Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಆರಂಭ ಸೂಪರ್, ದಿನದಂತ್ಯಕ್ಕೆ ಡೇಂಜರ್

Sunday, 13.08.2017, 3:03 AM       No Comments

ಪಲ್ಲೆಕಿಲೆ: ಮೊದಲ ಅರ್ಧದಿನದ ಆಟದಲ್ಲಿ ಭಾರತದ್ದೇ ಅದರಲ್ಲೂ ಆರಂಭಿಕ ಜೋಡಿಯದ್ದೇ ಅಬ್ಬರ. ಕೆಎಲ್ ರಾಹುಲ್​ರ ಸತತ 7ನೇ 50 ಪ್ಲಸ್ ರನ್ ಹಾಗೂ ಶಿಖರ್ ಧವನ್​ರ ಸರಣಿಯ 2ನೇ ಶತಕ ಭಾರತಕ್ಕೆ 3ನೇ ಟೆಸ್ಟ್​ನ ಮೊದಲ ದಿನವೇ ಸಂಪೂರ್ಣ ಮೇಲುಗೈನ ನಿರೀಕ್ಷೆ ಮೂಡಿಸಿತ್ತು. ಆದರೆ, ಆ ಬಳಿಕ ತನ್ನ ಮೂವರು ಎಡಗೈ ಬೌಲರ್​ಗಳಾದ ಮಾಲಿಂದ ಪುಷ್ಪಕುಮಾರ, ಲಕ್ಷನ್ ಸಂಡಕನ್ ಹಾಗೂ ಸ್ವಿಂಗ್ ಬೌಲರ್ ವಿಶ್ವ ಫೆರ್ನಾಂಡೋ ಮೂಲಕ ಆತಿಥೇಯ ಶ್ರೀಲಂಕಾ ತಿರುಗೇಟು ನೀಡಿತು. ಶನಿವಾರ ಪಲ್ಲೆಕಿಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಸತತ ಮೂರನೇ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ವಿಕೆಟ್​ಗೆ 188 ರನ್​ಗಳ ಬೃಹತ್ ಜತೆಯಾಟದ ಬಳಿಕ ದಿನದ ಕೊನೆಯಲ್ಲಿ ಹಿಡಿತ ಬಿಟ್ಟುಕೊಟ್ಟ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್​ಗಳಲ್ಲಿ 6 ವಿಕೆಟ್​ಗೆ 329 ರನ್ ಪೇರಿಸಿದೆ. ವೃದ್ಧಿಮಾನ್ ಸಾಹ (13) ಹಾಗೂ ಹಾರ್ದಿಕ್ ಪಾಂಡ್ಯ (1) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ (129 ರನ್, 123 ಎಸೆತ, 17 ಬೌಂಡರಿ) ಹಾಗೂ ಕನ್ನಡಿಗ ಕೆಎಲ್ ರಾಹುಲ್ (85 ರನ್, 135 ಎಸೆತ, 8 ಬೌಂಡರಿ) ಇನಿಂಗ್ಸ್ ದಿನದ ಆಕರ್ಷಣೆ ಎನಿಸಿತ್ತು. ದಿನದ ಮೊದಲ 39.2 ಓವರ್​ಗಳ ಆಟದಲ್ಲಿ ವಿಕೆಟ್ ನಷ್ಟವಿಲ್ಲದೆ 188 ರನ್ ಕೂಡಿಸಿದ್ದ ಭಾರತ, ನಂತರದ 50.4 ಓವರ್​ಗಳ ಆಟದಲ್ಲಿ ಕೇವಲ 141 ರನ್ ಸೇರಿಸಿತು. ಅದಕ್ಕಾಗಿ ತಂಡ ಅಮೂಲ್ಯ 6 ವಿಕೆಟ್​ಗಳನ್ನು ಕಳೆದುಕೊಂಡಿತು.

