Friday, 19th October 2018  

Vijayavani

 ಹಾಲು, ತುಪ್ಪ ಮಾರೋ ನೆಪದಲ್ಲಿ ಬರ್ತಾನೆ -ಒಂಟಿ ಮನೆಗಳಲ್ಲಿ ಚಿನ್ನ ಎಗರಿಸ್ತಾನೆ - ಸಿಕ್ಕಿಬಿದ್ದ ಚೋರ ಈಗ ಕಂಬಿ ಎಣಿಸ್ತಾನೆ         ಗೃಹಿಣಿ ಜತೆ ಅಂಕಲ್ ಸ್ನೇಹ ‘ಸಂಬಂಧ’ -ಬೇಡ ಅಂದಿದ್ದಕ್ಕೆ 18 ಬಾರಿ ಇರಿದ -ಚಾಕು ಹಿಡಿದೇ ಪೊಲೀಸರಿಗೆ ಶರಣಾದ        ಬಸ್ಸಲ್ಲಿ ಹೋಗೋ ಮಹಿಳೆಯರೇ ಹುಷಾರು -ನಿಮ್ಮ ಕೂದಲನ್ನೇ ಕತ್ತರಿಸ್ತಾರೆ ಚೋರರು - ಖದೀಮನಿಗೆ ಗ್ರಹಚಾರ ಬಿಡಿಸಿದ ಜನರು         ಸರ್ಕಾರಿ ವೈದ್ಯರ ಅಟೆಂಡೆನ್ಸ್ ಮೇಲೆ ಕಣ್ಣು -ಹಾಜರಾತಿಗೆ ಆಧಾರ್ ಕಡ್ಡಾಯ- ರೂಲ್ಸ್ ತರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ        ರಾಜಧಾನಿಯಲ್ಲಿ ಆಯುಧ ಪೂಜೆ ಸಡಗರ -ಮಾರುಕಟ್ಟೆಗಳಲ್ಲಿ ಜೋರಾಯ್ತು ಹೂವು, ಹಣ್ಣು ವ್ಯಾಪಾರ -ಪೊಲೀಸ್ ಠಾಣೆಗಳಲ್ಲೂ ಪೂಜೆ       
Breaking News

ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಸಾಥ್!

Sunday, 03.12.2017, 3:02 AM       No Comments

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಪರೇಷನ್ ಕಮಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಸೋಲಿಸಿದ್ದರು. ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮುನ್ನ ಯಾವ ಯಾವ ಪಕ್ಷದ ಬಾಗಿಲು ತಟ್ಟಿದ್ದರು ಎನ್ನುವುದು ಗೊತ್ತಿದೆ. ಅವರ ಮಧ್ಯವರ್ತಿಗಳೇ ಇದನ್ನು ಬಯಲು ಮಾಡುತ್ತಾರೆ ಎಂದು ಸುದ್ದಿಗೋಷ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು.

ಕಾಂಗ್ರೆಸ್ ದಲಿತ ನಾಯಕರನ್ನ ಸಿದ್ದರಾಮಯ್ಯ ತುಳಿದು ಹಾಕಿದ್ದಾರೆ. ಕಾಂಗ್ರೆಸ್ ಕಟ್ಟಿದ ಖರ್ಗೆ, ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ದೌರ್ಬಲ್ಯವನ್ನೇ ನೆಪ ಮಾಡಿಕೊಂಡು ನಾನೇ ಮುಂದಿನ ದಸರಾ ಉದ್ಘಾಟನೆ ಮಾಡುತ್ತೇನೆ ಎಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಿಜವಾಗಿ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಹಾಕಿದ್ದು ನಾನು. ಅಲ್ಪಸಂಖ್ಯಾತರಿಗೆ ಜೆಡಿಎಸ್ ಏನೇನು ಕೊಡುಗೆ ನೀಡಿದ್ದೇವೆ ಎಂದು ತುಮಕೂರು ಸಮಾವೇಶದಲ್ಲಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡವಿದೆ. ಕಳೆದ ಬಾರಿ ಅನಿತಾ ಕುಮಾರಸ್ವಾಮಿ ಕಡಿಮೆ ಅಂತರದಲ್ಲಿ ಸೋತ್ತಿದ್ದರು. ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾದರೆ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸಬೇಕಾಗುತ್ತದೆ ಎಂದರು. ನಿಖಿಲ್ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ಪಿಎ ಹಾಗೂ ಬಿಎಸ್​ವೈ ಪಿಎಗಳ ಕಿತ್ತಾಟ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋಗಲು ಯಾಕೆ ಬಿಟ್ಟರು ಎನ್ನುವುದು ಗೊತ್ತಿಲ್ಲ. ಇಬ್ಬರು ಕುಳಿತು 5 ನಿಮಿಷದಲ್ಲಿ ಸಮಸ್ಯೆ ಪರಿಹರಿಸಬಹುದಿತ್ತು. ಈಗ ಕೆಂಪಯ್ಯ ಮಧ್ಯ ಪ್ರವೇಶಿಸಿದ್ದಾರೆ. ಕೆಂಪಯ್ಯ ಇರೋದೇ ಕಾನೂನು ಬಾಹಿರ ಕೆಲಸ ಮಾಡಲು ಎಂದು ಲೇವಡಿ ಮಾಡಿದರು.

ಸಿಎಂ ಹಗಲು ದರೋಡೆ

ರೀಡು ಹೆಸರಲ್ಲಿ ಸಿಎಂ ಹಗಲು ದರೋಡೆ ನಡೆಸಿದ್ದಾರೆ. ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಅಧಿಕಾರಿಗಳನ್ನು ಗುರಿಯಾಗಿಸಿದ್ದಾರೆ. ಆದರೆ ಅರ್ಕಾವತಿ ಬಡವಾಣೆ ಪ್ರಕರಣದಲ್ಲಿ ಯಾವ ಶಾಸಕರಿಗೆ ಲಾಭ ಮಾಡಿ ಕೊಟ್ಟಿದ್ದಾರೆ, ಸಿದ್ದರಾಮಯ್ಯ ಪಾತ್ರವೇನು. ಅವರ ಆಪ್ತರ ಹಗರಣಗಳೇನು ಎಂದು ಶೀಘ್ರವೇ ಬಹಿರಂಗಪಡಿಸುತ್ತೇನೆ. ಜಕ್ಕೂರಿನಲ್ಲಿ ಸಚಿವರೊಬ್ಬರ ಅರಣ್ಯ ಭೂಮಿ ಒತ್ತುವರಿಯಾಗಿರುವುದನ್ನು ವಾಪಸ್ಸು ಪಡೆದಿಲ್ಲ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

ಡಿಸೆಂಬರ್ ಅಂತ್ಯದಲ್ಲಿ ಪಟ್ಟಿ ಪ್ರಕಟ

ರಾಜ್ಯದ 224 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡುತ್ತೇವೆ. ಬಿಜೆಪಿ, ಕಾಂಗ್ರೆಸ್ ಪಟ್ಟಿಗಿಂತಲೂ ಮುಂಚೆಯೇ ಜೆಡಿಎಸ್ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಕಳೆದ ಒಂದು ವರ್ಷದಿಂದಲೂ ಅಭ್ಯರ್ಥಿ ಪಟ್ಟಿ ಬಿಡುಗಡೆಗೆ ಸಂಬಂಧಿಸಿ ಎಚ್​ಡಿಕೆ ಹೇಳಿಕೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top