Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಆಗಸ್ಟ್​ನಲ್ಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ

Saturday, 20.05.2017, 3:02 AM       No Comments

ಚಿತ್ರದುರ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆ.3ರಿಂದ ಮೂರು ದಿನ ಕರ್ನಾಟಕದಲ್ಲಿ ತಂಗಲಿದ್ದು, ಈ ವೇಳೆ ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆಗಬಹುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಜನಸಂಪರ್ಕ ಅಭಿಯಾನದ ಎರಡನೇ ದಿನವಾದ ಶುಕ್ರವಾರ ಪಕ್ಷದ ನಾಯಕರೊಂದಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಬಾರಿ ಅಭ್ಯರ್ಥಿಗಳ ಆಯ್ಕೆ ಯಡಿಯೂರಪ್ಪ ಅಥವಾ ಅಮಿತ್ ಷಾ ಮನೆಯಲ್ಲಿ ಆಗುವುದಿಲ್ಲ. ಪಕ್ಷ ನಡೆಸುವ ಎರಡು-ಮೂರು ಪ್ರತ್ಯೇಕ ಸಮೀಕ್ಷೆಗಳ ವರದಿ ಆಧರಿಸಿಯೇ ಪಟ್ಟಿ ಅಂತಿಮವಾಗಲಿದೆ ಎಂದು ಪುನರುಚ್ಚರಿಸಿದರು.

ರಾಜ್ಯ ಪ್ರವಾಸದಲ್ಲಿರುವ ನಾವೀಗ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಮುಖಂಡರಿಗೆ ವರದಿ ಸಲ್ಲಿಸುತ್ತೇವೆ. ನಮ್ಮ ವರದಿ ಕೂಡ ಫೈನಲ್ ಅಲ್ಲ. 2-3 ಪ್ರತ್ಯೇಕ ಸಮಿಕ್ಷೆಗಳು ಇದಕ್ಕಾಗಿ ನಡೆಯಲಿವೆ. ಆ ಬಳಿಕವಷ್ಟೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.


ಚಿತ್ರದುರ್ಗದಲ್ಲಿ ಬಿಜೆಪಿ ತಂಡ ಸಂಚಾರ

ಚಿತ್ರದುರ್ಗ: ಬರ ಅಧ್ಯಯನ ಹಾಗೂ ಜನಸಂಪರ್ಕ ಅಭಿಯಾನದ ಆಶಯ ಹೊತ್ತು 36 ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ತಂಡ ಎರಡನೇ ದಿನದ ಪ್ರವಾಸದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸಿತು.

ದಲಿತ ನಾಯಕ ರುದ್ರಮುನಿ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ ಬಿಎಸ್​ವೈ, ಆ ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚನ್ನಕ್ಕಿ ಹೊಂಡದ ಕೊಳಚೆ ನಿವಾಸಿಗಳ ಸಮಸ್ಯೆಗಳಿಗೆ ಕಿವಿಯಾದರು.

ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಜಯಘೊಷ ಕೂಗುತ್ತ ಹಾರ, ತುರಾಯಿ ಹಾಕಲು ಬಂದಾಗ ನಯವಾಗಿ ನಿರಾಕರಿಸಿದರು. ಆಂಜನೇಯ ದೇವಾಲಯ ಬಳಿ ನಡೆದ ಸಭೆಯಲ್ಲಿ ಮನೆ, ಹಕ್ಕುಪತ್ರ, ಪಡಿತರ ಚೀಟಿ ಮತ್ತಿತರ ಮೂಲಸೌಲಭ್ಯ ಕೋರಿ ಜನರು ಸಲ್ಲಿಸಿದ ಅಹವಾಲಿಗೆ ಪ್ರತಿಕ್ರಿಯಿಸಿ ನಿಮ್ಮ ಆಶೀರ್ವಾದ ಇದ್ದರೆ ಮುಂದೆ ನಮ್ಮ ಸರ್ಕಾರ ಬರುತ್ತದೆ ಆಗ ನಿಮ್ಮ ಸಮಸ್ಯೆಗೆ ಪರಿಹಾರವೂ ದೊರೆಯಲಿದೆ ಎಂದರು. ಇದಕ್ಕೂ ಮುಂಚೆ ಪಕ್ಷದ ಕಚೇರಿಯಲ್ಲಿ ಹಿರಿಯರ ಜತೆಗೆ ಪ್ರತ್ಯೇಕವಾಗಿ ಸಮಾಲೋಚಿಸಿದರು. ಸಂಜೆ ಕಾರ್ಯಕರ್ತರ ಸಭೆ ನಂತರ ಹೊಳಲ್ಕೆರೆಗೆ ತೆರಳಿ ಸಮಾವೇಶದಲ್ಲಿ ಭಾಗಿಯಾದರು. ರಾಜ್ಯಾಧ್ಯಕ್ಷರ ಅನುಮತಿ ಪಡೆದು ಈಶ್ವರಪ್ಪ ಅನ್ಯ ಕಾರ್ಯದ ನಿಮಿತ್ತ ತೆರಳಿದ್ದರಿಂದ ಭಾಗಿಯಾಗಲಿಲ್ಲ. ಶನಿವಾರ, ಭಾನುವಾರ ಬೆಂಗಳೂರಲ್ಲಿ ವಿಶೇಷ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಜನಸಂಪರ್ಕ ಅಭಿಯಾನ ಸೋಮವಾರದಿಂದ ಪುನಾರಂಭವಾಗಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಬಿಎಸ್​ವೈ ವಾಕ್ ಅಂಡ್ ಟಾಕ್

