Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಆನ್​ಲೈನ್​ನಲ್ಲಿ ಇಳಕಲ್ಲ ಸೀರೆ

Sunday, 10.09.2017, 3:02 AM       No Comments

ಬಾಗಲಕೋಟೆ: ನಾರಿಯರ ಮನಗೆದ್ದಿರುವ ಇಳಕಲ್ಲ ಸೀರೆ ಖರೀದಿಗೆ ಗ್ರಾಹಕರು ಇನ್ಮುಂದೆ ಜವಳಿ ಅಂಗಡಿಗೇ ಹೋಗಬೇಕಿಲ್ಲ. ಗ್ರಾಹಕರಿದ್ದಲ್ಲಿಗೆ ಉತ್ಪನ್ನ ತಲುಪಿಸುವ ಆನ್​ಲೈನ್ ಮಾರುಕಟ್ಟೆಗೂ ಇಳಕಲ್ಲ ಸೀರೆ ಲಗ್ಗೆ ಇಟ್ಟಿದೆ.

ಜಿಲ್ಲೆಯ ಇಳಕಲ್ಲ ನಗರದ ಜವಳಿ ಉದ್ಯಮಿ ವಿಜಯಕುಮಾರ ಗುಳೇದ ಅವರ ಹೊಸ ಪ್ರಯತ್ನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಪ್ರತಿನಿತ್ಯ ಆನ್​ಲೈನ್ ಮೂಲಕ 25 ರಿಂದ 30 ಸೀರೆ ಮಾರಾಟವಾಗುತ್ತಿವೆ.

ವಿಜಯಕುಮಾರ ಕುಟುಂಬ 145 ವರ್ಷದಿಂದ ಇಳಕಲ್ಲ ಸೀರೆ ಉದ್ಯಮದಲ್ಲಿ ತೊಡಗಿಕೊಂಡಿದೆ. ಆಧುನಿಕ ಹೊಡೆತಕ್ಕೆ ಸಿಲುಕಿ ಕೆಲ ವರ್ಷಗಳಿಂದ ಇಳಕಲ್ಲ ಸೀರೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಈ ಕುಟುಂಬ ತೀವ್ರ ಸಮಸ್ಯೆ ಎದುರಿಸಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿರುವ ಅನಿವಾಸಿ ಭಾರತೀಯರಿಂದ ಬೇಡಿಕೆ ಇದ್ದರೂ ಸೀರೆ ಪೂರೈಕೆ ಕಷ್ಟವಾಗಿತ್ತು. ಸೂಕ್ತ ಮಾರುಕಟ್ಟೆ ಇಲ್ಲದೆ ಉದ್ಯಮ ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.

ಆನ್​ಲೈನ್ ಮಾರುಕಟ್ಟೆಯಿಂದ ವಿವಿಧ ಉತ್ಪನ್ನಗಳು ಮನೆ ಮನೆಗೆ ತಲುಪುತ್ತಿರುವುದನ್ನು ಗಮನಿಸಿದ ವಿಜಯಕುಮಾರ, ಇಳಕಲ್ಲ ಸೀರೆಯನ್ನು ಆನ್​ಲೈನ್ ಮೂಲಕ ಗ್ರಾಹಕರಿಗೆ ತಾವೇಕೆ ತಲುಪಿಸಬಾರದು ಎಂದು ಯೋಚಿಸಿ ಅದಕ್ಕೆ ಹೊಸ ಮಾರುಕಟ್ಟೆ ಒದಗಿಸಿದ್ದರಿಂದ ಅವರಿಗೆ ಉತ್ತಮ ಆದಾಯ ಸಿಗುವಂತಾಗಿದೆ. ಪ್ರತಿ ವರ್ಷ 7 ರಿಂದ 8 ಸಾವಿರ ಸೀರೆಗಳನ್ನು ನೇಯ್ಗೆ ಮಾಡಿಸಿ ಮಾರಾಟ ಮಾಡುವ ಇವರಿಗೆ ಆನ್​ಲೈನ್ ಮಾರುಕಟ್ಟೆಯಿಂದಾಗಿ 2 ರಿಂದ 3 ಲಕ್ಷ ರೂ. ಆದಾಯ ಅಧಿಕವಾಗಿದೆ. ಮೊದಲು ಇಳಕಲ್ಲ ಸೀರೆಗೆ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಬಹುಬೇಡಿಕೆ ಇತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೂ ಸೀರೆ ಪೂರೈಕೆಯಾಗುತ್ತಿತ್ತು. ನಂತರ ಮಾರುಕಟ್ಟೆ ಕುಸಿದ ಪರಿಣಾಮ ಸೀರೆ ಮಾರಾಟ ಕಷ್ಟವಾಯಿತು. ಜನರಿಂದ ಬೇಡಿಕೆ ಇದ್ದರೂ ಮಾರುಕಟ್ಟೆಯಲ್ಲಿ ಸೀರೆ ಸುಲಭವಾಗಿ ದೊರೆಯುತ್ತಿರಲಿಲ್ಲ. ಅನಿವಾಸಿ ಭಾರತೀಯರು ಅವುಗಳನ್ನು ಖರೀದಿ ಮಾಡಲು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆನ್​ಲೈನ್ ಮಾರುಕಟ್ಟೆ ಆರಂಭಿಸಿದೆ ಎನ್ನುತ್ತಾರೆ ವಿಜಯಕುಮಾರ.

