Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :

ಆಯುರ್ವೆದಕ್ಕೆ ಗೌರವ ತಂದ ಎಸ್​ಡಿಎಂ ಕಾಲೇಜುಗಳು

Saturday, 20.05.2017, 3:00 AM       No Comments

ಹಾಸನ: ಆಯುರ್ವೆದ ವೈದ್ಯಕೀಯ ವಿಜ್ಞಾನಕ್ಕೆ ಸಲ್ಲಬೇಕಾದ ಗೌರವ ದಕ್ಕಿಸಿಕೊಡುವ ಸಲುವಾಗಿ ನಮ್ಮ ಸಂಸ್ಥೆ ಆರಂಭಿಸಿದ ಆಯುರ್ವೆದ ಕಾಲೇಜುಗಳು ತಮ್ಮ ಗುರಿ ಸಾಧಿಸುವಲ್ಲಿ ಸಫಲವಾಗಿವೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ನಗರದ ಎಸ್​ಡಿಎಂ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಬೆಳ್ಳಿ ಮಹೋತ್ಸವ ಹಾಗೂ ಯೋಗಕ್ಷೇಮ ಆಯುರ್ವೆದ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಆಯುರ್ವೆದವನ್ನು ಮೂಢ ನಂಬಿಕೆ, ಅವೈಜ್ಞಾನಿಕ ಪದ್ಧತಿ ಎಂದು ಮೂದಲಿಸುತ್ತಿದ್ದರು. ಆಯುರ್ವೆದ ವೈದ್ಯರನ್ನು ಅಳಲೆಕಾಯಿ ಪಂಡಿತ ಎಂದು ಛೇಡಿಸುತ್ತಿದ್ದರು. ಅವರ ವಿವಾಹಕ್ಕೆ ಹೆಣ್ಣು ದೊರೆಯುತ್ತಿರಲಿಲ್ಲ ಎಂದು ಸ್ಮರಿಸಿದರು. 1972ರಲ್ಲಿ ಉಡುಪಿಯ ಆಯುರ್ವೆದ ಆಸ್ಪತ್ರೆಯ ನಿರ್ವಹಣೆಯನ್ನು ನಮ್ಮ ಸಂಸ್ಥೆ ಒಪ್ಪಿಕೊಳ್ಳುವ ಮೂಲಕ ಆಯುರ್ವೆದ ವೈದ್ಯ ವಿಜ್ಞಾನಕ್ಕೆ ದೊರೆಯಬೇಕಾದ ಗೌರವ ದೊರಕಿಸಿತು. ಇಂದು ಹಾಸನ, ಬೆಂಗಳೂರಿನಲ್ಲಿ ಆಯುರ್ವೆದ ಕಾಲೇಜು, ಆಸ್ಪತ್ರೆ ಜನರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಉತ್ತಮ ಹೆಸರು ಸಂಪಾದಿಸಿವೆ. ಉಡುಪಿಯಲ್ಲಿ ಆಯುರ್ವೆದ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು, ಕೇಂದ್ರ ಸರ್ಕಾರ 5 ಕೋಟಿ ರೂ. ಪ್ರೋತ್ಸಾಹ ಧನ ನೀಡಿದೆ. ಇದಕ್ಕೆ ನಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಪ್ರಾಂಶುಪಾಲರು, ವೈದ್ಯರು, ಸಿಬ್ಬಂದಿ ಶ್ರಮ ಕಾರಣ ಎಂದು ಶ್ಲಾಘಿಸಿದರು.

ಎಚ್​ಡಿಡಿ, ರಮೇಶ್​ಕುಮಾರ್ ಪರಸ್ಪರ ಗುಣಗಾನ

ನಗರದ ಎಸ್​ಡಿಎಂ ಆಯುರ್ವೆದ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆ ಬೆಳ್ಳಿ ಮಹೋತ್ಸವ ಹಾಗೂ ಯೋಗಕ್ಷೇಮ ಆಯುರ್ವೆದ ಕೇಂದ್ರ ಉದ್ಘಾಟನಾ ಸಮಾರಂಭ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಆರೋಗ್ಯ ಸಚಿವ ರಮೇಶ್​ಕುಮಾರ್ ಪರಸ್ಪರ ಗುಣಗಾನಕ್ಕೆ ಸಾಕ್ಷಿಯಾಯಿತು. ತಮ್ಮ ಭಾಷಣದಲ್ಲಿ ರಮೇಶ್​ಕುಮಾರ್ ಹೆಸರು ಪ್ರಸ್ತಾಪಿಸಿದ ದೇವೇಗೌಡ, ಹಿಂದೆ ರಮೇಶ್​ಕುಮಾರ್ ನನ್ನ ಒಡನಾಡಿಯಾಗಿದ್ದವರು. ಉತ್ತಮ ಕೆಲಸಗಾರ. ಆರೋಗ್ಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇದಕ್ಕೆ ಪ್ರತಿಯಾಗಿ ತಮ್ಮ ಭಾಷಣದ ಆರಂಭದಲ್ಲಿಯೇ ದೇವೇಗೌಡರಿಗೆ ಕೃತಜ್ಞತೆ ಹೇಳಿದ ರಮೇಶ್​ಕುಮಾರ್, ಯಾವುದೇ ಒಂದು ಹಂತ ದಾಟಿದ ಮೇಲೆ ಕೆಲವರು ಒಂದು ಪಕ್ಷ, ಕ್ಷೇತ್ರಕ್ಕೆ ಸೀಮಿತವಾಗುವುದಿಲ್ಲ. ದೇವೇಗೌಡರೂ ಹಾಗೆಯೇ, ಅವರು ನಮ್ಮ ರಾಜ್ಯದ ಆಸ್ತಿ, ಇದು ನಾನು ಗೌಡರ ಮೇಲಿಟ್ಟಿರುವ ಗೌರವ ಭಾವನೆ ಎಂದರು.

Leave a Reply

Your email address will not be published. Required fields are marked *

Back To Top