Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಆರೋಗ್ಯ ಎಮರ್ಜೆನ್ಸಿ

Wednesday, 15.11.2017, 3:05 AM       No Comments

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ವಿಚಾರ ಮುಂದಿಟ್ಟುಕೊಂಡು ಪ್ರತಿಷ್ಠೆಯ ಸಂಘರ್ಷಕ್ಕಿಳಿದಿರುವ ಖಾಸಗಿ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವಿನ ಹೋರಾಟ ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಸೋಮವಾರವಷ್ಟೇ ಮೂವರ ಸಾವಿಗೆ ಕಾರಣವಾಗಿದ್ದ ವೈದ್ಯ ಮುಷ್ಕರ ಮಂಗಳವಾರ ಮೂರು ಕಂದಮ್ಮಗಳೂ ಸೇರಿ ಹನ್ನೊಂದು ಜೀವಗಳನ್ನು ಬಲಿ ಪಡೆದುಕೊಂಡಿದೆ. ಕ್ಷಣಕ್ಷಣಕ್ಕೆ ಪರಿಸ್ಥಿತಿ ಗಂಭೀರಗೊಳ್ಳುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಹಾಗೂ ವೈದ್ಯರ ನಡೆಯಿಂದಾಗಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೆ ರಾಜ್ಯಾದ್ಯಂತ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದು ತುರ್ತು ಪರಿಸ್ಥಿತಿ ನಿರ್ವಣವಾಗಿದೆ.

ಕಣ್ಬಿಡುವ ಮುನ್ನವೇ ಕಣ್ಮುಚ್ಚಿತು

ವೈದ್ಯ ಮುಷ್ಕರದಿಂದಾಗಿ ಮಗುವೊಂದು ಕಣ್ಣು ಬಿಡುವ ಮುನ್ನವೇ ಕಣ್ಣು ಮುಚ್ಚಿದ ಹೃದಯ ವಿದ್ರಾವಕ ಘಟನೆಗೆ ಗೋಕಾಕ ತಾಲೂಕಿನ ಘಟಪ್ರಭಾ ಸಾಕ್ಷಿಯಾಯಿತು. 7 ತಿಂಗಳ ಗರ್ಭಿಣಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಘಟಪ್ರಭಾ ಆಸ್ಪತ್ರೆಗೆ ಕರೆದು ತರಲಾಗಿತ್ತು. ಆದರೆ ಆಸ್ಪತ್ರೆ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆಯೇ ಆಕೆಗೆ ಹೆರಿಗೆ ಆಗಿದೆ. ಆಸ್ಪತ್ರೆ ಸಿಬ್ಬಂದಿ ಪರಿಶೀಲಿಸಿದಾಗ ಮಗು ಭ್ರೂಣದಲ್ಲೇ ಸಾವನ್ನಪ್ಪಿರುವುದು ಖಚಿತವಾಯಿತು.

ಮೂರು ತಿಂಗಳ ಮಗು ಸಾವು

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರಿನ ಮೂರು ತಿಂಗಳ ಗಂಡು ಮಗು ಹಾಸನದಲ್ಲಿ ಮೃತಪಟ್ಟಿದೆ. ತಿಪಟೂರಿನಲ್ಲಿ ಚಿಕಿತ್ಸೆ ಸಿಗದೆ ಹಾಸನಕ್ಕೆ ಮಗು ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರಿನ ಮೂರು ತಿಂಗಳ ಗಂಡು ಮಗು ಹಾಸನದಲ್ಲಿ ಮೃತಪಟ್ಟಿದೆ. ತಿಪಟೂರಿನಲ್ಲಿ ಚಿಕಿತ್ಸೆ ಸಿಗದೆ ಹಾಸನಕ್ಕೆ ಮಗು ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.

ಬದುಕಲಿಲ್ಲ ಬಾಲಕಿಯರು

ಬೆಳಗಾವಿ, ಧಾರವಾಡ, ಶಿವಮೊಗ್ಗದಲ್ಲಿ 12 ವರ್ಷದ 3 ಬಾಲಕಿಯರು ಪ್ರತ್ಯೇಕ ಘಟನೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಪಿಡಿಒಗೆ ಸಿಗಲಿಲ್ಲ ಚಿಕಿತ್ಸೆ

ಹೃದಯಾಘಾತಕ್ಕೊಳಗಾಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಪಿಡಿಒ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಮೃತಪಟ್ಟಿದ್ದಾರೆ.