ಅಮೆರಿಕ, ಅರಬ್ ದೇಶಗಳು, ಸಿಂಗಾಪುರ ಸೇರಿ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಇದೀಗ ಇಳಕಲ್ ಸೀರೆ ಸಿಗುತ್ತಿವೆ. ವಿದೇಶಗಳಿಗೆ ಸ್ಪೀಡ್ ಪೋಸ್ಟ್, ದೇಶದ ಗ್ರಾಹಕರಿಗೆ ಕೋರಿಯರ್ ಮೂಲಕ ಸೀರೆ ತಲುಪಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

ವಿವಿಧ ವಿನ್ಯಾಸದಲ್ಲಿ ಸೀರೆ ಸಿದ್ಧಗೊಳಿಸಲಾಗಿದೆ. ಕೈಮಗ್ಗ ಸೀರೆಗಳಿಗೆ 900 ರಿಂದ 10 ಸಾವಿರ ರೂ., ಪವರ್ ಲೂಮ್ಂದ ನೇಯ್ದ ಸೀರೆಗಳಿಗೆ 400 ರಿಂದ 500 ರೂ. ನಿಗದಿಗೊಳಿಸಲಾಗಿದೆ. ಗುಣಮಟ್ಟದ ಸೀರೆಗಳ ತಯಾರಿಕೆಯಿಂದ ದಿನೇದಿನೆ ಬೇಡಿಕೆ ಹೆಚ್ಚುತ್ತಿದೆ.

ಜಾಲತಾಣದಲ್ಲಿ ಸೀರೆ

ಗೂಗಲ್​ನಲ್ಲಿ ಇಳಕಲ್ಲ ಸ್ಯಾರಿ ಎಂದು ಸರ್ಚ್ ಮಾಡಿದರೆ ವಿಜಯಕುಮಾರ ಅವರ ಅಂಗಡಿ ವಿಳಾಸ ದೊರೆಯುತ್ತದೆ. ಫೇಸ್​ಬುಕ್, ವಾಟ್ಸ್​ಆಪ್, ಇನ್​ಸ್ಟಾಗ್ರಾಂನಲ್ಲಿ ಪಿ.ಕೆ.ಗುಳೇದ ಎಂದು ಟೈಪ್ ಮಾಡಿದರೆ ಇಳಕಲ್ಲ ಸೀರೆಗಳ ಮಾಹಿತಿ ದೊರೆಯುತ್ತದೆ. ಇಷ್ಟವಾದ ಸೀರೆಗಳನ್ನು ಅಲ್ಲಿ ಬುಕ್ ಮಾಡಿದಲ್ಲಿ ಸ್ಟೀಡ್​ಪೋಸ್ಟ್, ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Leave a Reply

Your email address will not be published. Required fields are marked *

Back To Top