Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಆಕ್ರೋಶದ ನಡುವೆಯೂ ಮುಂಬಡ್ತಿ ವಿಧೇಯಕ

Wednesday, 15.11.2017, 3:02 AM       No Comments

ಬೆಳಗಾವಿ: ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯವರ್ಗದ (ಅಹಿಂಸಾ) ಸರ್ಕಾರಿ ನೌಕರರ ಆಕ್ರೋಶದ ನಡುವೆಯೂ ಮೀಸಲು ಆಧಾರದಲ್ಲಿ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ವಿಧೇಯಕವನ್ನು ಸರ್ಕಾರ ಮಂಡಿಸಿದೆ. ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ವಿಧೇಯಕ ಮಂಡಿಸಿದರು.

1978ರ ಏ.27ರಿಂದ ಜಾರಿಗೆ

ಬರುವಂತೆ ರಾಜ್ಯ ಸಿವಿಲ್ ಸೇವೆ ಗಳಲ್ಲಿನ ಹುದ್ದೆಗಳಿಗೆ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ ತತ್ಪರಿಣಾಮದ ಜ್ಯೇಷ್ಠತೆಯನ್ನು ಉಳಿಸುವುದಕ್ಕಾಗಿ ಈ ವಿಧೇಯಕ ಅವಶ್ಯಕ ಇದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆಯೇ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ, ರಾಜ್ಯದಲ್ಲಿ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಹಿಂದುಳಿದಿರುವಿಕೆ, ರಾಜ್ಯ ಸಿವಿಲ್ ಸೇವೆಗಳಲ್ಲಿ ಅವರ ಪ್ರಾತಿನಿಧ್ಯದ ಅಭಾವ ಮತ್ತು ರಾಜ್ಯದ ಆಡಳಿತದ ಮೇಲೆ ಬಡ್ತಿಯಲ್ಲಿನ ಮೀಸಲಾತಿ ಪರಿಣಾಮ ಕುರಿತು ಅಧ್ಯಯನ ನಡೆಸಲಾಗಿದೆ. ಈ ಸಮಿತಿಯು ಸಂಬಂಧಪಟ್ಟ ದತ್ತಾಂಶ ಸಂಕಲಿಸಿ ಹಾಗೂ ವಿವರವಾದ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ವಿಸ್ತರಿಸಿರುವುದರಿಂದ ಆಡಳಿತದಲ್ಲಿನ ಸಮಗ್ರ ದಕ್ಷತೆಗೆ ಅಡ್ಡಿಯಾಗಿಲ್ಲ ಮತ್ತು ಮಿತಿಯೊಳಗೆ ನೀಡಲಾಗುವ ಮಿಸಲಾತಿಯ ಮುಂದುವರಿಕೆಯು ಆಡಳಿತದ ಸಮಗ್ರ ದಕ್ಷತೆಗೆ ಪರಿಣಾಮ ಬೀರುವುದಿಲ್ಲ ಅಥವಾ ಅಡ್ಡಿಯುಂಟು ಮಾಡುವುದಿಲ್ಲ ಎಂದು ವರದಿ ದೃಢೀಕರಿಸಿತ್ತು. ನಂತರ ಸರ್ಕಾರವು ಕಾನೂನು ಆಯೋಗ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದು, 1978ರಿಂದ ರಾಜ್ಯದಲ್ಲಿ ಮೀಸಲಾತಿ ನೀತಿಯ ಆಧಾರದ ಮೇಲೆ ಬಡ್ತಿಗೊಂಡವರಿಗೆ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ನೀಡಲು ಮತ್ತು ಬಲವಾದ ಕಾರಣಗಳಿಗಾಗಿ ಅಸ್ತಿತ್ವದಲ್ಲಿರುವಂತೆ ಮುಂದುವರಿಸುವ ನಿರ್ಧಾರಕ್ಕೆ ಬಂದಿರುವುದರಿಂದ ವಿಧೇಯಕ ತಂದಿರುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

ಅಹಿಂಸಾ ಬೆಳಗಾವಿ ಚಲೋ

ಸರ್ಕಾರ ಈ ವಿಧೇಯಕವನ್ನು ತರಬಾರದೆಂದು ಒತ್ತಾಯಿಸಿ ಅಹಿಂಸಾ ಸಂಘಟನೆ ಬೆಳಗಾವಿ ಚಲೋ ಹಮ್ಮಿಕೊಂಡಿದೆ. ಒಂದು ವೇಳೆ ಈ ವಿಧೇಯಕ ಶಾಸನವಾದರೆ ಮುಂದಿನ ದಿನಗಳಲ್ಲಿ ಹಿಂದುಳಿದ, ದಲಿತ ಮತ್ತು ಸಾಮಾನ್ಯ ವರ್ಗದ ಸರ್ಕಾರಿ ನೌಕರರು ಸೇವಾವಧಿಯಲ್ಲಿ ಒಂದೇ ಒಂದು ಬಡ್ತಿ ಪಡೆಯದೆ ನಿವೃತ್ತರಾಗಬೇಕಾಗುತ್ತದೆ ಎಂಬುದು ಅಹಿಂಸಾ ಸಂಘಟನೆ ಆತಂಕ. ಈಗಾಗಲೇ ಹತ್ತಾರು ಇಲಾಖೆಯಲ್ಲಿ ಶೇ.18ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಬಡ್ತಿ ನೀಡಲಾಗಿದ್ದು, ಕೆಲ ಇಲಾಖೆಗಳಲ್ಲಿ ಶೇ.100 ಮುಂಬಡ್ತಿ ಪಡೆದವರೇ ಉನ್ನತ ಹುದ್ದೆಗಳಲ್ಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲ ಇಲಾಖೆಗಳಲ್ಲೂ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿ ಅದರಂತೆ ಬಡ್ತಿ ಪ್ರಕ್ರಿಯೆ ಮುಗಿಸಬೇಕಾಗಿತ್ತು. ಆದರೆ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಬದಿಗಿಟ್ಟು ಕಾನೂನು ತರಲು ಹೊರಟಿರುವುದು ಶೇ.82 ವರ್ಗದ ಸರ್ಕಾರಿ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

Back To Top