Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಆಜಾದಿ ಹೋರಾಟದ ಹೆಸರಲ್ಲಿ ಆಸ್ತಿ ಸಂಗ್ರಹ

Monday, 21.08.2017, 3:00 AM       No Comments

ನಮ್ಮ ದೇಶದ ಮುಕುಟಮಣಿ ಎನಿಸಿಕೊಂಡಿರುವ ‘ಜಮ್ಮು-ಕಾಶ್ಮೀರ’ದಲ್ಲಿ ಸ್ವಾತಂತ್ರ್ಯ ಅಥವಾ ‘ಆಜಾದಿ’ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿಗಳ ನಾಯಕರ ಅಸಲಿಯತ್ತು ಕಳೆದ ಕೆಲವು ತಿಂಗಳುಗಳಿಂದೀಚೆಗೆ ಒಂದೊಂದಾಗಿ ಅನಾವರಣಗೊಳ್ಳುತ್ತಿದೆ. ಇತ್ತೀಚೆಗಷ್ಟೆ ಪಾಕಿಸ್ತಾನದಿಂದ ಹವಾಲ ಹಣ ಈ ನಾಯಕರಿಗೆ ಪೂರೈಕೆಯಾಗುತ್ತಿರುವುದು ಬಹಿರಂಗವಾಗಿತ್ತು. ತರುವಾಯ ಇದೀಗ, ಈ ಪೈಕಿ 20 ನಾಯಕರು 200ಕ್ಕೂ ಹೆಚ್ಚು ಆಸ್ತಿಪಾಸ್ತಿ ಹೊಂದಿರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವರದಿ ಬೊಟ್ಟು ಮಾಡಿ ತೋರಿಸಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆ ತೀವ್ರಗೊಂಡಿದೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ನಂತರದಲ್ಲಿ ಇದಿನ್ನೂ ಉಲ್ಬಣಕ್ಕೆ ಹೋಗಿತ್ತು. ಈ ಪ್ರತ್ಯೇಕತಾವಾದಿಗಳ ಹೋರಾಟದ ಅಸಲಿಯತ್ತು, ಅವರಿಗೂ ಪಾಕಿಸ್ತಾನಕ್ಕೂ ಇರುವ ನಂಟಿನ ಬಗ್ಗೆ ಆರೋಪಗಳು ಕೇಳಿದ್ದವೇ ಹೊರತು ಸಾಬೀತುಗೊಳಿಸುವ ಸಾಕ್ಷ್ಯಳಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ಹಳೇ 1,000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ್ದು ಈ ಪ್ರತ್ಯೇಕತಾವಾದಿಗಳ ಜಂಘಾಬಲ ಉಡುಗುವಂತೆ ಮಾಡಿತ್ತು. ಅಷ್ಟೇ ಅಲ್ಲ, ಅವರ ಹಣದ ಮೂಲ ಪಾಕಿಸ್ತಾನ ಎಂಬ ಅಂಶ ಮಾಧ್ಯಮಗಳ ಮೂಲಕ ಸಾಕ್ಷ್ಯ ಸಹಿತ ಸಾಬೀತಾಯಿತು. ‘ಟೆರರ್ ಫಂಡಿಂಗ್’ನ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎನ್​ಐಎ, ತಥಾಕಥಿತ ‘ಆಜಾದಿ’ ಹೋರಾಟಗಾರರ ನೇತೃತ್ವವಹಿಸಿದವರ ಅಸಲಿಯತ್ತು ಬೆಳಕಿಗೆ ಬರುವಂತೆ ಮಾಡಿದೆ. ಹೋರಾಟ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಇತರೆ ಮುಸ್ಲಿಂ ರಾಷ್ಟ್ರಗಳಿಂದ ಹಣ ಸಂಗ್ರಹಿಸಿದ ಈ ಪ್ರತ್ಯೇಕತಾವಾದಿ ನಾಯಕರು ದೇಶಾದ್ಯಂತ ಆಸ್ತಿ ಖರೀದಿಗೆ ಅದನ್ನು ಬಳಸಿದ್ದಾರೆ. ಕಣಿವೆಯಲ್ಲಿ ‘ಹೋರಾಟಗಾರರು ಕಲ್ಲೆಸೆದು ಹಿಂಸಾಚಾರ ಮುಂದುವರಿಸಿದಷ್ಟು ಈ ಶ್ರೀಮಂತರ ಖಾತೆಗೆ ಹಣದ ಹೊಳೆಯೇ ಹರಿಯುತ್ತದೆ’ ಎಂಬ ಅಂಶ ಇದೀಗ ಬಹಿರಂಗವಾಗಿದೆ.

ಯಾಸಿನ್ ಮಲಿಕ್ ಜೆಕೆಎಲ್​ಎಫ್ ಚೇರ್​ವುನ್

8ಶ್ರೀನಗರದ ಲಾಲ್​ಚೌಕ್​ನಲ್ಲಿ ಎಂ.ಎಸ್.ಮಾಲ್ ಆಂಡ್ ಪ್ರಾಪರ್ಟೀಸ್ 8ಹುಮ್ಮಾದ ಕಾಲನಿಯೊಂದರಲ್ಲಿ ಆಸ್ತಿ 8 ಸಹಚರ ಯಾಸೀನ್ ಖಾನ್ ಹೆಸರಲ್ಲಿ ಅಬಿ ಗುಜರ್​ನಲ್ಲಿ ಅಂಗಡಿಗಳು 8ಶ್ರೀನಗರದ ಮಾಯಿಸುಮಾ ಅಖಾರದಲ್ಲಿ 1.5 ಕೋಟಿ ರೂ. ಮೌಲ್ಯದ ಮೂರು ಮಹಡಿ ವಸತಿ ಸಂಕೀರ್ಣ 8ಮಾಯಿಸುಮಾದಲ್ಲಿ 2 ಕೋಟಿ ರೂ. ಮೌಲ್ಯದ ಮಖಬೂಲ್ ಮಂಜಿಲ್ 8ಬೋಹ್ರಿಕಡಲ್​ನಲ್ಲಿ ನೂರ್ ಮೊಹಮ್ಮದ್ ಕಲಾವಲ್ ಹೆಸರಿನಲ್ಲಿ 1.5 ಕೋಟಿ ರೂ. ಮೌಲ್ಯದ ಜೆಕೆಎಲ್​ಎಫ್ ಕಚೇರಿ ಕಟ್ಟಡ 8 ಶ್ರೀನಗರದಲ್ಲಿ ಸಗಟು ವ್ಯಾಪಾರದ ಕಿರಾಣಿ ಅಂಗಡಿ 8ಶ್ರೀನಗರದ ಬೆಮಿನಾದಲ್ಲಿ ಹಾಗೂ ಕನಿಪುರಾದಲ್ಲಿ ತಲಾ 80 ಲಕ್ಷ ರೂ. ಮೌಲ್ಯದ ಎರಡು ಮನೆಗಳು8 ಮಾಯಿಸುಮಾದಲ್ಲಿ 5.5 ಕೋಟಿ ರೂಪಾಯಿ ಮೌಲ್ಯದ ಸೈಟ್

ಮೊಹಮ್ಮದ್ ಯೂಸುಫ್ ಲೋನ್​ಹುರಿಯತ್​ನ ಜಿಲ್ಲಾಧ್ಯಕ್ಷ

8 ಕುಪ್ವಾರಾದ ಕ್ರಲ್​ಪೋರಾದಲ್ಲಿ ಎರಡು ಮಹಡಿ ಮನೆ, ಮೂರು ಅಂಗಡಿಗಳು, ಅರ್ಧ ಎಕರೆ ಕೃಷಿ ಪ್ರದೇಶ, ಅರ್ಧ ಎಕರೆ ಜಮೀನು, ಮೆಡಿಕಲ್ ಶಾಪ್. 20 ಪ್ರತ್ಯೇಕತಾವಾದಿ ನಾಯಕರು

ಎನ್​ಐಎ ಸಿದ್ಧಪಡಿಸಿರುವ ವರದಿಯ ಪ್ರಕಾರ ಕಾಶ್ಮೀರದ 20 ಪ್ರತ್ಯೇಕತಾವಾದಿ ನಾಯಕರು ದೇಶಾದ್ಯಂತ 200ಕ್ಕೂ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ. ಅವರ ವಿವರ ಇಂತಿದೆ- ಥಿ ಸೈಯದ್ ಅಲಿ ಶಾ ಗಿಲಾನಿ ಥಿ ಅಲ್ತಾಫ್ ಅಹ್ಮದ್ ಶಾ ಥಿ ನಸೀಮ್ ಗಿಲಾನಿ ಥಿ ನಯೀಮ್ ಗಿಲಾನಿ  ಫಾರೂಖ್ ಅಹ್ಮದ್ ದರ್ ಥಿ ಶಬೀರ್ ಅಹ್ಮದ್ ಶಾ ಥಿ ಝುಹೂರ್ ವತಾಲಿ ಥಿ ಘುಮಾ ಥಿ ನಬಿ ಸುಮ್ಜಿ ಥಿ ಅಸಾದುಲ್ಲಾ ಅಲ್ಲಾಹಿ