ಬೆಳ್ಳಂಬೆಳಗ್ಗೆ ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಕಿಂಗ್ ಮಾಡಿದರು. ನವೀನ್ ಹೋಟೆಲ್​ನಿಂದ ಆರಂಭಿಸಿ ಆರ್​ಟಿಒ ಕಚೇರಿ ರಸ್ತೆ, ಜೆಸಿಆರ್ ಬಡಾವಣೆಗೆ ತೆರಳಿ ವಾಪಾಸದರು. ಬಿಎಸ್​ವೈ ಕಂಡು ಜನರು ಅವರ ಕೈ ಕುಲುಕಿ ಮಾತನಾಡಿಸಿದರು. ಬಿಎಸ್​ವೈ ಕೂಡ ಆತ್ಮೀಯವಾಗಿ ಹೇಗಿದ್ದೀರಿ ಎಂದು ಕುಶಲೋಪರಿ ವಿಚಾರಿಸಿದರು. ಆರಂಭದಲ್ಲಿ ಬೆರಳೆಣಿಕೆ ಜನರಿಂದ ಶುರುವಾದ ವಾಕಿಂಗ್ ಮುಗಿಯುವ ವೇಳೆ ನೂರಾರು ಜನರು ಜಮಾವಣೆ ಆಗಿದ್ದರು. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಮನೆ ಮೇಲಿನ ಐಟಿ ದಾಳಿಯಿಂದ ಮುಜುಗರವಿಲ್ಲ. ಅದು ಉದ್ಯಮಕ್ಕೆ ಸಂಬಂಧಿಸಿದ್ದು. ಐಟಿ ಇಲಾಖೆ ಪಕ್ಷಾತೀತವಾಗಿ ದಾಳಿ ನಡೆಸುತ್ತಿದೆ ಎಂದರು.

ಅಲ್ಪಹಾರ ಸವಿದ ಬಿಎಸ್​ವೈ

ದಲಿತ ಮುಖಂಡ ರುದ್ರಮುನಿ ಮನೆಯಲ್ಲಿ ಯಡಿಯೂರಪ್ಪ ಶುಕ್ರವಾರ ಬೆಳಗ್ಗೆ ಉಪಾಹಾರ ಸೇವಿಸಿದರು. ಶುಗರ್ ಕಾರಣಕ್ಕೆ ಪಪ್ಪಾಯಿ ಹಣ್ಣು, ಸಕ್ಕರೆ ರಹಿತ ಚಹಾ ಸೇವಿಸಿ, ಸ್ವಲ್ಪ ಉಪಾಹಾರ ಸವಿದರು. ಮಾದಾರ ಚನ್ನಯ್ಯ ಪೀಠಕ್ಕೆ ತೆರಳಿ ಸ್ವಾಮೀಜಿ ಮತ್ತಿತರ ಗಣ್ಯರ ಜತೆ ಮಾತನಾಡಿದರು.

ಬಿಜೆಪಿ ಇದೀಗ ಬರಗಾಲದ ಪ್ರವಾಸ ಆರಂಭಿಸಿದ್ದು, ತುಮಕೂರಿನಲ್ಲಿ ಹೋಟೆಲ್​ನಿಂದ ತರಿಸಿದ ಇಡ್ಲಿ ತಿಂದು ದಲಿತರ ಮನೆ ಊಟ ಎಂದು ನಾಟಕವಾಡುತ್ತಿದ್ದಾರೆ. ಇದು ದಲಿತರ ಮೆಚ್ಚಿಸೋ ನಾಟಕವಲ್ಲದೆ ಮತ್ತೇನೂ ಅಲ್ಲ.

| ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *

Back To Top