Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಆತ್ಮಹತ್ಯೆ ಸುಳಿವು ನೀಡಿ ವ್ಯಾಪಾರಿ ನಾಪತ್ತೆ

Wednesday, 11.07.2018, 5:23 AM       No Comments

ರಾವಂದೂರು: ಗ್ರಾಮದ ವ್ಯಕ್ತಿಯೊಬ್ಬರು ಆತ್ಮಹತ್ಯೆಯ ಸುಳಿವು ನೀಡಿ ಮನೆಯಿಂದ ಕಾಣೆಯಾಗಿದ್ದಾರೆ.

ಬಟ್ಟೆ ಮತ್ತು ಚಿನ್ನ-ಬೆಳ್ಳಿ ವ್ಯಾಪಾರಿಯಾಗಿರುವ ಸುಖಾಲಾಲ್ ಅಲಿಯಾಸ್ ಸುರೇಶ್ ಜು.7 ರಿಂದ ನಾಪತ್ತೆಯಾಗಿದ್ದಾರೆ.

ಗ್ರಾಮದಲ್ಲಿ ‘ಪರ್ವಿನ್ ಟೆಕ್ಸ್​ಟೈಲ್ಸ್ ಮತ್ತು ಜುವೆಲ್ಲರ್ಸ್’ ಅಂಗಡಿ ನಡೆಸುತ್ತಿರುವ ಸುಖಾಲಾಲ್ ಅಲಿಯಾಸ್ ಸುರೇಶ್ ಅವರಿಗೆ ಪತ್ನಿಸುನೀತಾ, ಮಕ್ಕಳಾದ ಐಶ್ವರ್ಯ(10), ಅನುಷಾ(9), ರಾಶಿ (6) ಮತ್ತು ಮುಖೇಶ್ (1) ಇದ್ದಾರೆ.

ಜು.7 ರಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು, ಕೋರ್ಟ್ ಕೆಲಸಕ್ಕಾಗಿ ಮೈಸೂರಿಗೆ ಹೋಗಿ ಬರುವುದಾಗಿ ಪತ್ನಿಗೆ ತಿಳಿಸಿದ್ದರು. ಮಧ್ಯಾಹ್ನ ಕೋರ್ಟ್​ನಲ್ಲಿ ಇರುವುದಾಗಿ ದೂರವಾಣಿ ಕರೆ ಮಾಡಿ ಹೇಳಿದ್ದರು. ಆದರೆ, ಅಂದು ಮನೆಗೆ ಮರಳಲಿಲ್ಲ. ಮೊಬೈಲ್ ಕರೆಯನ್ನೂ ಸ್ವೀಕರಿಸಲಿಲ್ಲ. ಜು.8 ರಂದು ಸಂಜೆ ಪತ್ನಿಗೆ ವಾಟ್ಸ್​ಆಪ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.

‘ಸ್ವಾಮಿ ಮಾಸ್ಟರ್ ಎಂಬುವರಿಗೆ ನಾನು 11 ಲಕ್ಷ ರೂ. ಕೊಡಬೇಕಿತ್ತು. ಅದಕ್ಕಾಗಿ ಅವರು ನನ್ನ ಮನೆ ಮತ್ತು ಗೋಡೌನ್ ಬರೆಸಿಕೊಂಡು ಉಳಿಕೆ ಹಣ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಇದರಿಂದ ಮನನೊಂದಿದ್ದು, ಬದುಕಲಾಗದೆ ಬೇಸರದಿಂದ ಹೋಗುತ್ತಿದ್ದೇನೆ’ ಎಂಬುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಸಂಬಂಧಅವರ ಪತ್ನಿ ಸುನೀತಾ ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top