ಯಾಸಿನ್ ಮಲ್ಲಿಕ್ ಥಿ ಮಿರ್​ವೈಜ್ ಉಮರ್ ಫಾರೂಖ್ ಥಿ ಅಬ್ದುಲ್ ರಷೀದ್ ಥಿ ಅಗಾ ಸವೀದ್ ಹಸ್ಸನ್ ಥಿ ಮೆಹ್ರಾಜ್ ಉದ್-ದಿನ್ ಥಿ ಮೊಹ್ಮದ್ ಯೂಸುಫ್ ಲೋನ್ ಥಿ ಮೊಹ್ಮದ್ ಮಿರ್ ಥಿ ಬಷೀರ್ ಅಹ್ಮದ್ ಭಟ್ ಥಿ ಅಸಿಯಾ ಅಂದ್ರಾಬಿನಯೀಮ್ ಮೊಹಮ್ಮದ್ ಖಾನ್ ಥಿ ಫಾರೂಖ್ ಅಹ್ಮದ್ ಬಗೂ ಅಬ್ದುಲ್ ರಷೀದ್ ಜಮ್ಮು ಕಾಶ್ಮೀರ ಅವಾಮಿ ಇತ್ತೇಹಾದ್ ಪಾರ್ಟಿಯ ಸಂಸ್ಥಾಪಕ

8 ಶ್ರೀನಗರದ ಬಟಮಲೂನಲ್ಲಿ ಸೈಟ್

8 ಜಮ್ಮುವಿನ ಗುಜ್ಜರ್​ನಗರದಲ್ಲಿ ಮನೆ

8 ಅಖನೂರ್ ಮತ್ತು ಚಂಡೀಗಢದಲ್ಲಿ ಎರಡು ವಸತಿ ಆಸ್ತಿಗಳು

8 ಕುಪ್ವಾರ, ಲಂಗಟೆಯಲ್ಲಿ 4 ಎಕರೆ ಜಮೀನು 8 ಶ್ರೀನಗರದ ಜವಾಹರ ನಗರದಲ್ಲಿ 1.5 ಕೋಟಿ ರೂ. ಮೌಲ್ಯದ ಆಸ್ತಿ 8 ಬೆಮಿನಾ ಮತ್ತು ರಾಜ್ ಬಾಗ್​ನಲ್ಲಿ ಒಟ್ಟು 86 ಲಕ್ಷ ರೂ. ಮೌಲ್ಯದ ಎರಡು ಮನೆಗಳು.

ಫಾರೂಖ್ ಅಹ್ಮದ್ ದರ್ (ಘುಲ್ ರಸೂಲ್ ಪುತ್ರ)

8 ಗುರುಬಜಾರ್​ನಲ್ಲಿ 67 ಲಕ್ಷ ರೂಪಾಯಿ ಮೌಲ್ಯದ ಹಿರೀಕರಿಗೆ ಸೇರಿದ ನಾಲ್ಕು ಮಹಡಿ ಮನೆ

8 ಹಜರತ್​ಬಾಲ್​ನಲ್ಲಿ ನಸೀಮ್ಘಾಘ್ ಬಿಸ್ಮಿಲ್ಲಾ ಕಾಲೊನಿಯಲ್ಲಿ ಅಸ್ಬಾ ಅಂಜುಂ ಖಾನ್ ಹೆಸರಲ್ಲಿ ಎರಡು ಮಹಡಿ ಕಟ್ಟಡ

ಅಸಾದುಲ್ಲಾ ಅಲ್ಲಾಹಿ (ಶಬೀರ್ ಶಾ ಸಹಚರ)

8 ಪತ್ನಿ ಅರೀಫಾ ಅಸಾದಿ ಹೆಸರಿನಲ್ಲಿ ಏಳು ಲಕ್ಷ ರೂಪಾಯಿಯ ಜಮೀನು 8 ಪುಲ್ವಾಮಾದ ಕೋರ್ಟ್ ಕಾಂಪ್ಲೆಕ್ಸ್ ಸಮೀಪದಲ್ಲಿ 1.65 ಕೋಟಿ ರೂಪಾಯಿ(ಅಸಾದುಲ್ಲಾ ಪಾಲು 82 ಲಕ್ಷ ರೂ.) ಮೌಲ್ಯದ ಸನಾ ಕಾಂಪ್ಲೆಕ್ಸ್ 8 1.2 ಕೋಟಿ ರೂ.ಮೌಲ್ಯದ ಮನೆ ಮಾರಾಟ ಮಾಡಿದ್ದಾರೆ 8 2003ರಲ್ಲಿ 22 ಲಕ್ಷ ರೂಪಾಯಿ ಮೌಲ್ಯದ ಜಮೀನು ಮಾರಾಟ ಮಾಡಿದ್ದಾರೆ 8 ಶ್ರೀನಗರ, ಹೈದರ್​ಪೋರಾ, ಪುಲ್ವಾಮಾದಲ್ಲಿ ಒಟ್ಟು 23 ಲಕ್ಷ ರೂಪಾಯಿಯ ಎರಡು ಮಹಡಿ ಮನೆಗಳು