***

ರಾಹುಲ್-ಧವನ್ ಭರ್ಜರಿ ಆರಂಭ

ಟೀಮ್ ಇಂಡಿಯಾಕ್ಕೆ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ನೀಡಿದ ಆರಂಭ ಹೇಗಿತ್ತೆಂದರೆ, ಮೊದಲ ಅವಧಿಯ ಆಟದಲ್ಲಿ ಶ್ರೀಲಂಕಾ ತಂಡ ತನ್ನ ನಾಲ್ವರು ಫೀಲ್ಡರ್​ಗಳನ್ನು ಬೌಂಡರಿ ಲೈನ್​ನಲ್ಲಿ ನಿಲ್ಲಿಸಿತ್ತು. ಈ ಅವಧಿಯ ಆಟದಲ್ಲಿ ಇಬ್ಬರೂ ಆರಂಭಿಕರಿಗೆ ತಲಾ ಒಂದು ಜೀವದಾನವನ್ನೂ ನೀಡಿತ್ತು. ಅನನುಭವಿ ಬೌಲಿಂಗ್ ವಿಭಾಗವನ್ನು ನಿರರ್ಗಳವಾಗಿ ದಂಡಿಸಿದ ಧವನ್, ಬೌಂಡರಿಗಳನ್ನು ಬಾರಿಸುತ್ತಾ ಬೌಲರ್​ಗಳ ಮೇಲೆ ಒತ್ತಡ ಹೇರಿದರು. ಇನ್ನೊಂದೆಡೆ ರಾಹುಲ್ ಕೂಡ ಧವನ್​ರ ಬ್ಯಾಟಿಂಗ್ ವೇಗಕ್ಕೆ ಒಗ್ಗಿಕೊಂಡಂತೆ ಬ್ಯಾಟಿಂಗ್ ನಡೆಸಿದ ಕಾರಣ ಓವರ್​ಗೆ ತಲಾ 5ರಂತೆ ರನ್​ಗಳು ಹರಿದುಬಂದವು. ಸತತ ಮೂರು ಗಂಟೆಗಳ ಕಾಲ ಆರಂಭಿಕರಿಂದ ದಂಡನೆಗೆ ಒಳಗಾದ ಶ್ರೀಲಂಕಾಗೆ ಪುಷ್ಪಕುಮಾರ ಮೊದಲ ಯಶ ದೊರಕಿಸಿಕೊಟ್ಟರು. ಶ್ರೀಲಂಕಾದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ವಿಕೆಟ್​ಗೆ ದಾಖಲೆಯ ಜತೆಯಾಟ ನಡೆಸಿದ ಬಳಿಕ, ಪುಷ್ಪಕುಮಾರ ಎಸೆತದಲ್ಲಿ ದೊಡ್ಡ ಶಾಟ್ ಬಾರಿಸುವ ಪ್ರಯತ್ನ ಮಾಡಿದ ರಾಹುಲ್, ಮಿಡ್ ಆನ್​ನಲ್ಲಿ ದಿಮುತ್ ಕರುಣರತ್ನೆಗೆ ಸುಲಭ ಕ್ಯಾಚ್ ನೀಡಿದರು. ಕೇವಲ 15 ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡ ಕರ್ನಾಟಕ ಬ್ಯಾಟ್ಸ್​ಮನ್ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ 7ನೇ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ಸರಿಗಟ್ಟಿದರು. ಮತ್ತೊಂದೆಡೆ ಧವನ್ 107 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್​ನ 6ನೇ ಶತಕ ಪೂರೈಸಿದರು. ಅವರು 15 ಬೌಂಡರಿ ಸಿಡಿಸಿದ್ದರು. ತಂಡದ ಮೊತ್ತ 200ರ ಗಡಿ ದಾಟಿದ ಬಳಿಕ ಪುಷ್ಪಕುಮಾರ ಎಸೆತದಲ್ಲಿ ಚಾಂಡಿಮಲ್​ಗೆ ಕ್ಯಾಚ್ ನೀಡಿ ಧವನ್ ಹೊರನಡೆದರು.

***

ವಿಶ್ವದಾಖಲೆ ಸರಿಗಟ್ಟಿದ ರಾಹುಲ್ ಟೆಸ್ಟ್

ನಲ್ಲಿ ಸತತ 7ನೇ ಅರ್ಧಶತಕ ಬಾರಿಸುವ ಮೂಲಕ ಕೆಎಲ್ ರಾಹುಲ್ ವಿಶ್ವದಾಖಲೆಯನ್ನು ಸರಿಗಟ್ಟಿದರು. ಎವರ್ಟನ್ ವೀಕ್ಸ್, ಆಂಡಿ ಫ್ಲವರ್, ಶಿವನಾರಾಯಣ್ ಚಂದ್ರಪಾಲ್, ಕುಮಾರ ಸಂಗಕ್ಕರ ಹಾಗೂ ಕ್ರಿಸ್ ರೋಜರ್ಸ್ ಕೂಡ ಟೆಸ್ಟ್​ನಲ್ಲಿ ಸತತ 7 ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ಕ್ರಿಸ್ ರೋಜರ್ಸ್ ಹಾಗೂ ಕೆಎಲ್ ರಾಹುಲ್ ಮಾತ್ರವೇ, ತಮ್ಮ 7 ಅರ್ಧಶತಕಗಳ ಪೈಕಿ ಯಾವೊಂದನ್ನೂ ಶತಕವನ್ನಾಗಿ ಪರಿವರ್ತಿಸಿಲ್ಲ.

