶಕ್ಕೀಗ ಮತ್ತೊಂದು ಗರಿ. ಇಲ್ಲಿನ ಆರ್ಟ್ ಡೆಕೊ ಕಟ್ಟಡವನ್ನು ಯುನೆಸ್ಕೋ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಜಗತ್ತಿನ ವಿವಿಧ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಈ ಬಾರಿ ಮುಂಬೈನ ವಿಕ್ಟೋರಿಯನ್ ಗೋಥಿಕ್ ವಾಸ್ತುಶಿಲ್ಪ ಹೊಂದಿರುವ ಆರ್ಟ್ ಡೆಕೊ ಕಟ್ಟಡ ಸೇರ್ಪಡೆಗೊಂಡಿದೆ. ಎಲಿಫೆಂಟಾ ಗುಹೆಗಳು ಮತ್ತು ವಿಕ್ಟೋರಿಯಾ ಟರ್ವಿುನಸ್ ಬಳಿಕ ಈಗ ಬ್ರಿಟಿಷರಿಂದ ನಿರ್ವಣಗೊಂಡಿರುವ ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಆರ್ಟ್ ಡೆಕೊ ಕಟ್ಟಡ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ಕರ್ನಾಟಕದ ಹಂಪೆ, ಪಟ್ಟದಕಲ್ಲು, ಪಶ್ಚಿಮಘಟ್ಟ ಸೇರಿ ಯುನೆಸ್ಕೊ ಪಟ್ಟಿಗೆ ಭಾರತದ ತಾಣಗಳ ಸಂಖ್ಯೆ 37ಕ್ಕೆ ಏರಿದಂತಾಗಿದೆ. ಕಳೆದೆರಡು ವಾರದ ಹಿಂದೆ ಬಹರೇನ್​ನ ಮನಾಮದಲ್ಲಿ ನಡೆದ ಯುನೆಸ್ಕೊ ವಿಶ್ವ ಪಾರಂಪರಿಕ ಸಮಿತಿಯ 42ನೇ ಅಧಿವೇಶನದಲ್ಲಿ ಭಾರತದ ಒಂದು ತಾಣ ಸೇರಿ ಜಗತ್ತಿನ 19 ತಾಣಗಳಿಗೆ ಈ ಬಾರಿ ವಿಶ್ವ ಪರಂಪರೆ ತಾಣಗಳ ಮಾನ್ಯತೆ ನೀಡಲಾಗಿದೆ. ಇವುಗಳಲ್ಲಿ ಸಾಂಸ್ಕೃತಿಕ ವಿಭಾಗದಿಂದ 13, ನೈಸರ್ಗಿಕ ವಿಭಾಗದಿಂದ 3 ಮತ್ತು ಮಿಶ್ರಿತ ವಿಭಾಗದಿಂದ 3 ತಾಣಗಳು ಸೇರಿವೆ. ಈವರೆಗೆ 167 ದೇಶಗಳ 1,092 ತಾಣಗಳು ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿವೆ. ಇಡೀ ಒಂದು ನಗರವೂ ಈ ಪಟ್ಟಿಯಲ್ಲಿದೆ. ಅದು ಗುಜರಾತ್​ನ ಅಹಮದಾಬಾದ್! ಇಂತಹ ಮಾನ್ಯತೆ ಪಡೆದ ದೇಶದ ಮೊದಲ ನಗರ.

ಏನಿದು ಕಲಾತ್ಮಕ ಕಟ್ಟಡ?

ಮುಂಬೈನ ಓವಲ್ ಮೈದಾನದ ಸುತ್ತಲಿನ ವಿಕ್ಟೋರಿಯಾ ಗೋಥಿಕ್ ಶೈಲಿಯ ಮತ್ತು ಆರ್ಟ್ ಡೆಕೊ (ಕಲಾತ್ಮಕ) ಕಟ್ಟಡಗಳು ಸುಮಾರು 163 ಎಕರೆ ಪ್ರದೇಶವುಳ್ಳ ವಿಶಾಲ ಆವರಣದಲ್ಲಿವೆ. ಇವು 19 ಮತ್ತು 20ನೇ ಶತಮಾನದ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ವಣಗೊಂಡಿವೆ. ಬ್ರಿಟನ್ ಆಳ್ವಿಕೆಯಲ್ಲಿದ್ದಾಗ 1880ರಿಂದ 1940ರ ಅವಧಿಯಲ್ಲಿ ನಿರ್ವಿುಸಿದ ಕಟ್ಟಡಗಳು ವಿಶಿಷ್ಟ ಕಲಾತ್ಮಕತೆ ಹೊಂದಿದ್ದು, ಇವುಗಳನ್ನು ವಿಕ್ಟೋರಿಯಾ ಗೋಥಿಕ್ ಶೈಲಿ ಎಂದು ಕರೆಯಲಾಗುತ್ತದೆ. ಬಾಂಬೆ ಹೈಕೋರ್ಟ್, ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಟ್ಟಡ, ಛತ್ರಪತಿ ಶಿವಾಜಿ ಟರ್ವಿುನಸ್ ಈ ಶೈಲಿಯ ಪ್ರಮುಖ ಕಟ್ಟಡಗಳು. ಫ್ರಾನ್ಸ್​ನ ಆರ್ಟ್ ಡೆಕೊ ಶೈಲಿಯಿಂದ ಪ್ರೇರಣೆ ಪಡೆದು ಭಾರತೀಯ ಹವಾಮಾನಕ್ಕೆ ಅನುಗುಣವಾಗಿ ಈ ಕಟ್ಟಡಗಳನ್ನು ವಿನ್ಯಾಸ ಮಾಡಲಾಗಿದೆ. ಬಹುತೇಕ ಕಟ್ಟಡಗಳ ವಿನ್ಯಾಸವು ಹಡಗುಗಳ ಡಕ್​ಗಳನ್ನು ಹೋಲುವಂತಿವೆ. ಹಡಗಿನ ಕಿಟಕಿಯಂಥದ್ದೇ (ಪೋರ್ಟ್ ಹೋಲ್) ಕಿಟಕಿಗಳು, ಸುರುಳಿ ಮೆಟ್ಟಿಲುಗಳು, ಗೋಡೆ ವರಾಂಡಗಳಲ್ಲಿ ಪ್ರತಿಮೆಗಳು ಈ ಶೈಲಿಯ ಪ್ರಮುಖ ಹೆಗ್ಗುರುತುಗಳು. ಓರಿಯಂಟಲ್ ಇನ್ಸುರೆನ್ಸ್ ಕಟ್ಟಡ, ನ್ಯೂ ಇಂಡಿಯಾ ಇನ್ಶೂರೆನ್ಸ್ ಕಟ್ಟಡ, ರೀಗಲ್ ಸಿನಿಮಾ, ಎರೊಸ್ ಸಿನಿಮಾ ಮಂದಿರಗಳು ಮತ್ತು ಮರೀನ್ ಡ್ರೖೆವ್​ನ ಎದುರು ಇರುವ ವಸತಿ ಸಮುಚ್ಚಯಗಳು ಈ ಶೈಲಿಯ ಪ್ರಮುಖ ನಿರ್ವಣಗಳು.

Leave a Reply

Your email address will not be published. Required fields are marked *

Back To Top