ಹಾವೇರಿಯಲ್ಲಿ 3 ಸಾವು

ಹಾವೇರಿಯಲ್ಲಿ ಒಂದೂವರೆ ವರ್ಷದ ಮಗು, ವಿದ್ಯಾರ್ಥಿ ಹಾಗೂ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಬಾಗಲಕೋಟೆ, ಜಮಖಂಡಿಯಲ್ಲಿ ಇಬ್ಬರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಮೂಡದ ಸಹಮತ

ಸರ್ಕಾರ ಹಾಗೂ ಖಾಸಗಿ ವೈದ್ಯರ ನಡುವೆ ಸಹಮತ ಮೂಡದ ಹಿನ್ನೆಲೆಯಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಯಲಿದೆ. ಬುಧವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

ರಾಜೀನಾಮೆ ಎಚ್ಚರಿಕೆ

ವೈದ್ಯರ ಬೇಡಿಕೆಯ ಒತ್ತಡಕ್ಕೆ ಮಣಿದು ಒಂದೊಮ್ಮೆ ವಿಧೇಯಕ ಸರಳಗೊಳಿಸಲು ಮುಂದಾದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

 ಅಸೆಂಬ್ಲಿಯಲ್ಲಿ ಜಾರ್ಜ್ ಗದ್ದಲ

ಬೆಳಗಾವಿ: ಮೊದಲ ದಿನವೇ ವಿಧಾನಪರಿಷತ್​ನಲ್ಲಿ ಪ್ರತಿಧ್ವನಿಸಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮಂಗಳವಾರ ವಿಧಾನಸಭೆಯಲ್ಲೂ ಕೋಲಾಹಲ ಸೃಷ್ಟಿಸಿತು. ಪ್ರಕರಣ ಸಂಬಂಧ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿ ಸ್ಪೀಕರ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.


ಮುಂದುವರಿದ ವೈದ್ಯರ ಮುಷ್ಕರಕ್ಕೆ 11 ಬಲಿ

ಬೆಂಗಳೂರು: ತಮ್ಮ ನಿಯಂತ್ರಣ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ 2ನೇ ದಿನವಾದ ಮಂಗಳವಾರವೂ ಮುಂದುವರಿದಿದ್ದು ವಿವಿಧ ಜಿಲ್ಲೆಗಳಲ್ಲಿ 11 ಬಲಿ ಪಡೆದಿದೆ. ಏಳು ತಿಂಗಳ ಗರ್ಭಿಣಿಯೊಬ್ಬರಿಗೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಗ್ರಾಮದ ಆಸ್ಪತ್ರೆ ಬಾಗಿಲಲ್ಲೆ ಹೆರಿಗೆಯಾಗಿದ್ದು, ಮಗು ಗರ್ಭದಲ್ಲೆ ಸಾವನ್ನಪ್ಪಿದೆ.

ಹಲವು ಜಿಲ್ಲೆಗಳಲ್ಲಿ ರೋಗಿಗಳು ಪರದಾಡಿದರು. ಗರ್ಭಿಣಿಯರು, ವೃದ್ಧರು ಚಿಕಿತ್ಸೆಗಾಗಿ ಪರದಾಡಿದರು.

ಹಸುಗೂಸುಗಳ ಸಾವು: ಸಮರ್ಪಕ ಚಿಕಿತ್ಸೆ ಸಿಗದಿದ್ದರಿಂದ ಗೋಕಾಕ ತಾಲೂಕಿನ ಘಟಪ್ರಭಾ ಬಳಿಯ ತಪಶಿ ಗ್ರಾಮದ ಆಸ್ಪತ್ರೆ ಬಾಗಿಲಲ್ಲೆ ಹೆರಿಗೆಯಾಗಿದ್ದು, ಮಗು ಗರ್ಭದಲ್ಲೆ ಸಾವನ್ನಪ್ಪಿದೆ. ತಾಯಿ ದೊಡ್ಡವ್ವ ಮುತ್ಯಪ್ಪ ಕೊಂಕಣಿ (28) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಳು ತಿಂಗಳ ಗರ್ಭಿಣಿ ದೊಡ್ಡವ್ವಗೆ ಸೋಮವಾರ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಮುಂಭಾಗದಲ್ಲಿರುವ ರಸ್ತೆಯಲ್ಲಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ದೊಡ್ಡವ್ವ, ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೆ ಸಿಬ್ಬಂದಿ ಆಸ್ಪತ್ರೆಯ ಒಳಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ. ಮಗು ತಾಯಿ ಗರ್ಭದಲ್ಲೇ ಸಾವನ್ನಪ್ಪಿದೆ.

