Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಆರು ವರ್ಷದಲ್ಲಿ ಮೂರು ಸಾವಿರ ಮಕ್ಕಳ ಸಾವು

Sunday, 13.08.2017, 3:02 AM       No Comments

ನವದೆಹಲಿ: 2012ರ ಬಳಿಕ ಗೋರಖ್​ಪುರದ ಬಿಆರ್​ಡಿ ಮೆಡಿಕಲ್ ಕಾಲೇಜ್​ನಲ್ಲಿ 3 ಸಾವಿರಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 50 ಸಾವಿರ ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಸಾವು ಗೋರಖ್​ಪುರದ ಆಸ್ಪತ್ರೆಯಲ್ಲಿ ಸಂಭವಿಸಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಲು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಪ್ರಮುಖ ಕಾರಣ ಎಂಬ ಆರೋಪವೂ ಕೇಳಿಬಂದಿವೆ. ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಚಿಕಿತ್ಸೆ ನೀಡಲು ಗೋರಖ್​ಪುರ ಆಸ್ಪತ್ರೆ ಮಹತ್ವದ್ದಾಗಿದೆ. ಆದರೆ ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲದೇ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮಧ್ಯೆ ವೈದ್ಯಕೀಯ ಕಾಲೇಜು ಪ್ರಾಂಶುಪಾಲರನ್ನು ಸರ್ಕಾರ ವಜಾಗೊಳಿಸಿದೆ.

37 ಕೋಟಿ ರೂ. ಪ್ರಸ್ತಾವನೆ: ಆಸ್ಪತ್ರೆಯಲ್ಲಿನ ವಿವಿಧ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಆಸ್ಪತ್ರೆ 37 ಕೋಟಿ ರೂ. ಅನುದಾನ ನೀಡುವಂತೆ ಕಳೆದ ಮೇ ತಿಂಗಳಲ್ಲಿ ಉಪ್ರಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ವಾರ್ಡ್ ನಿರ್ವಹಣೆ, ಐಸಿಯು ಆಧುನೀಕರಣ, ಔಷಧ ಖರೀದಿ, ವೆಂಟಿಲೇಟರ್, ಪ್ರಯೋಗಾಲಯ ಅಭಿವೃದ್ಧಿಗೆ ಆಸ್ಪತ್ರೆ ಮುಂದಾಗಿತ್ತು. ಈ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು.

***

ಪ್ರಧಾನಿ ಮೋದಿ ಭೇಟಿ?

ಗೋರಖ್​ಪುರ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಸದ್ಯದಲ್ಲೇ ಭೇಟಿ ನೀಡುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಹಾಯಕ ಸಚಿವೆ ಅನುಪ್ರಿಯಾ ಪಟೇಲ್ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿ ಆಸ್ಪತ್ರೆಗೆ ಭೇಟಿ ನೀಡಿ, ಪ್ರಧಾನಿಗೆ ವರದಿ ನೀಡಲಿದ್ದಾರೆ.

***

ಮಕ್ಕಳ ಸಾವಿನ ಸಂಖ್ಯೆ 63ಕ್ಕೆ ಏರಿಕೆ

ನವದೆಹಲಿ: ಗೋರಖ್​ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಆರು ದಿನಗಳಲ್ಲಿ ಸಂಭವಿಸಿದ ಮಕ್ಕಳ ಸಾವಿನ ಸಂಖ್ಯೆ ಶನಿವಾರ 63ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕ ಸಹಿತ ಮೂವರು ಮೃತಪಟ್ಟಿದ್ದಾರೆ. ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಾಸ ಕಾರಣ ಶುಕ್ರವಾರ 30 ಮಕ್ಕಳು ಮೃತಪಟ್ಟಿದ್ದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಸಾವಿನ ಸರಣಿ ಮುಂದುವರಿದಿರುವುದು ಆತಂಕ ಹೆಚ್ಚಿಸಿದೆ. ವೈದ್ಯರು ಮಕ್ಕಳಿಗೆ ಅಗತ್ಯ ಚಿಕಿತ್ಸೆ ಹಾಗೂ ಔಷಧ ನೀಡುತ್ತಿಲ್ಲ ಎಂದು ಮಕ್ಕಳ ಕುಟುಂಬಸ್ಥರು ಆರೋಪಿಸಿದ್ದಾರೆ.

20.84 ಲಕ್ಷ ರೂ. ಪಾವತಿ: ಚಿಕಿತ್ಸೆ ವೇಳೆ ಆಮ್ಲಜನಕದ ಕೊರತೆಯಿಂದ 30 ಮಕ್ಕಳು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಆಮ್ಲಜನಕ ಸಿಲಿಂಡರ್ ಪೂರೈಸುವ ಕಂಪನಿಗೆ ಪಾವತಿಯಾಗಬೇಕಿರುವ ಬಾಕಿ ಹಣದಲ್ಲಿ 20.84 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

***

ತಪ್ಪಿತಸ್ಥರಿಗೆ ಶಿಕ್ಷೆ ತಪ್ಪುವುದಿಲ್ಲ…

ಅವಘಡ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಮಕ್ಕಳ ಸಾವಿಗೆ ಕಾರಣರಾಗಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ತುರ್ತು ಕ್ಯಾಬಿನೆಟ್ ಸಭೆ ನಡೆಸಿ, ಮುಂದಿನ ಕ್ರಮದ ಕುರಿತು ರ್ಚಚಿಸಿದ್ದಾರೆ.

***

ಕಂಪನಿ ಮೇಲೆ ದಾಳಿ, ಎಫ್​ಐಆರ್

ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಕಂಪನಿಯ ಲಖನೌ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸಂಸ್ಥೆಯ ಹಲವು ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಸ್ಪತ್ರೆ ಹಣ ಬಾಕಿ ಉಳಿಸಿಕೊಂಡ ಕಾರಣ ಆಮ್ಲಜನಕ ಪೂರೈಕೆಯನ್ನು ಸಂಸ್ಥೆ ಸ್ಥಗಿತಗೊಳಿಸಿತ್ತು. 30ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪುಷ್ಪಾ ಆಕ್ಸಿಜನ್ ಸಂಸ್ಥೆ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top