Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಆನ್​ಲೈನ್​ನಲ್ಲೇ ಆಸ್ತಿ ನೋಂದಣಿ

Saturday, 30.06.2018, 3:02 AM       No Comments

| ಹರೀಶ್ ಬೇಲೂರು 

ಆಸ್ತಿ, ಕ್ರಯ ಪತ್ರ, ಸ್ಥಿರಾಸ್ತಿಗಳ ಋಣಭಾರ, ದಸ್ತಾವೇಜುಗಳ ದೃಢೀಕೃತ ನೊಂದಣಿಗೆ ಇನ್ಮುಂದೆ ಉಪನೋಂದಣಿ ಕಚೇರಿಯಲ್ಲಿ ದಿನಗಟ್ಟಲೆ ಕಾಯಬೇಕಾಗಿಲ್ಲ. ಮನೆಯಲ್ಲೇ ಕುಳಿತು ನಿಮ್ಮ ದಾಖಲೆಗಳನ್ನು ಆನ್​ಲೈನ್​ನಲ್ಲಿಯೇ ನೋಂದಾಯಿಸಿಕೊಳ್ಳಬಹುದು. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ kaverionline.karnataka.gov.in ವೆಬ್​ಸೈಟ್​ಗೆ ಭೇಟಿ ನೀಡಿದರೆ ಹೊಸ ಬಳಕೆದಾರರಿಗಾಗಿ ನೋಂದಾಯಿಸಿ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ವೈಯಕ್ತಿಕ ವಿವರ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇನ್ನಿತರ ಮಾಹಿತಿಗಳನ್ನು ನಮೂದಿಸಿ ಓಕೆ ಮಾಡಬೇಕು. ಒಂದು ವೇಳೆ ಎಲ್ಲ ಮಾಹಿತಿ ಸರಿ ಇದ್ದರೆ ತಕ್ಷಣ ಮೊಬೈಲ್ ಸಂಖ್ಯೆಗೆ ಪಾಸ್​ವರ್ಡ್ ಹಾಗೂ ಐಡಿ ಬರುತ್ತದೆ.

ಐಡಿ ಮತ್ತು ಪಾಸ್​ವರ್ಡ್​ಗಳನ್ನು ಲಾಗಿನ್​ನಲ್ಲಿ ನಮೂದಿಸಿದರೆ ನಿಮ್ಮ ಖಾತೆ ಓಪನ್ ಆಗುತ್ತದೆ. ಆಮೇಲೆ ನೊಂದಾಯಿತ ದಾಖಲೆಗಳ ಸೂಚ್ಯಂಕದ ಆಯ್ಕೆ ಕ್ಲಿಕ್ ಮಾಡಿದರೆ ಅದರಲ್ಲಿ ಆಸ್ತಿ, ಕ್ರಯ ಪತ್ರ, ಸ್ಥಿರಾಸ್ತಿಗಳ ಋಣಭಾರ, ದಸ್ತಾವೇಜುಗಳ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಇದರಿಂದಾಗಿ ಉಪ ನೋಂದಣಿ ಕಚೇರಿಗಳಿಗೆ ದಾಖಲೆಗಳ ನೋಂದಣಿಗಾಗಿ ದಿನಗಟ್ಟಲೆ ಕಾಯುವುದು ತಪ್ಪಲಿದೆ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದುದರಿಂದ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ. ಅಲ್ಲದೆ, ಬೆಂಗಳೂರು ಸೇರಿ ರಾಜ್ಯಾದ್ಯಂತ 250 ಕ್ಕೂ ಹೆಚ್ಚು ಉಪ ನೋಂದಣಿ ಕಚೇರಿಗಳು ಇವೆ.

ವಿವಾಹ ನೋಂದಣಿ

ಹೊಸದಾಗಿ ಮದುವೆಯಾಗಿರುವ ವಧು-ವರರು ವಿವಾಹ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ದಂಪತಿಗಳು ವಿಳಾಸ, ವಿವಾಹ ನೆರವೇರಿದ ಸ್ಥಳದ ಮಾಹಿತಿಗಳನ್ನು ಆಯಾ ಇಲಾಖೆಯ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ ನೋಂದಾಯಿಸಿಕೊಂಡರೆ ಅಧಿಕಾರಿಗಳು ಮ್ಯಾರೇಜ್ ಸರ್ಟಿಫಿಕೇಟ್ ನೀಡುತ್ತಾರೆ. ವಿದೇಶ ಪ್ರವಾಸ ಕೈಗೊಳ್ಳುವ ದಂಪತಿಗಳಿಗೆ ಇದು ಅನುಕೂಲವಾಗುತ್ತದೆ.

ಪೂರ್ವ ಡೇಟಾ ಎಂಟ್ರಿ

ಸಾರ್ವಜನಿಕರು ನೋಂದಾಯಿಸಿದ ಆಸ್ತಿಯ ಎಲ್ಲ ವಿವರಗಳನ್ನು ನೋಂದಣಿಯ ಮುನ್ನ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಏನಾದರೂ ತಪ್ಪು ಕಂಡುಬಂದರೆ ಅವುಗಳನ್ನು ಸರಿಪಡಿಸಿ ಪುನಃ ದಾಖಲೆಗಳನ್ನು ಅಪ್​ಲೋಡ್

ಮಾಡಲು ಅರ್ಜಿದಾರರಿಗೆ ಅವಕಾಶವಿರುತ್ತದೆ. ಆನ್​ಲೈನ್​ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಶುಲ್ಕ ಪಡೆದ ಬಳಿಕ ಅಧಿಕಾರಿಗಳು ನೋಂದಣಿ ದಿನಾಂಕವನ್ನು ಮುಂಗಡವಾಗಿ ನಿಗದಿ ಮಾಡುತ್ತಾರೆ. ಅರ್ಜಿದಾರರು ಕಚೇರಿಗೆ ತೆರಳಿ ದಾಖಲೆಗಳನ್ನು ನೋಂದಾಯಿಸಿಕೊಳ್ಳಬೇಕು.

ಆಸ್ತಿ, ಕ್ರಯ ಪತ್ರ, ಸ್ಥಿರಾಸ್ತಿಗಳ ಋಣಭಾರ, ದಸ್ತಾವೇಜುಗಳ ದೃಢೀಕೃತ ನೊಂದಣಿಗೆ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಇಲಾಖೆಯಿಂದ ಆನ್​ಲೈನ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದು, ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

-ಡಾ.ಕೆ.ವಿ.ತ್ರಿಲೋಕ್ ಚಂದ್ರ, ಆಯುಕ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ

Leave a Reply

Your email address will not be published. Required fields are marked *

Back To Top