ಮೂರು ತಿಂಗಳ ಮಗು: ಹಾಸನ ನಗರದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಮೂರು ತಿಂಗಳ ಗಂಡು ಮಗು ಮೃತಪಟ್ಟಿದೆ. ನದೀಂ ಹಾಗೂ ಫರ್ಹಾನಾ ಎಂಬವರ ಮೂರು ತಿಂಗಳ ಮಗು ಇಬ್ರಾಹಿಂ ಮೃತ ದುರ್ದೈವಿ. ಮಗುವಿನ ಆರೋಗ್ಯ ಹದಗೆಟ್ಟ ಪರಿಣಾಮ ರಾತ್ರಿಯೇ ತಿಪಟೂರಿನಿಂದ ಹಾಸನಕ್ಕೆ ಕರೆತರಲಾಗಿತ್ತು.

ಮೂವರು ಬಾಲಕಿಯರ ಸಾವು: ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಇಂಗಳಗಾಂವ ಗ್ರಾಮದ ಬಾಲಕಿ ಕಲ್ಲವ್ವ ಶ್ರೀಶೈಲ ಅಂಬಿ (12) ಮೃತಪಟ್ಟಿದ್ದಾಳೆ. ಸೋಮವಾರ ರಾತ್ರಿ ತೀವ್ರ ರಕ್ತದೊತ್ತಡದಿಂದ ಬಳಲಿ ಅರೆಪ್ರಜ್ಞಾವಸ್ಥೆ ತಲುಪಿದ್ದಳು.ಅಥಣಿ ಸರ್ಕಾರಿ ಆಸ್ಪತ್ರೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಹುಬ್ಬಳ್ಳಿ ಕಿಮ್ಸ್​ನಲ್ಲೂ ಚಿಕಿತ್ಸೆ ಲಭಿಸದೆ ಧಾರವಾಡದ ಗಣಪತಿಗುಡಿ ಓಣಿಯ ವೈಷ್ಣವಿ ವಿಷ್ಣು ಜಾಧವ (12) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಹುಬ್ಬಳ್ಳಿಯ ಕಿಮ್ಸ್​ಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಸೋಮವಾರ ಶಾಲೆಗೆ ಹೋಗಿದ್ದ ಸಾಗರ ತಾಲೂಕು ಹಿರೇಹಾರಕ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕೆ.ಅನನ್ಯ (12) ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ. ತಕ್ಷಣ ಅನನ್ಯಾಳನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ದರು. ಆದರೆ ಅಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಇದ್ದುದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅಸುನೀಗಿದ್ದಾಳೆ.

ಹೃದಯಾಘಾತ

ಕಾಗಿನೆಲೆಯ ಖಾಸಗಿ ಪಿಯು ಕಾಲೇಜ್​ನಲ್ಲಿ ಓದುತ್ತಿದ್ದ ಬಸವರಾಜ ದಿಡಗೂರ (17) ಮಂಗಳವಾರ ಕಾಲೇಜ್​ನಲ್ಲಿ ಮೂರ್ಛೆ ಬಂದು ಬಿದ್ದಿದ್ದ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದರಾದರೂ ವೈದ್ಯರು ಇರಲಿಲ್ಲ. ಹೀಗಾಗಿ ಅಲ್ಲಿಂದ ಹಾವೇರಿ ಜಿಲ್ಲಾಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಬ್ಯಾಡಗಿಯ ಸಾಯಿನಾ ಮೂರು ದಿನಗಳಿಂದ ಬೇಧಿಯಿಂದ ಬಳಲುತ್ತಿದ್ದಳು. ಪಾಲಕರು ಶನಿವಾರ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಮಂಗಳವಾರ ಮಧ್ಯಾಹ್ನ 1.30ಕ್ಕೆ ಜಿಲ್ಲಾಸ್ಪತ್ರೆಗೆ ಬರುವ ವೇಳೆಗೆ ಮಗು ಮೃತಪಟ್ಟಿತ್ತು. ಹಾವೇರಿ ನಗರ ನಿವಾಸಿ ಮರ್ದಾನಸಾಬ್ ಹಾವೇರಿ (55) ಎಂಬುವವರು ತೀವ್ರ ಹೃದಯಾಘಾತದಿಂದ ಜಿಲ್ಲಾಸ್ಪತ್ರೆಗೆ ದಾಖಲಾದ ವೇಳೆಯಲ್ಲಿ ಮೃತಪಟ್ಟಿದ್ದಾರೆ.

