Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಆಂಡ್ರಾಯ್ಡ್ ಹೊಸ ಆವೃತ್ತಿಗೆ ಸಿಕ್ತು ಕ್ರೀಮ್ ಬಿಸ್ಕತ್ ಹೆಸರು!

Sunday, 27.08.2017, 3:03 AM       No Comments

| ಟಿ.ಜಿ. ಶ್ರೀನಿಧಿ

ಕಂಪ್ಯೂಟರಿನಂತೆ ಕೆಲಸಮಾಡಬಲ್ಲ ಮೊಬೈಲ್ ಫೋನುಗಳನ್ನು ಸ್ಮಾರ್ಟ್​ಫೋನ್ ಎಂದು ಕರೆಯುವುದು ವಾಡಿಕೆ. ಕಂಪ್ಯೂಟರಿನಂತೆಯೇ ಇವುಗಳಲ್ಲೂ ನಮ್ಮ ಆಯ್ಕೆಯ ತಂತ್ರಾಂಶಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳುವುದು, ಬಳಸುವುದು ಸಾಧ್ಯ. ಸ್ಮಾರ್ಟ್​ಫೋನೂ ಕಂಪ್ಯೂಟರಿನಂತೆಯೇ ಎಂದಮೇಲೆ ಕಂಪ್ಯೂಟರಿನಲ್ಲಿರುವಂತೆ ಅದರಲ್ಲೂ ಓಎಸ್ (ಆಪರೇಟಿಂಗ್ ಸಿಸ್ಟಂ, ಕಾರ್ಯಾಚರಣ ವ್ಯವಸ್ಥೆ) ಇರಬೇಕು – ಕಂಪ್ಯೂಟರಿನಲ್ಲಿ ವಿಂಡೋಸ್, ಲಿನಕ್ಸ್ ಗಳೆಲ್ಲ ಇದ್ದಂತೆ. ಇತರ ತಂತ್ರಾಂಶಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳಲು, ಬಳಸಲು ಇದು ಸಹಾಯ ಮಾಡುತ್ತದೆ. ಸ್ಮಾರ್ಟ್​ಫೋನುಗಳಲ್ಲಿ ಬಳಕೆಯಾಗುವ ಓಎಸ್​ಗಳ ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ಈ ಪರಿಚಯ ಎಷ್ಟರಮಟ್ಟಿನದು ಎಂದರೆ ಅನೇಕ ಮಂದಿ ಸ್ಮಾರ್ಟ್​ಫೋನುಗಳನ್ನು ಆಂಡ್ರಾಯ್ಡ್ ಫೋನುಗಳೆಂದೇ ಗುರುತಿಸುತ್ತಾರೆ. ಇದು ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್​ನ ಉತ್ಪನ್ನ. ಅಮೆರಿಕದ ತಂತ್ರಜ್ಞ ಆಂಡಿ ರುಬಿನ್ ಎಂಬಾತ ತನ್ನ ಸಂಗಡಿಗರ ಜೊತೆಯಲ್ಲಿ ರೂಪಿಸುತ್ತಿದ್ದ ಈ ಕಾರ್ಯಾಚರಣ ವ್ಯವಸ್ಥೆಯನ್ನು 2005ರಲ್ಲಿ ಕೊಂಡುಕೊಂಡ ಗೂಗಲ್ 2007ನೇ ಇಸವಿಯಲ್ಲಿ ಅದನ್ನು ಮುಕ್ತ ತಂತ್ರಾಂಶದ ರೂಪದಲ್ಲಿ ಬಿಡುಗಡೆಮಾಡಿತು. ಮೊಬೈಲ್ ಹ್ಯಾಂಡ್​ಸೆಟ್​ಗಳಿಗೆ ಮುಕ್ತ ಮಾನಕಗಳನ್ನು (ಸ್ಟಾಂಡರ್ಡ್) ರೂಪಿಸುವ ಉದ್ದೇಶದಿಂದ ‘ಓಪನ್ ಹ್ಯಾಂಡ್​ಸೆಟ್ ಅಲಯನ್ಸ್’ ಒಕ್ಕೂಟ ರೂಪುಗೊಂಡಿದ್ದೂ ಅದೇ ಸಮಯದಲ್ಲಿ. ಅಂದಹಾಗೆ ಆಂಡ್ರಾಯ್ಡ್ ಎಂಬ ಹೆಸರಿನ ಅರ್ಥ ‘ಮನುಷ್ಯನಂತೆ ಕಾಣುವ, ಮನುಷ್ಯನಂತೆ ವರ್ತಿಸುವ ರೋಬಾಟ್’ ಎಂದು. ಇದು ಆಂಡಿ ರುಬಿನ್​ನ ಅಡ್ಡಹೆಸರೂ ಆಗಿತ್ತಂತೆ. ಆಂಡ್ರಾಯ್ಡ್ ಒಂದು ಮುಕ್ತ ತಂತ್ರಾಂಶವಾಗಿರುವುದರಿಂದ ಇದನ್ನು ಯಾರು ಬೇಕಾದರೂ ಬಳಸುವುದು, ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸಾಧ್ಯ. ಹೀಗಾಗಿಯೇ ಬಹುತೇಕ ಮೊಬೈಲ್ ತಯಾರಕರು ತಮ್ಮ ಫೋನುಗಳಲ್ಲಿ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯನ್ನು ತಮ್ಮ ಆಯ್ಕೆಗೆ ತಕ್ಕಂತೆ ಬದಲಿಸಿಕೊಂಡು ಬಳಸುತ್ತಿದ್ದಾರೆ. ಆಂಡ್ರಾಯ್್ಡ ಒಂದೇ ಆವೃತ್ತಿ ಬಳಸುವ ಬೇರೆಬೇರೆ ಸಂಸ್ಥೆಯ ಫೋನುಗಳಲ್ಲಿ ಬೇರೆಬೇರೆ ಸೌಲಭ್ಯಗಳಿರುತ್ತವಲ್ಲ, ಅದಕ್ಕೆ ಇದೇ ಕಾರಣ. ಲಿನಕ್ಸ್ ಆಧರಿಸಿ ಆಂಡ್ರಾಯ್ಡ್ ರೂಪುಗೊಂಡ ಹಾಗೆಯೇ ಆಂಡ್ರಾಯ್ಡ್ ಆಧರಿಸಿ ಹಲವು ಹೊಸ ಕಾರ್ಯಾಚರಣ ವ್ಯವಸ್ಥೆಗಳೂ ರೂಪುಗೊಂಡಿವೆ. ಆಂಡ್ರಾಯ್್ಡಲ್ಲಿ ಕೆಲಸಮಾಡಬಲ್ಲ ತಂತ್ರಾಂಶಗಳನ್ನು (ಆಪ್) ಯಾರು ಬೇಕಾದರೂ ರಚಿಸಿ ಪ್ರಕಟಿಸಲು ಸಾಧ್ಯವಾಗಿರುವುದಕ್ಕೂ ಅದರ ಮುಕ್ತ ಸ್ವರೂಪವೇ ಕಾರಣ (ಅಂದಹಾಗೆ ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಬಳಸಬಹುದಾದ ಆಪ್​ಗಳನ್ನು ಒದಗಿಸುವ ಗೂಗಲ್ ಪ್ಲೇ ಸ್ಟೋರ್ ಅನ್ನು ಗೂಗಲ್ ಸಂಸ್ಥೆಯೇ ನಿರ್ವಹಿಸುತ್ತದೆ, ಹಾಗೂ ಇದಕ್ಕಾಗಿ ತಂತ್ರಾಂಶ ತಯಾರಕರಿಂದ ಶುಲ್ಕವನ್ನೂ ಪಡೆದುಕೊಳ್ಳುತ್ತದೆ). ಆಂಡ್ರಾಯ್್ಡ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಆ ಹೆಸರುಗಳು ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುತ್ತವೆ (ಈ ಅಭ್ಯಾಸ ಶುರುವಾದದ್ದು ಆಂಡ್ರಾಯ್್ಡ ಮೂರನೇ ಬಿಡುಗಡೆಯಿಂದ; ಹಾಗಾಗಿ ಸಿಹಿತಿಂಡಿಗಳ ಪಟ್ಟಿ ಶುರುವಾಗುವುದು ‘ಎ’ ಬದಲು ‘ಸಿ’ ಅಕ್ಷರದಿಂದ ಎನ್ನುವುದು ವಿಶೇಷ). ಕಪ್​ಕೇಕ್, ಡೋನಟ್, ಎಕ್ಲೇರ್, ಫೋ›ಯೋ (‘ಫೋ›ಜನ್ ಯೋಗರ್ಟ್’ ಎನ್ನುವುದರ ಹ್ರಸ್ವರೂಪ), ಜಿಂಜರ್​ಬ್ರೆಡ್, ಹನಿಕೂಂಬ್, ಐಸ್ಕ್ರೀಮ್ ಸ್ಯಾಂಡ್​ವಿಚ್, ಜೆಲ್ಲಿಬೀನ್, ಕಿಟ್​ಕ್ಯಾಟ್, ಲಾಲಿಪಾಪ್, ಮಾರ್ಶ್​ವ್ಯಾಲೋ, ನೌಗಾಟ್​ಗಳೆಲ್ಲ ಆದಮೇಲೆ ಇದೀಗ ಆಂಡ್ರಾಯ್್ಡ ಕಾರ್ಯಾಚರಣ ವ್ಯವಸ್ಥೆಯ ಎಂಟನೇ ಆವೃತ್ತಿಗೆ ಓರಿಯೋ ಕ್ರೀಮ್ ಬಿಸ್ಕತ್ತಿನ ಹೆಸರಿಡಲಾಗಿದೆ. ಹೆಚ್ಚಿನ ಸುರಕ್ಷತೆ ಹಾಗೂ ಬ್ಯಾಟರಿ-ಮೆಮೊರಿಗಳ ಮಿತಬಳಕೆ ಈ ಆವೃತ್ತಿಯ ಪ್ರಮುಖ ವೈಶಿಷ್ಟ್ಯಳೆಂದು ಗೂಗಲ್ ಹೇಳಿಕೊಂಡಿದೆ. ಹಲವು ಆಂಡ್ರಾಯ್ಡ್ ಫೋನುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ‘ಗೂಗಲ್ ಪ್ಲೇ ಪೊ›ಟೆಕ್ಟ್’ ಸೌಲಭ್ಯವನ್ನು ಆಂಡ್ರಾಯ್ಡ್ ಓರಿಯೋ ಆವೃತ್ತಿಯಲ್ಲಿ ಪೂರ್ವನಿಯೋಜಿತವಾಗಿ ಸೇರಿಸಲಾಗುತ್ತಿದೆ. ಸಂಶಯಾಸ್ಪದ ಆಪ್​ಗಳ ಮೇಲೆ ನಿಗಾ ವಹಿಸುವುದು, ಮೊಬೈಲಿನಲ್ಲಿರುವ ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳಲು ನೆರವಾಗುವುದು ಈ ಸೌಲಭ್ಯದ ಉದ್ದೇಶ. ವಿವಿಧ ಆಪ್​ಗಳು ಕಳಿಸುವ ಸಂದೇಶಗಳನ್ನು (ನೋಟಿಫಿಕೇಶನ್) ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವ ವ್ಯವಸ್ಥೆಯನ್ನೂ ಈ ಆವೃತ್ತಿಯಲ್ಲಿ ಸೇರಿಸಲಾಗುತ್ತಿದೆಯಂತೆ. ತಂತ್ರಾಂಶ ಅಭಿವೃದ್ಧಿಪಡಿಸುವವರಿಗೆ ನೆರವಾಗುವ ಹಲವು ಹೊಸ ಸವಲತ್ತುಗಳೂ ಓರಿಯೋದಲ್ಲಿವೆ. ’ಪಿಕ್ಚರ್-ಇನ್-ಪಿಕ್ಚರ್’ ಮಾದರಿಯಲ್ಲಿ ಎರಡು ಆಪ್​ಗಳನ್ನು ಏಕಕಾಲದಲ್ಲೇ ಬಳಸಲು ನೆರವಾಗುವ ಸೌಲಭ್ಯ ಕೂಡ ಇದರಲ್ಲಿರಲಿದೆ. ಇದು ಆಂಡ್ರಾಯ್ಡ್ ನೌಗಾಟ್​ನಲ್ಲಿ ಪರಿಚಯಿಸಲಾದ ಸ್ಪಿ್ಲಟ್ ಸ್ಕ್ರೀನ್ ವ್ಯವಸ್ಥೆಗಿಂತ (ಅರ್ಧ ಪರದೆಯಲ್ಲಿ ಒಂದು ಆಪ್, ಇನ್ನರ್ಧದಲ್ಲಿ ಇನ್ನೊಂದು ಆಪ್) ಭಿನ್ನ ಎಂದು ಗೂಗಲ್ ಹೇಳಿದೆ. ತಾಂತ್ರಿಕ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವವರಿಗೆ ಈ ಆವೃತ್ತಿಯಲ್ಲಿ ಹೊಸ ರೂಪದ ಎಮೋಜಿಗಳೂ ದೊರಕಲಿವೆ. ಈ ಹಿಂದಿನ ಆವೃತ್ತಿಗಳಂತೆ ಆಂಡ್ರಾಯ್ಡ್ ಓರಿಯೋ ಕೂಡ ಗೂಗಲ್ ನೆಕ್ಸಸ್ ಹಾಗೂ ಪಿಕ್ಸೆಲ್ ಫೋನುಗಳಿಗೆ ಮೊದಲು ಲಭ್ಯವಾಗಲಿದೆ. ಇನ್ನಿತರ ಫೋನುಗಳ ಬಳಕೆದಾರರು ಓರಿಯೋ ಸವಿಯಲು ತಮ್ಮತಮ್ಮ ಮೊಬೈಲ್ ಸಂಸ್ಥೆಗಳ ನಿರ್ಧಾರಕ್ಕಾಗಿ ಕಾಯುವುದು ಅನಿವಾರ್ಯ.

