Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಆಫ್ರಿಕಾದ ಕಿಲಿಮಂಜಾರೋ ಏರಿದ ನಂದಿತಾ ನಾಗನಗೌಡರ್

Monday, 02.10.2017, 3:07 AM       No Comments

ಹುಬ್ಬಳ್ಳಿ: ಈಗಾಗಲೇ ಜಗತ್ತಿನ ಅತಿ ಎತ್ತರದ ಎರಡು ಶಿಖರ ಏರಿರುವ ಇಲ್ಲಿಯ ಯುವತಿ ನಂದಿತಾ ನಾಗನಗೌಡರ್, ಇತ್ತೀಚೆಗಷ್ಟೆ ಆಫ್ರಿಕಾದ ಎತ್ತರದ ಪರ್ವತ ಕಿಲಿಮಂಜಾರೋವನ್ನು ಏರಿ ಭಾರತದ ಧ್ವಜ ಹಾರಿಸಿ ಬಂದಿದ್ದಾರೆ.

ಇಂಜಿನಿಯರಿಂಗ್, ಎಂಬಿಎ ಓದಿ ಇಂಗ್ಲೆಂಡ್​ನಲ್ಲಿ ಎರಡು ವರ್ಷ ಉನ್ನತ ಉದ್ಯೋಗ ಮಾಡಿ 2016ರಲ್ಲಿ ಸ್ವದೇಶಕ್ಕೆ ವಾಪಸಾದ ಅವರು, ಕಳೆದೊಂದು ವರ್ಷದಲ್ಲಿ ಹಿಮಾಲಯದ ಸೌತ್ ಕೊಲ್ ಹಾಗೂ ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಕಾರಸನ್ಸ್ ಪಿರಮಿಡ್ ಅನ್ನು ಹತ್ತಿದ್ದರು. ಕಿಲಿಮಂಜಾರೋ ಸೇರಿ ಈ ಮೂರೂ ಪರ್ವತಗಳನ್ನು ಏರಿದ ಕರ್ನಾಟಕದ ಮೊದಲ ಮಹಿಳೆ ಅವರಾಗಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅನುಭವ ಹಂಚಿಕೊಂಡ ನಂದಿತಾ, ಆಫ್ರಿಕಾ ಖಂಡದ ತಾಂಜಾನಿಯಾ ದೇಶದ ಕಿಲಿಮಂಜಾರೋ ಪರ್ವತ 19,341 ಅಡಿ ಎತ್ತರವಿದೆ. ಈ ಸಲದ ತಂಡದಲ್ಲಿ ಪಂಜಾಬ್​ನ ಒಬ್ಬ ಯುವಕ ಹಾಗೂ ನಾನು ಮಾತ್ರ ಭಾರತದವರಾಗಿದ್ದೆವು. ಸೆ. 15ರಂದು ಪರ್ವತಾರೋಹಣ ಆರಂಭಿಸಿ 20ರಂದು ಶಿಖರದ ತುತ್ತತುದಿಗೆ ತಲುಪಿದೆವು. ಅಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಿಸಿದಾಗ ಸಾರ್ಥಕ ಭಾವ ಮೂಡಿತು ಎಂದು ಹೇಳಿದರು.

ಕಿಲಿಮಂಜಾರೋ ಜ್ವಾಲಾಮುಖಿ ಪರ್ವತ ಎಂದೇ ಪ್ರಸಿದ್ಧಿಯಾಗಿದೆ. ಭೂಮಧ್ಯ ರೇಖೆಯಲ್ಲೇ ಬರುವುದರಿಂದ ಅತಿ ಹೆಚ್ಚು ಬಿಸಿಲು, ಸೆಕೆ ಇದೆ. ಸುತ್ತಲೂ ಹಿಮ ಪರ್ವತಗಳಿರುವುದರಿಂದ ದಿಢೀರ್ ಬದಲಾವಣೆಯಾಗಿ ಅಪಾರ ಚಳಿಯೂ ಆಗುತ್ತದೆ. ದಿನಕ್ಕೆ 12ರಿಂದ 14 ಗಂಟೆ ಪರ್ವತಾರೋಹಣ, ಕೆಲವು ಗಂಟೆ ತಯಾರಿ, 4 ತಾಸು ಮಾತ್ರ ನಿದ್ರೆಗೆ ಸಿಗುತ್ತದೆ. ಈ ಪರ್ವತ ಏರಲು 4 ಲಕ್ಷ ರೂ. ಖರ್ಚು ಬಂದಿದೆ ಎಂದು ತಿಳಿಸಿದರು.

ಸರ್ಕಾರದ ನೆರವು ಕೋರಿಕೆ

ಎಲ್ಲ ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಮಹದಾಸೆ ಇದೆ. ಈ ನಿಟ್ಟಿನಲ್ಲಿ ಮುಂದಿನ ಗುರಿ ಅಂಟಾರ್ಕಟಿಕದ ವಿನ್ಸನ್ ಮ್ಯಾಸಿಫ್ ಪರ್ವತ. ಇದಕ್ಕೆ ತುಂಬಾ ಹಣ ಬೇಕು. ವಿವಿಧ ಕ್ರೀಡೆಗಳಿಗೆ ನೆರವು ನೀಡಿದಂತೆ ಪರ್ವತಾರೋಹಣಕ್ಕೂ ಸರ್ಕಾರ ಸಹಾಯ ಮಾಡಬೇಕು. ರಾಜ್ಯ ಮತ್ತು ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪ್ರೋತ್ಸಾಹಿಸಬೇಕು ಎಂದು ನಂದಿತಾ ನಾಗನಗೌಡರ್ ಕೋರಿದರು.

Leave a Reply

Your email address will not be published. Required fields are marked *

Back To Top