ಹುನಗುಂದ ತಾಲೂಕಿನ ಮರಟಗೇರಿ ಗ್ರಾಮದ ನಿವಾಸಿ ಹೃದಯಘಾತಕ್ಕೆ ತುತ್ತಾದ ಶೇಖಪ್ಪ ಗ್ಯಾನಪ್ಪ ಜಕ್ಲಿ(52) ಚಿಕಿತ್ಸೆ ಲಭ್ಯವಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗಿನ ಜಾವ ಹೃದಯಾಘಾತವಾದಾಗ ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಲ್ಲಿ ಅವರಿಗೆ ಸಮರ್ಪಕವಾದ ಚಿಕಿತ್ಸೆ ಲಭಿಸದೆ ಸಾವಿಗೀಡಾಗಿದ್ದಾರೆ.

ಜಮಖಂಡಿ ನಗರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಅಶೋಕ (40) ಎಂಬುವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೂರ್ನಾಲ್ಕು ಖಾಸಗಿ ಆಸ್ಪತ್ರೆ ಇದ್ದರೂ ಅವು ಬಂದ್ ಇದ್ದಿದ್ದರಿಂದ ಅಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾದ್ದರಿಂದ ಚಿಕಿತ್ಸೆ ಲಭ್ಯವಾಗದೆ ಅವರು ಅಸುನೀಗಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ವನಬಳ್ಳಾರಿ ಪಿಡಿಒ ಗ್ಯಾನಪ್ಪ ಬಡ್ನಾಳ್ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕರ್ತವ್ಯಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಎದೆ ನೋವು ಕಾಣಿಸಿ ಕೊಂಡಿದೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

3 ದಿನ ರಮೇಶಕುಮಾರ್ ಮೌನ

ಖಾಸಗಿ ಆಸ್ಪತ್ರೆ ನಿಯಂತ್ರಿಸುವ ವಿಧೇಯಕ ಮಂಡನೆ ವಿಚಾರದಲ್ಲಿ ತರಾತುರಿ ತೋರದಿರಲು ಸಿಎಂ ನಿರ್ಧರಿಸಿದ್ದಾರೆ. ಹಾಗೆಯೇ ಇನ್ನು ಮೂರು ದಿನ ವಿಧೇಯಕ ಕುರಿತಾಗಿ ಮೌನವಹಿಸಲು ಆರೋಗ್ಯ ಸಚಿವ ರಮೇಶಕುಮಾರ್ ನಿರ್ಧರಿಸಿದ್ದಾರೆ. ವಿಧೇಯಕವನ್ನು ಹಲ್ಲಿಲ್ಲದ ಹಾವಿನಂತೆ ಮಾಡಿದರೆ ತಾವು ಖುರ್ಚಿಯಲ್ಲಿ ಮುಂದುವರಿಯುವುದಿಲ್ಲ. ಹುದ್ದೆಗಿಂತ ವಿಧೇಯಕ ಮುಖ್ಯವೆಂಬ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಬೆಳವಣಿಗೆಯಲ್ಲಿ ವಿಧೇಯಕ ಜಾರಿ ಮಾಡದಂತೆ ವೈದ್ಯರ ನಿಯೋಗ ಮಂಗಳವಾರ ಪುನಃ ಮುಖ್ಯಮಂತ್ರಿ ಮನವೊಲಿಸಲು ಬಂದಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ನೀವು ಮೊದಲು ಮುಷ್ಕರ ಹಿಂತೆಗೆದುಕೊಳ್ಳಿ, ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ ಎಂದಿದ್ದಾರೆ.

ನಿಲ್ಲದ ವೈದ್ಯರ ಪ್ರತಿಭಟನೆ

ಕೆಪಿಎಂಇ ಕಾಯ್ದೆ ವಿರೋಧಿಸಿ ವೈದ್ಯರು ನಡೆಸಿರುವ ಪ್ರತಿಭಟನೆ ಹಲವು ಜಿಲ್ಲೆಗಳಲ್ಲಿ ಮುಂದುವರಿದಿದ್ದು, ರೋಗಿಗಳ ಪರದಾಟ ಹೆಚ್ಚಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಂಜೆ 4 ಗಂಟೆ ವೇಳೆಗೆ 930 ಹೊರರೋಗಿಗಳು, 96 ಒಳರೋಗಿಗಳು ಹಾಗೂ 18 ಹೆರಿಗೆಗಳಾಗಿದ್ದವು. ಗದಗ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ರೋಗಿಗಳ ದಟ್ಟಣೆಯಿಂದ ಕೂಡಿದ್ದವು.