***

ಭಾರತ ಪ್ರಥಮ ಇನಿಂಗ್ಸ್:

90 ಓವರ್​ಗಳಲ್ಲಿ 6 ವಿಕೆಟ್​ಗೆ 329

ಧವನ್ ಸಿ ಚಾಂಡಿಮಲ್ ಬಿ ಪುಷ್ಪಕುಮಾರ 119

ರಾಹುಲ್ ಸಿ ಕರುಣರತ್ನೆ ಬಿ ಪುಷ್ಪಕುಮಾರ 85

ಪೂಜಾರ ಸಿ ಮ್ಯಾಥ್ಯೂಸ್ ಬಿ ಸಂಡಕನ್ 8

ಕೊಹ್ಲಿ ಸಿ ಕರುಣರತ್ನೆ ಬಿ ಸಂಡಕನ್ 42

ರಹಾನೆ ಬಿ ಪುಷ್ಪಕುಮಾರ 17

ಆರ್. ಅಶ್ವಿನ್ ಸಿ ಡಿಕ್​ವೆಲ್ಲಾ ಬಿ ಫೆರ್ನಾಂಡೊ 31

ವೃದ್ಧಿಮಾನ್ ಸಾಹ ಬ್ಯಾಟಿಂಗ್ 13

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 1

ಇತರೆ: 13, ವಿಕೆಟ್ ಪತನ: 1-188, 2-219, 3-229, 4-264, 5-296, 6-322. ಬೌಲಿಂಗ್: ವಿಶ್ವ ಫೆರ್ನಾಂಡೋ 19-2-68-1, ಲಹಿರು ಕುಮಾರ 15-1-67-0, ಕರುಣರತ್ನೆ 5-0-23-0, ದಿಲ್ರುವಾನ್ ಪೆರೇರಾ 8-1-36-0, ಸಂಡಕನ್ 25-2-84-2, ಪುಷ್ಪಕುಮಾರ 18-2-40-3.

***

ಆಧರಿಸಿದ ಕೊಹ್ಲಿ, ಅಶ್ವಿನ್

ಧವನ್ ಔಟಾದ ಮೊತ್ತಕ್ಕೆ 10 ರನ್ ಸೇರಿಸುವ ವೇಳೆಗೆ ಸರಣಿಯಲ್ಲಿ ಶ್ರೀಲಂಕಾಕ್ಕೆ ಮಗ್ಗುಲಮುಳ್ಳಾಗಿ ಕಾಡಿದ್ದ ಚೇತೇಶ್ವರ ಪೂಜಾರ (8) 33 ಎಸೆತ ಎದುರಿಸಿ ಔಟಾದರು. ಈ ಅಮೂಲ್ಯ ವಿಕೆಟ್​ಅನ್ನು ಸಂಡಕನ್ ಪಡೆದುಕೊಡರು. ಅಜಿಂಕ್ಯ ರಹಾನೆ (17 ರನ್, 48 ಎಸೆತ, 1 ಬೌಂಡರಿ) ಕ್ರೀಸ್​ಗೆ ಕಚ್ಚಿಕೊಂಡರು ಎನ್ನುವ ಹಂತದಲ್ಲಿಯೇ, ಯಾವುದೇ ತಿರುವು ಪಡೆದುಕೊಳ್ಳದೇ ನೇರವಾಗಿ ಬಂದ ಎಸೆತದಲ್ಲಿ ರಹಾನೆ ಬೌಲ್ಡ್ ಆದರು. ಆ ಮೂಲಕ ಪುಷ್ಪಕುಮಾರ 3ನೇ ವಿಕೆಟ್ ಉರುಳಿಸಿದರು. ಇನ್ನೊಂದು ತುದಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ (42ರನ್, 84 ಎಸೆತ, 3 ಬೌಂಡರಿ) ದಾಳಿಯನ್ನು ವಿಶ್ವಾಸದಲ್ಲಿ ಎದುರಿಸಿದ್ದರಿಂದ ಅಶ್ವಿನ್ 5ನೇ ವಿಕೆಟ್​ಗೆ 32 ರನ್​ಗಳ ಜತೆಯಾಟವಾಡಿದರು. ಕೊನೆಯ ಒಂದು ಗಂಟೆಯ ಆಟವಿದ್ದ ವೇಳೆ ಕೊಹ್ಲಿ ಔಟಾದರೆ, ವೃದ್ಧಿಮಾನ್ ಸಾಹ ಜತೆ 26 ರನ್ ಜತೆಯಾಟವಾಡಿದ ಆರ್.ಅಶ್ವಿನ್ (31 ರನ್, 75 ಎಸೆತ, 1 ಬೌಂಡರಿ) ದಿನದ ಕೊನೆಯ ಬ್ಯಾಟ್ಸ್​ಮನ್ ಆಗಿ ನಿರ್ಗಮಿಸಿದರು.

Leave a Reply

Your email address will not be published. Required fields are marked *

Back To Top