ಮಿರ್​ವೈಜ್ ಉಮರ್ ಫಾರೂಖ್

8 ಶ್ರೀನಗರದ ರಾಜೌರಿ ಕದಲ್​ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ 8 ನಿಗೀನ್​ನಲ್ಲಿ ಹಿರೀಕರ ಮನೆ 8 ಲಾಲ್ ಬಜಾರ್​ನಲ್ಲಿ 17-18 ಅಂಗಡಿಗಳನ್ನು ಒಳಗೊಂಡ ಶಾಪಿಂಗ್ ಕಾಂಪ್ಲೆಕ್ಸ್ 8 ಬಾರಾಮುಲ್ಲಾ, ಪಟ್ಟಾನ್, ಮಾಗಮ್ ಅನಂತನಾಗ್​ನಲ್ಲಿ ಅಂಗಡಿಗಳು 8 ನವಾ ಬಜಾರ್​ನಲ್ಲಿ ಕಚೇರಿ ಕಟ್ಟಡ 8 ಆಲಿ ಮಸೀದಿಯಲ್ಲಿ ಅಂಗಡಿಗಳು 8 ಬ್ರಾಯ್ನ ನಿಶತ್ ಪ್ರದೇಶದಲ್ಲಿ ಕಚೇರಿ ಹಾಗೂ ಅಂಗಡಿಗಳು 8 ಉಮರ್ ಕಾಲೊನಿಯಲ್ಲಿ ಕಾಲು ಎಕರೆ ಆಸ್ತಿ 8 ದೆಹಲಿಯಲ್ಲಿ ಎರಡು ಆಸ್ತಿಗಳು

ಫಾರೂಖ್ ಅಹ್ಮದ್ ಬಗೂ 8 ಶ್ರೀನಗರದ ಪರಿಮ್ನಪೋರಾದಲ್ಲಿ ಎಎಸ್​ಬಿ ಟ್ರೇಡಿಂಗ್ ಕಂಪನಿ(ಶಾಪ್ ನಂ.32) 8 ನ್ಯೂಫ್ರುಟ್ ಕಾಂಪ್ಲೆಕ್ಸ್​ನಲ್ಲಿ ಫಾರೂಖ್ ಅಹ್ಮದ್ ಬಷೀರ್ ಅಹ್ಮದ್(32ಎ) 8 ಖುನ್​ವುುಚ್​ನ ಸಿಡ್ಕೋ ಇಂಡಸ್ಟ್ರೀಯಲ್ ಕಾಂಪ್ಲೆಕ್ಸ್​ನಲ್ಲಿ ಒಮರ್ ರಿಜ್ವಾನ್ ಎಂಟರ್​ಪ್ರೖೆಸಸ್ 8 ಬೆಮಿನಾದ ಹೌಸಿಂಗ್ ಕಾಲನಿಯಲ್ಲಿ ರಿಜ್ವಾನ್ ಟ್ರೇಡಿಂಗ್ ಕಂಪನಿ 8 ಶ್ರೀನಗರದಲ್ಲಿ ಶೇಖ್ ಬಷೀರ್, ಗ್ರೀನ್ ಸ್ಟಾರ್, ಇಷ್ರತ್ ಬಷೀರ್, ಫಾರೂಕ್ ಆಂಡ್ ಸನ್ಸ್, ಶೇಖ್ ಫಾರೂಖ್, ಶೇಖ್ ಬಷೀರ್ ಅಹ್ಮದ್ ಆಂಡ್ ಕಂಪನಿ, ಆರ್​ಎಫ್​ಟಿ(ಇಂಪೋರ್ಟ್ ಆಂಡ್ ಎಕ್ಸ್ ಪೋರ್ಟ್)8 ಬೆಮಿನಾದ ಒಬೈಸಾಬಾದ್​ನಲ್ಲಿ ಮನೆ 8 ಪರಿಮ್ರೋರಾದಲ್ಲಿ ಅಂಗಡಿ(ಶಾಪ್ ನಂ.77).

ಎನ್​ಐಎ ತನಿಖೆ ಯಾವುದರ ಬಗ್ಗೆ?

