Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ಆಂಜನೇಯ ಕೀರ್ತನೆ ಗಾಯನ ಖಾತೆಗೆ ಒಂಭತ್ತು ದಾಖಲೆ!

Monday, 21.08.2017, 3:00 AM       No Comments

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಸಭಾ ಮಂಟಪದಲ್ಲಿ ಭಾನುವಾರ ಒಂಭತ್ತು ದಾಖಲೆಗಾಗಿ 6 ರಾಜ್ಯಗಳ 64 ಭಜನಾ ಮಂಡಳಿಗಳ 2500 ಗಾಯಕರು ನಿರಂತರ 6 ಗಂಟೆ ಏಕಕಾಲಕ್ಕೆ ಶ್ರೀ ಆಂಜನೇಯ ಸ್ವಾಮಿ ಕುರಿತ ಕೀರ್ತನೆಗಳ ಗಾಯನ ಮಾಡಿದರು.

ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನೇತೃತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದವರಷ್ಟೇ ಅಲ್ಲದೆ ಕನ್ನಡೇತರರಾದ ಮಹಾರಾಷ್ಟ್ರ, ಒರಿಸ್ಸಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ಭಜನಾ ಮಂಡಳಿಗಳ ಸದಸ್ಯರು ಕನ್ನಡದಲ್ಲಿ ರಚಿತವಾದ ಹರಿದಾಸರ ಕೀರ್ತನೆಗಳನ್ನು ಹಾಡಿದರು. ಕನ್ನಡ ಶಬ್ದಗಳ ಉಚ್ಚಾರ, ಲಯಬದ್ಧವಾಗಿ ಕೀರ್ತನೆಗಳ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತೆಲುಗು ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಹೈದರಾಬಾದ್​ನ ಉಪಶಾಖೆಯಿಂದ ಆಗಮಿಸಿರುವ ಡಾ.ಬಾಲಮುರಳಿ, ಜಯಸಿಂಗ್, ಹಾಡುಗಾರರ ಸಂಖ್ಯೆ ಹಾಗೂ ಹಾಡುಗಾರಿಕೆ, ರಾಗ, ತಾಳ, ಲಯಗಳನ್ನು ಪರೀಕ್ಷಿಸಿದರು.

ಇವು ಒಂಭತ್ತು ದಾಖಲೆಗಳು

ಜಗತ್ತಿನಲ್ಲಿ ಒಟ್ಟು 14 ರೆಕಾರ್ಡ್ಸ್​ಗಳಿವೆ. ಈ ಪೈಕಿ 9 ರೆಕಾರ್ಡ್ಸ್

ಗಳನ್ನು ಏಕಕಾಲಕ್ಕೆ ದಾಖಲಿಸಲು ಶ್ರೀಮಠ ಯತ್ನಿಸಿದೆ. ಭಾನುವಾರದ ಕಾರ್ಯಕ್ರಮ ಒಂಭತ್ತು ದಾಖಲೆಗಾಗಿ ನಡೆದಿದೆ.

1. ಇಂಡಿಯನ್ ಟ್ಯಾಲೆಂಟ್ ಆರ್ಗನೈಸೇಷನ್ ರೆಕಾರ್ಡ್

2. ಗೋಲ್ಡನ್ ಸ್ಟಾರ್ಸ್ ರೆಕಾರ್ಡ್

3. ವಂಡರ್ ಬುಕ್ ಆಫ್ ರೆಕಾರ್ಡ್

4. ಮಾರ್ವಲೆಸ್ ರೆಕಾರ್ಡ್

5. ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ

6. ಜೀನಿಯಸ್ ಬುಕ್ ಆಫ್ ರೆಕಾರ್ಡ್

7. ಮಿರಾಕಲ್ ವರ್ಲ್ಡ್ ರೆಕಾರ್ಡ್

8. ಹೈರೇಂಜ್ ಬುಕ್ ಆಫ್ ರೆಕಾರ್ಡ್

9. ತೆಲುಗು ಬುಕ್ ಆಫ್ ರೆಕಾರ್ಡ್

 

ಜನರತ್ತ ದಾಸ ಸಾಹಿತ್ಯ ಕೊಂಡೊಯ್ಯುವ ಕೆಲಸ

ದಾಸ ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಶ್ರೀಮಠದ ಶ್ರೀ ಗುರುಸಾರ್ವ ಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಕೆಲಸ ಮಾಡುತ್ತಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಅನುಗ್ರಹ ಸಂದೇಶ ನೀಡಿದ ಅವರು, ಶ್ರೀಮಠದ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್​ನ ಅಡಿಯಲ್ಲಿ ಈ ಸೇವೆ ಮಾಡುತ್ತಿದೆ. ಮಂತ್ರಾಲಯದಲ್ಲಿ ವಿಶ್ವ ಹರಿದಾಸ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಶ್ರೀ ಮಠ ಬದ್ಧವಾಗಿದೆ. ಜಾಗತಿಕ ಮಟ್ಟದಲ್ಲಿ ರಾಯರ ಭಕ್ತರಿದ್ದಾರೆ. ಅಂಥ ಭಕ್ತರರಲ್ಲಿ ಅನೇಕರು ದಾಸ ಸಾಹಿತ್ಯ ಪ್ರಾಜೆಕ್ಟ್​ನ ಸದಸ್ಯತ್ವ ಪಡೆದಿದ್ದಾರೆ. ಅಂಥವರೂ ಸೇರಿ ಎಲ್ಲರನ್ನೂ ಒಗ್ಗೂಡಿಸ ಲಾಗುವುದು ಎಂದರು. ಇದೇ ವೇಳೆ ತೆಲುಗು ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ವೀಕರಿಸಿದರು.

 

Leave a Reply

Your email address will not be published. Required fields are marked *

Back To Top