ಬಾಗಿಲು ತೆರೆದ ಆಸ್ಪತ್ರೆಗಳು: ರಾಜಧಾನಿ ಬೆಂಗಳೂರು ಸೇರಿ ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಹಾಸನ, ದಾವಣಗೆರೆ, ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ವೈದ್ಯಕೀಯ ಸೇವೆ ಮತ್ತೆ ಸಹಜ ಸ್ಥಿತಿಗೆ ಮರಳಿತ್ತು. ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆ, ಚಿತ್ರದುರ್ಗದ ಜಿಲ್ಲಾಸ್ಪತ್ರೆ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಜನವಿರೋಧಿಯಾದರೆ ನಿವೃತ್ತಿ

ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಜನವಿರೋಧಿ ಎನ್ನುವುದು ಬಿಜೆಪಿ ನಾಯಕರು ನಂಬುವ ಆರ್​ಎಸ್​ಎಸ್ ಕಾರ್ಯಕರ್ತರ ಬಾಯಿಂದ ಬಂದರೆ ಸಾರ್ವಜನಿಕ ಜೀವನ ದಿಂದ ನಿವೃತ್ತಿ ಹೊಂದು ವುದಾಗಿ ಆರೋಗ್ಯ ಸಚಿವ ರಮೇಶ ಕುಮಾರ್ ಸವಾಲು ಹಾಕಿದ್ದಾರೆ. ಜೀವನದಲ್ಲಿ ಕೆಲ ಆದರ್ಶಗಳನ್ನು ಇಟ್ಟುಕೊಂಡು ಬದುಕು ತ್ತಿರುವ ನಾನು ಜನರಿಗೆ ಒಳ್ಳೆಯದಾಗಲಿ ಎಂಬ ಆಶಯ ಹೊಂದಿದ್ದೇನೆ. ಈ ಕಾರಣದಿಂದಲೇ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು. ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಶೂನ್ಯವೇಳೆಯಲ್ಲಿ ವೈದ್ಯರ ಮುಷ್ಕರದ ಬಗ್ಗೆ ಪ್ರಸ್ತಾಪಿಸಿದಾಗ ರಮೇಶ್​ಕುಮಾರ್ ಪ್ರತಿಕ್ರಿಯಿಸಿದರು.

ಖಾಸಗಿ ವೈದ್ಯರ ಮುಷ್ಕರದಿಂದ ಮೂವರ ಬಲಿ ಎಂಬ ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಟಕವಾಗಿರುವ ವರದಿಯನ್ನು ಗಮನಿಸಿದ್ದೇನೆ. ಅದು ನಮ್ಮ ತಪ್ಪಿನಿಂದ ಅವಘಡ ಆಗಿದ್ದರೆ ಮೃತ ಕುಟುಂಬಗಳಿಗೆ ಕ್ಷಮೆ ಕೇಳುತ್ತೇನೆ ಎಂದರು.

ನಾನು ಪುತ್ರ, ಪುತ್ರಿಯನ್ನು ಹೊಂದಿದ್ದೇನೆ. ಪುತ್ರಿಯ ವಿವಾಹವಾಗಿ, ಇದೀಗ ಅಮೇರಿಕದಲ್ಲಿ ನೆಲೆಸಿದ್ದಾರೆ. ನನ್ನ ಪುತ್ರ ಮಿಲಿಟರಿ ಶಾಲೆಯಲ್ಲಿ ವ್ಯಾಸಂಗ ಪೂರೈಸಿದ್ದಾರೆ ಎಂದು ಪ್ರಸ್ತಾಪಿಸುವ ಮೂಲಕ ರಮೇಶಕುಮಾರಗೆ ಮಕ್ಕಳಿಲ್ಲ ಎಂಬ ಹೇಳಿಕೆ ನೀಡಿದ್ದ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದರು.

ವೈದ್ಯರ ಉಪವಾಸ ಸತ್ಯಾಗ್ರಹ

ರಾಜ್ಯದ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಮಂಗಳವಾರ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕಿ ಶಶಿಕಲಾ ಜೊಲ್ಲೆ, ರಾಯಕ್ಕಾ ವೈ. ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್​ನ ವೈದ್ಯರು ಭಾಗವಹಿಸುವ ಮೂಲಕ ವೈದ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ನ. 13ರಂದು ಮಾತ್ರ ಪ್ರತಿಭಟನೆ ನಡೆಸುವುದಾಗಿ ಪೊಲೀಸರಿಂದ ಅನುಮತಿ ಪಡೆದಿದ್ದರು. ಹೀಗಾಗಿ ಮಂಗಳವಾರ ಪೊಲೀಸರ ಸಮ್ಮುಖದಲ್ಲಿ ಪೆಂಡಾಲ್ ತೆರವು ಆರಂಭವಾಯಿತಾದರು, ವೈದ್ಯರು ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

Leave a Reply

Your email address will not be published. Required fields are marked *

Back To Top