ಹುರಿಯತ್ ಕಾನ್ಪರೆನ್ಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯ ನಾಯಕರು ಮತ್ತು ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಎಂಬ ಉಗ್ರ ಸಂಘಟನೆ ನಡುವಿನ ನೇರ ಸಂಪರ್ಕದ ಬಗ್ಗೆ ಎನ್​ಐಎ ತನಿಖೆ ನಡೆಸುತ್ತಿದೆ. ಕಾಶ್ಮೀರ ಕಣಿವೆಯ ಹಿಂಸಾಚಾರಕ್ಕೆ ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಪಾಕಿಸ್ತಾನದಿಂದ ಹಣಕಾಸು ನೆರವು ಬರುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ನೂರಕ್ಕೂ ಹೆಚ್ಚು ಉಗ್ರರ ಹತ್ಯೆ

ಪ್ರಸಕ್ತ ವರ್ಷ ಆಗಸ್ಟ್ 10ನೇ ತಾರೀಕಿನ ತನಕ ಜಮ್ಮು ಕಾಶ್ಮೀರದಲ್ಲಿ ಎಲ್​ಇಟಿ ಉಗ್ರ ಅಬು ದುಜಾನ, ಹಿಜ್ಬುಲ್ ಮುಜಾಹಿ ದಿನ್​ನ ಸಬ್ಝಾರ್ ಅಹ್ಮದ್ ಭಟ್(ಬುಹ್ರಾನ್ ವಾನಿ ಉತ್ತರಾಧಿಕಾರಿ) ಸೇರಿ 132 ಉಗ್ರರು ವಿವಿಧ ಎನ್​ಕೌಂಟರ್​ಗಳಲ್ಲಿ ಹತರಾಗಿದ್ದಾರೆ.

 

ಯಾರ್ಯಾರ ಬಂಧನ?

ಹುರಿಯತ್ ಕಾನ್ಪರೆನ್ಸ್​ನ ಮುಖ್ಯಸ್ಥ ಎಸ್​ಎಎಸ್ ಗಿಲಾನಿಯ ಅಳಿಯ ಅಲ್ತಾಫ್ ಅಹ್ಮದ್ ಶಾ, ಆಯಾಜ್ ಅಕ್ಬರ್, ಪೀರ್ ಸೈಫುಲ್ಲಾ, ಮೆಹ್ರಾಜ್ ಕಲಾವಾಲ್, ಶಾಹಿದ್ ಉಲ್ ಇಸ್ಲಾಮ್ ನಯೀಮ್ ಖಾನ್, ಫಾರೂಖ್ ಅಹ್ಮದ್ ಧರ್ ಹಾಗೂ ಬಹುಕಾಲದ ಹವಾಲ ಹಣ ವಹಿವಾಟುದಾರ ವತಾಲಿ ಬಂಧಿತರು.

 

ಸೈಯದ್ ಅಲಿ ಶಾ ಗಿಲಾನಿ ಹುರಿಯತ್ ಮುಖ್ಯಸ್ಥ

8ಸೊಪೋರ್​ನ ಡೂರು ಎಂಬಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಎರಡು ಮಹಡಿಯ ಹಿರೀಕರ ಬಂಗಲೆ 8ಮಿಲ್ಲಿ ಟ್ರಸ್ಟ್ ಹೆಸರಿನಲ್ಲಿ ರೆಹಮತಾಬಾದ್ ಕಾಲನಿಯಲ್ಲಿ ಕಚೇರಿ/ಮನೆ. 8ಬುಲಬುಲ್​ಭಾಗ್​ನಲ್ಲಿ ಎರಡು ಮಹಡಿ ಮನೆ(ಮಸರತ್ ಆಲಂ ಜೇಲ್ ಹೆಸರಿಗೆ ವರ್ಗಾವಣೆ) 8ಡೂರು ಗ್ರಾಮಸ್ಥರಿಂದ ದಾನ ಸಿಕ್ಕಿದ ಭೂಮಿಯಲ್ಲಿ ಯೂನಿಕ್ ಪಬ್ಲಿಕ್ ಸ್ಕೂಲ್- ನಯೀಮ್ ಗಿಲಾನಿ ಇದರ ಮುಖ್ಯಸ್ಥ 8ದೆಹಲಿಯಲ್ಲಿ ಹವಾಲಾ ಕುಳ ಜಿ.ಎಂ.ಭಟ್ ಮಾಲೀಕತ್ವದಲ್ಲಿ ಎರಡು ಬಿಎಚ್​ಕೆ ಫ್ಲ್ಯಾಟ್ 8ಶ್ರೀನಗರದ ಭಾಗ್ ಎ ಮಹ್ತಾಬ್​ನಲ್ಲಿ ಎರಡು ಮಹಡಿ ಮನೆ 8ಶ್ರೀನಗರದ ಬೆಮಿನಾದಲ್ಲಿ ಮೂರು ಮಹಡಿ ಬಂಗಲೆ 8ಸಿಂಗಾಪೋರ್ ಪಟ್ಟಣ್​ನಲ್ಲಿ 18.75 ಎಕರೆ ಜಮೀನು 8ಹೈದರ್​ಪುರದಲ್ಲಿ ಎರಡು ಮಹಡಿ ಮನೆ

