Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ಆಫ್ರಿಕಾಕ್ಕೆ ಜಯ ತಂದ ರಬಾಡ

Tuesday, 13.03.2018, 3:03 AM       No Comments

ಪೋರ್ಟ್ ಎಲಿಜಬೆತ್: ವೇಗಿ ಕಗಿಸೊ ರಬಾಡ (54ಕ್ಕೆ 6) ಮಾರಕ ದಾಳಿಯ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದೆ. ಇದರಿಂದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿರುವ ಫಾಫ್ ಡು ಪ್ಲೆಸಿಸ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ, 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 5 ವಿಕೆಟ್​ಗೆ 180 ರನ್​ಗಳಿಂದ ಸೋಮವಾರ 4ನೇ ದಿನದಾಟ ಮುಂದುವರಿಸಿದ ಆಸೀಸ್ ತಂಡ ರಬಾಡ ದಾಳಿಗೆ ನಲುಗಿ 239 ರನ್​ಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇದರಿಂದ 101 ರನ್​ಗಳ ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕಾ 22.5 ಓವರ್​ಗಳಲ್ಲಿ 4 ವಿಕೆಟ್​ಗೆ 102 ರನ್ ದಾಖಲಿಸಿ ಜಯಿಸಿತು. ಸರಣಿಯ 3ನೇ ಟೆಸ್ಟ್ ಮಾರ್ಚ್ 22ರಿಂದ ಕೇಪ್​ಟೌನ್​ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ: 243 ಮತ್ತು 239 (ಮಿಚೆಲ್ ಮಾರ್ಷ್ 45, ಟಿಮ್ ಪೇನ್ 28, ರಬಾಡ 54ಕ್ಕೆ 6, ಎನ್​ಗಿಡಿ 24ಕ್ಕೆ 2), ದಕ್ಷಿಣ ಆಫ್ರಿಕಾ: 382 ಮತ್ತು 4 ವಿಕೆಟ್​ಗೆ 102 (ಎಬಿಡಿ ವಿಲಿಯರ್ಸ್ 28, ಹಾಶಿಂ ಆಮ್ಲ 27, ಮಾರ್ಕ್ರಮ್ 21, ಡೀನ್ ಎಲ್ಗಾರ್ 5, ಪ್ಲೆಸಿಸ್2*, ಬ್ರುಯಿನ್ 15*, ನಥಾನ್ ಲ್ಯಾನ್ 44ಕ್ಕೆ 2, ಹ್ಯಾಸಲ್​ವುಡ್ 26ಕ್ಕೆ 1). -ಏಜೆನ್ಸೀಸ್

02 – ರಬಾಡ ಟೆಸ್ಟ್ ಪಂದ್ಯ ವೊಂದರಲ್ಲಿ ಅತ್ಯಧಿಕ 4ನೇ ಬಾರಿ 10 ವಿಕೆಟ್ ಗೊಂಚಲು ಪಡೆದ ಆಫ್ರಿಕಾದ 2ನೇ ಬೌಲರ್ ಎನಿಸಿಕೊಂಡರು. ಡೇಲ್ ಸ್ಟೈನ್ 5 ಬಾರಿ ಈ ಸಾಧನೆ ಮಾಡಿದರೆ, ಮಖಾಯ್ ಎನ್​ಟಿನಿ 4 ಬಾರಿ 10 ವಿಕೆಟ್ ಕಬಳಿಸಿದ್ದಾರೆ.

ರಬಾಡಗೆ ನಿಷೇಧ ಭೀತಿ

ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡಗೆ ಐಸಿಸಿ 2 ಪಂದ್ಯಗಳ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ಮೊದಲು ಆಸೀಸ್ ನಾಯಕ ಸ್ಟೀವನ್ ಸ್ಮಿತ್​ರನ್ನು ಭುಜದಿಂದ ತಳ್ಳಿದ್ದ ರಬಾಡ ಭಾನುವಾರ 3ನೇ ದಿನದಾಟ ಆರಂಭಿಕ ಡೇವಿಡ್ ವಾರ್ನರ್​ರನ್ನು ಬೌಲ್ಡ್ ಮಾಡಿದ ಬಳಿಕ ಪೆವಿಲಿಯನ್​ನತ್ತ ದಾರಿ ತೋರಿಸಿ ಚಪ್ಪಾಳೆ ತಟ್ಟಿದ್ದರು. ಇದೀಗ ಇದನ್ನೂ ಗಮನಿಸಿರುವ ಐಸಿಸಿ, ರಬಾಡಗೆ ನಿಷೇಧ ಹೇರುವುದು ಬಹುತೇಕ ಖಚಿತವಾಗಿದ್ದು, ಕೊನೇ 2 ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಪ್ರಮುಖ ವೇಗಿಯ ಸೇವೆಯನ್ನು ಕಳೆದುಕೊಳ್ಳಲಿದೆ.

Leave a Reply

Your email address will not be published. Required fields are marked *

Back To Top