ಕಾರ್ಟೂನ್​ಗಳ ಜತೆಗೂ ಮಾತನಾಡಿ!

ಮಕ್ಕಳಿಗೆ ಕಾರ್ಟೂನ್​ನಲ್ಲಿ ಬರುವ ಪಾತ್ರಗಳೆಂದರೆ ಇಷ್ಟ. ಇವುಗಳು ಅವರ ಪಕ್ಕದಲ್ಲೇ ಕುಳಿತು ಸಂಭಾಷಣೆ ನಡೆಸುವಂತಾದರೆ! ಡಿಸ್ನಿಯ ಸಂಶೋಧಕರು ಇದನ್ನೂ ಸಾಧ್ಯವಾಗಿಸಿದ್ದಾರೆ. ಡಿಸ್ನಿ ಮ್ಯಾಜಿಕ್ ಬೆಂಚ್ ಎಂಬ ನೂತನ ಕಾನ್ಸೆಪ್ಟ್ ಪರಿಚಯಿಸಿದ್ದು, ಇದರಲ್ಲಿ ಕ್ಯಾಮೆರಾ ಮತ್ತು ಸೆನ್ಸರ್​ಗಳನ್ನು ಬಳಸಿ 3ಡಿ ಅನಿಮೇಷನ್ ರೂಪಿಸಲಾಗುತ್ತದೆ. ಇದರಲ್ಲಿ ವ್ಯಕ್ತಿ ಬೆಂಚಿನ ಮೇಲೆ ಕುಳಿತುಕೊಂಡು ಎದುರಿನಲ್ಲಿರುವ ಸ್ಕ್ರೀನ್​ನಲ್ಲಿ ನೋಡಿದರೆ ಕಾರ್ಟೂನ್ ಪಾತ್ರವೊಂದು ಅವರ ಪಕ್ಕದಲ್ಲಿಯೇ ಕುಳಿತುಕೊಂಡಿರುವಂತೆ ಭಾಸವಾಗುತ್ತದೆ. ಇದರ ಮೂಲಕ ಪಾತ್ರಗಳ ಜತೆಗೆ ಮಾತುಕತೆ ನಡೆಸುವುದಕ್ಕೂ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಮಳೆ ಬರುವಂತಹ, ಪಾತ್ರಗಳೇ ಕೊಡೆಹಿಡಿದಿರುವಂತಹ 3ಡಿ ಅನುಭವಗಳನ್ನೂ ಇದರ ಮೂಲಕ ಪಡೆದುಕೊಳ್ಳಬಹುದಾಗಿದೆ. ಒಂದುರೀತಿಯ ಭ್ರಮೆಯನ್ನಾಧರಿಸಿದ ಮ್ಯಾಜಿಕ್ ಬೆಂಚ್ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವಾಗಲಿದೆ ಎಂದು ಡಿಸ್ನಿ ಹೇಳಿದೆ. ಲಾಸ್​ಏಂಜಲೀಸ್​ನಲ್ಲಿ ಜುಲೈ 30ರಿಂದ ಆಗಸ್ಟ್ 3ರವರೆಗೆ ನಡೆದ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಇಂಟರಾಕ್ಟಿವ್ ಟೆಕ್ನಿಕ್ ಕಾನ್ಪರೆನ್ಸ್ ನಲ್ಲಿ ಪ್ರದರ್ಶಿಸಲಾಯಿತು.