ನಸೀಮ್ ಗಿಲಾನಿ

(ಸೈಯದ್ ಅಲಿ ಶಾ ಗಿಲಾನಿ ಪುತ್ರ)

8 ಶ್ರೀನಗರದ ರಾವಲ್​ಪೋರಾದಲ್ಲಿ ಮನೆ 8 ಸೋಪೋರ್​ನ ಡೋರುನಲ್ಲಿ ಹಿರೀಕರ ಜಮೀನು, ಯುನೀಕ್ ಪಬ್ಲಿಕ್ ಸ್ಕೂಲ್​ನ ಚೇರ್​ವುನ್

ಅಲ್ತಾಫ್ ಅಹ್ಮದ್ ಶಾ, ಹುರಿಯತ್​ನ ಮುಖ್ಯ ಸಂಘಟಕ (ಸೈಯದ್ ಅಲಿ ಶಾ ಗಿಲಾನಿ ಅಳಿಯ)

8 ಭಾಗ್ ಏ ಮೆಹ್ತಾಬ್​ನಲ್ಲಿ 2722 ಚದರ ಅಡಿಯಲ್ಲಿ ಎರಡು ಮಹಡಿ ಮನೆ

8 ಭತಿಂದಿಯಲ್ಲಿ ಒಂದು ಮನೆ 8 ಶ್ರೀನಗರದ ಲೌಲ್ ಚೌಕ್​ನಲ್ಲಿ ಹೆಣೆದ ಉಡುಪುಗಳ ಅಂಗಡಿ 8 ಶ್ರೀನಗರದ ಗಂದೇರ್​ಬಾಲ್, ಹಂದೂರಾ ಗ್ರಾಮದಲ್ಲಿ 1 ಎಕರೆ ಜಮೀನು 8 ಬೆಮಿನಾದಲ್ಲಿ ಒಂದೂವರೆ ಕೋಟಿ ರೂ.ಮೌಲ್ಯದ ಎರಡು ಮಹಡಿ ಮನೆ 8 ಮೂರು ಬೇನಾಮಿ ಆಸ್ತಿಗಳು

ಶಬೀರ್ ಅಹ್ಮದ್ ಶಾ, ಜೆಕೆಡಿಎಫ್​ಪಿಯ ಅಧ್ಯಕ್ಷ

8 ಬದ್ಗಾಂವ್​ನ ರಾವಲ್​ಪೋರಾ, ಸನತ್ ನಗರ ಬುದ್ಶಾನ್ ಕಾಲನಿಯಲ್ಲಿ ಮೂರು ಮಹಡಿ ಕಟ್ಟಡ 8 ಬದ್ಗಾಂವ್​ನ ಅಫಿಂದಿ ಭಾಗ್​ನಲ್ಲಿ ಪಲಾಟಿಲದಲ್ಲಿ 25 ಕೋಟಿ ರೂ. ಮೌಲ್ಯದ ಒಂದು ಮನೆ

8 ಜಮ್ಮುವಿನ ಛಾನಿ ಹಿಮ್ಮತ್, ಸುನ್​ಜ್ವಾನ್​ನಲ್ಲಿ ಎರಡು ಮಹಡಿ ಮನೆ 8 ಅನಂತ್​ನಾಗ್​ನ ಪಹಲ್ಗಾಂವ್​ನಲ್ಲಿ ಹೋಟೆಲ್ ಬಹಲ್ ಶಾ

8 ಅನಂತ್​ನಾಗ್​ನ ಕಡಿಪೋರಾದಲ್ಲಿ ಮೂರು ಮಹಡಿ ಮನೆ 8 ಶ್ರೀನಗರದಲ್ಲಿ 14 ಕೊಠಡಿಗಳ ಮನೆ 8 ಜಮ್ಮುವಿನ ನರ್ವಾಲ, ಭತಿಂದಿಯಲ್ಲಿ ಮನೆ 8 ಪಹಲ್ಗಾಂವ್​ನ ಲಾರಿಪೋರದಲ್ಲಿ ಕಾಲು ಎಕರೆ ಜಾಗ 8 ಶ್ರೀಗರದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಮನೆ 8 ಶ್ರೀನಗರದ ನಾರ್​ಬೆಲ್​ನ ಇಂದ್ರಾಬಿ ಕಾಲನಿಯಲ್ಲಿ ಎರಡು ಸೈಟ್ 8 ರಾವಲ್ಪೋರಾದಲ್ಲಿ ಎರಡು ಮನೆ 8 ಶ್ರೀನಗರದ ಸನತ್​ನಗರ ಪಟ್ಟಣದಲ್ಲಿ ಕಚೇರಿ ಕಂ ಮನೆ

