Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ಆನೇಕಲ್​ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

Tuesday, 14.03.2017, 10:33 AM       No Comments

ಆನೇಕಲ್: ಆನೇಕಲ್​ನ ಹೊಸೂರು ಮುಖ್ಯ ರಸ್ತೆಯ ಬಿಟಿಎಲ್ ಕಾಲೇಜು ಬಳಿ ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ದುಷ್ಕರ್ವಿುಗಳು ಬಿಜೆಪಿ ಮುಖಂಡ ಕಿತ್ತಗಾನಹಳ್ಳಿ ವಾಸು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಕಾರಿನಲ್ಲಿ ತೆರಳಿದ್ದ ಶ್ರೀನಿವಾಸು ಅವರನ್ನು ಅಡ್ಡಗಟ್ಟಿದ ದುಷ್ಕರ್ವಿುಗಳು ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಾಸು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶ್ರೀನಿವಾಸ್ ಅವರು ಆನೇಕಲ್ ತಾಲೂಕಿನ ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಸದಸ್ಯರಾಗಿದ್ದರು, ಇವರ ಪತ್ನಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದಾರೆ. ವಾಸು ಅವರು ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್​ಪಿ ಅಮಿತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top