Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಆಂಬುಲೆನ್ಸ್​ನಲ್ಲೇ ನರಳಿದ ರೋಗಿ!

Sunday, 06.08.2017, 3:00 AM       No Comments

ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಆಂಬುಲೆನ್ಸ್ ಬಾಗಿಲು ತೆರೆಯಲು ಸಾಧ್ಯವಾಗದಿದ್ದರಿಂದ ರೋಗಿ ಹಾಗೂ ಸಂಬಂಧಿಕರು ಅರ್ಧಗಂಟೆಗೂ ಹೆಚ್ಚು ಕಾಲ ಪರದಾಡುವಂತಾಯಿತು. ತಾಲೂಕಿನ ಅಮಚವಾಡಿಯ ರಾಮು ಎಂಬುವರು ತೆಂಗಿನಕಾಯಿ ಸುಲಿಯುವ ಕೆಲಸ ಮಾಡುತ್ತಿದ್ದರು, ಶನಿವಾರ ಬೆಳಗ್ಗೆ ಕರಿನಂಜನಪುರದಲ್ಲಿ ಕಾಯಿ ಸುಲಿಯುವಾಗ ಯಂತ್ರ ಅಚಾನಕ್ಕಾಗಿ ಹೊಟ್ಟೆಗೆ ಚುಚ್ಚಿಕೊಂಡು ರಕ್ತಸ್ರಾವವಾಗಿದೆ. ತೀವ್ರ ನರಳಾಡುತ್ತಿದ್ದ ಅವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್ ಮೂಲಕ ಕರೆತರಲಾಯಿತು. ಆಸ್ಪತ್ರೆಗೆ ಬಂದಾಗ ಆಂಬುಲೆನ್ಸ್ ಬಾಗಿಲು ತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಗಾಯಾಳುವಿನ ನರಳಾಟ ಹೆಚ್ಚಾಗಿದ್ದರಿಂದ ಒಳಗಿದ್ದ ಸಂಬಂಧಿಕರು ರಾಡ್​ನಿಂದ ಮೀಟಿ ಬಾಗಿಲು ತೆರೆದು, ಆಸ್ಪತ್ರೆಗೆ ದಾಖಲಿಸಿದರು.

Leave a Reply

Your email address will not be published. Required fields are marked *

Back To Top