8 ಸೋನ್​ವಾರ್ಗ್​ನಲ್ಲಿ ಏಳು ಕನಾಲ್ ಜಮೀನು

ಅಗಾ ಸ್ವೇದ್ ಹಸ್ಸನ್

ಅಂಜುಮಾನ್ ಷರೀ ಶಿಯಾದನ್​ನ ಚೇರ್​ವುನ್

8 ಬದ್ಗಾಂವ್​ನಲ್ಲಿ ಮೂರು ಮಹಡಿ ಮನೆ ಮತ್ತು ಎರಡು ಮಹಡಿ ಕಚೇರಿ ಕಟ್ಟಡ, ಮೂರು ಕನಾಲ್ ಜಮೀನು, ಮೂರು ಮಹಡಿಯ ಮಾಲ್, ಜೆಐಸಿಯಲ್ಲಿ ಸೇನೆಯ ಸುಪರ್ದಿಗೊಳಪಟ್ಟ ಏಳು ಕನಾಲ್ ಜಮೀನು 8 ಫೋರ್ಚುನರ್, ಮಹಿಂದ್ರ ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್, ಸ್ಕೋಡಾ, ಟಾಟಾ ಸುಮೋ, ಮಾರುತಿ ಎಸ್ಟೀಮ್ ಟಾಟಾ ನ್ಯಾನೊ.

ನಯೀಮ್ ಗಿಲಾನಿ

(ಸೈಯದ್ ಅಲಿ ಶಾ ಗಿಲಾನಿ ಪುತ್ರ)

8 ಶ್ರೀನಗರದ ರಾವಲ್​ಪೋರಾದ ಹುಮಾನದಲ್ಲಿ ಅರ್ಧ ಎಕರೆ ಕೃಷಿ ಜಮೀನು 8 ಸೋಪೋರ್​ನ ಡೋರುನಲ್ಲಿ 5 ಎಕರೆ ಹಿರೀಕರ ಆಸ್ತಿ 8 ಶ್ರೀನಗರದ ಸನತ್ ನಗರದಲ್ಲಿ ಎಂಟು ಕೊಠಡಿಗಳ ಮನೆ

8 ದೆಹಲಿಯ ವಸಂತ್ ಕುಂಜ್​ನಲ್ಲಿ ಫ್ಲ್ಯಾಟ್ 8 ಶ್ರೀನಗರದ ಆಕ್ಸಿಲರಿ ಪೊಲೀಸ್ ಲೇನ್ ಭಗತ್ ಬಾರ್​ರೆುಲ್ಲಾದಲ್ಲಿ ಮನೆ 8 ಪಟ್ಟಾಣ್​ನಲ್ಲಿ ಮನೆ

ಆಯ್ದ ಪ್ರತ್ಯೇಕತಾವಾದಿಗಳ ಆಸ್ತಿ ವಿವರ

ಘುಲಾಂ ನಬಿ ಸುಮ್ಜಿ, ಮುಸ್ಲಿಮ್ ಕಾನ್ಪರೆನ್ಸ್​ನ ಚೇರ್​ವುನ್

8 ಅನಂತ್​ನಾಗ್​ನ ಬತಿಂಗೋದಲ್ಲಿ 2.5 ಕೋಟಿ ರೂ. ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್, ಮರದ ಫ್ಯಾಕ್ಟರಿ, ಎನ್​ಡಿ ಮೋಟಾರ್ಸ್ ಎಂಬ ಅಟೊಮೊಬೈಲ್ ವರ್ಕ್ ಶಾಪ್, ವಿದ್ಯುತ್ ಕಂಬ ನಿರ್ವಣದ ಫ್ಯಾಕ್ಟರಿ ಮತ್ತು ಮನೆ. 8 ಅನಂತ್​ನಾಗ್​ನ ಬಿಜ್​ಬೆಹರಾದಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್, ವಿಭಾಗೀಯ ಅರಣ್ಯ ಕಚೇರಿ ಸಮೀಪ ಮೂರು ಮಹಡಿ ಕಟ್ಟಡ, 2 ಕೋಟಿ ರೂಪಾಯಿ ಮೌಲ್ಯದ ಎರಡು ಮಹಡಿಯ ವಸತಿ ಕಟ್ಟಡ, 47 ಲಕ್ಷ ರೂಪಾಯಿ ಮೌಲ್ಯದ 5.8 ಎಕರೆ ಜಮೀನು, ಝಿರ್​ಪೋರಾದಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ ಮೂರು ಮಹಡಿ ಕಟ್ಟಡ, 37.5 ಲಕ್ಷ ರೂ.ಮೌಲ್ಯದ ಜಮೀನು, ಝುಬಿಲಿಪೋರಾದ ಅರ್ವಆನಿಯಲ್ಲಿ 4 ಎಕರೆ ಜಮೀನು 8 ಜಮ್ಮುವಿನ ನರ್ವಾಲದಲ್ಲಿ 50 ಲಕ್ಷ ರೂ. ಮೌಲ್ಯದ ಮನೆ