ಬಣ್ಣದಿಂದ ಸಂಗೀತ

ಯಾವುದಾದರೂ ವಸ್ತುವನ್ನು ಮುಟ್ಟಿದಾಗ ಸಂಗೀತ ಹೊರಹೊಮ್ಮುವಂತಿದ್ದರೆ, ಇದಕ್ಕೆಂದೇ ವಿಶೇಷವಾದ ರಿಂಗ್​ಗಳನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಸ್ಮಾರ್ಟ್​ಫೋನ್​ಗೆ ಕನೆಕ್ಟ್ ಮಾಡಿಕೊಂಡು ಬೇರೆ ಬೇರೆ ಬಣ್ಣಗಳ ವಸ್ತುವನ್ನು ಮುಟ್ಟಿದರೆ ವಿಭಿನ್ನವಾದ ಶಬ್ದಗಳು ಮೂಡುತ್ತವೆ. ಇದಕ್ಕೆ ಸ್ಪೆಕ್​ಡ್ರಮ್್ಸ ಎಂದು ಹೆಸರಿಡಲಾಗಿದೆ. ಸ್ಪೆಕ್​ಡ್ರಮ್್ಸ ಆಪ್ ಮೂಲಕ ಸ್ಮಾರ್ಟ್​ಫೋನ್​ಗೆ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ಸ್ಮಾರ್ಟ್​ಫೋನ್​ನ ಜತೆಗೆ 10 ರಿಂಗ್​ಗಳವರೆಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದ್ದು, ಒಂದೊಂದು ಬಣ್ಣಕ್ಕೆ ಒಂದೊಂದು ಶಬ್ದವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಯಾವ ಸಂಗೀತ ಸಾಧನದ ಶಬ್ದಬೇಕು ಎಂದು ಆಯ್ದುಕೊಳ್ಳುವುದಕ್ಕೂ ಅವಕಾಶವಿದೆ. ತಮ್ಮದೆ ಮ್ಯೂಸಿಕ್ ರಚಿಸುವುದಕ್ಕೂ ಅವಕಾಶವಿದ್ದು, ಸಂಗೀತ ಪ್ರಿಯರಿಂದ ಮೆಚ್ಚುಗೆ ಗಳಿಸಿದೆ.

Leave a Reply

Your email address will not be published. Required fields are marked *

Back To Top