8 ಶ್ರೀನಗರದ ಪಂಥ ಚೌಕ್​ನಲ್ಲಿ ವಾಹನಗಳು ಮತ್ತು ಬಿಡಿಭಾಗಗಳ ಷೋರೂಮ್ 8 ಶ್ರೀನಗರದ ಸನತ್ ನಗರದಲ್ಲಿ 1.57 ಕೋಟಿ ರೂ. ಮೌಲ್ಯದ ಮನೆ 8 ಅವಂತಿಪೋರಾದಲ್ಲಿ ಎಫ್.ಎಂ.ಸ್ಕೂಲ್ 8 ಪಹಲ್ಗಾಂವ್​ನ ಅದೂನಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ಹೋಟೆಲ್

ಅಸಿಯಾ ಅಂದ್ರಾಬಿ

(ಡಿಇಎಂ ಮುಖ್ಯಸ್ಥ ಅಷೀಕ್ ಹುಸೈನ್ ಫಾಕೂತ್​ನ ಪತ್ನಿ)

8 ಶ್ರೀ ನಗರದ ಆಜಾದ್ ಕಾಲನಿಯಲ್ಲಿ ಎರಡು ಮಹಡಿಯ ಮನೆ

8 ಹ್ಯುಂಡೈ ಐ20 ಮತ್ತು ಮಾರುತಿ ಸುಝುುಕಿ ಆಲ್ಟೋ ಕಾರು

ಬಷೀರ್ ಅಹ್ಮದ್ ಭಟ್

ತೆಹ್ರೀಕ್ ಏ ಹುರಿಯತ್​ನ ಕಾರ್ಯದರ್ಶಿ

8 ರಾವಲ್​ಪೋರಾದಲ್ಲಿ 2 ಮಹಡಿಯ ಐಷಾರಾಮಿ ಮನೆ

ಝುಹೂರ್ ವತಾಲಿ, ಹವಾಲಾ ವಹಿವಾಟುದಾರ

8 ಕುಪ್ವಾರದ ಹನ್ದವಾರಾ ಜಿಲ್ಲೆಯಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಮನೆ, ಕಟ್ಸ್​ವಾರಿ ಗ್ರಾಮದಲ್ಲಿ 33 ಲಕ್ಷ ರೂಪಾಯಿ ಮೌಲ್ಯದ ಜಮೀನು 8 ಕುಂಪ್ವಾರದ ಭಗತ್​ಪೋರಾ ಗ್ರಾಮದಲ್ಲಿ 2 ಲಕ್ಷ ರೂ. ಮೌಲ್ಯದ ಅಂಗಡಿ 8 ಶ್ರೀನಗರದ ನರ್​ಬಾಲ್​ನಲ್ಲಿ 37.5 ಎಕರೆ ಜಮೀನು 8 ಜಮ್ಮುವಿನ ಸಿದ್ರಾ ತವಿ ವಿಹಾರದಲ್ಲಿ ಮನೆ 8 ಗುರುಗ್ರಾಮದ ಡಿಎಲ್​ಜಿ ಸಿಟಿ ಮತ್ತು ದೆಹಲಿಯಲ್ಲಿ ಎರಡು ಫ್ಲ್ಯಾಟ್​ಗಳು 8 ಲಂಡನ್​ನ ವೆಸ್ಟ್​ಮಿನಿಸ್ಟರ್ ಕೌನ್ಸಿಲ್ ಪ್ರದೇಶದ ಪೋರ್ಚೆಸ್ಟರ್ ಪ್ಲೇಸ್​ನಲ್ಲಿ ಬೇನಾಮಿಯಾಗಿ 23 ಮಹಡಿ ಕಟ್ಟಡ 8 ಯುಎಇನಲ್ಲಿ ಹಲವು ಕಂಪನಿಗಳು8 ಶ್ರೀನಗರದ ಪರಿಮೋರಾದಲ್ಲಿ ಕೈಗಾರಿಕಾ ಆಸ್ತಿ, ಝೈನಾಕೋಟೆ ಕೈಗಾರಿಕಾ ಪ್ರಾಂಗಣದಲ್ಲಿ ಪ್ಲೈಬೋರ್ಡ್ ಫ್ಯಾಕ್ಟರಿ, ಭಗತ್ ಬಾರಾಝುುಲ್ಲಾದಲ್ಲಿ ಎರಡು ಮಹಡಿ ಮನೆ

 

Leave a Reply

Your email address will not be published. Required fields are marked *

Back To Top