Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ಅಳಿದುಳಿದ ಭತ್ತಕ್ಕೂ ಬೆಂಕಿರೋಗ

Thursday, 17.11.2016, 6:03 AM       No Comments
  • 495 ಹೆಕ್ಟೇರ್ನಲ್ಲಿ ರೋಗಬಾಧೆ |ಅತಂತ್ರ ಸ್ಥಿತಿಯಲ್ಲಿ ರೈತರ ಬದುಕು

ಶೃಂಗೇರಿ: ಮಳೆ ಕೊರತೆ ನಡುವೆಯೂ ಬೆಳೆದಿದ್ದ ಅಲ್ಪಸ್ವಲ್ಪ ಭತ್ತದ ಬೆಳೆಗೆ ಬೆಂಕಿ ರೋಗ ತಗುಲಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ತಾಲೂಕಿನಲ್ಲಿ ಸುಮಾರು 2,600 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದೆ. ಈ ಬಾರಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಮಳೆ, ಕಾರ್ವಿುಕರ ಕೊರತೆಯಿಂದ ಗದ್ದೆಗಳನ್ನು ಖಾಲಿ ಬಿಡಲಾಗಿದೆ. ಉಳಿದ ಭಾಗದಲ್ಲಿ ಸುಮಾರು 495 ಹೆಕ್ಟೇರ್ ಭತ್ತದ ಗದ್ದೆಗಳಿಗೆ ರೋಗಬಾಧೆ ಉಂಟಾಗಿದ್ದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.

ಮಲೆನಾಡಲ್ಲಿ ಹೆಚ್ಚಾಗಿ ವಾಳ್ಯ, ಇಂಟಾನ್, ಐಇಟಿ, ತುಂಗಾ, ಐಆರ್-64 ಮೊದಲಾದ ಭತ್ತದ ತಳಿಗಳನ್ನು ಬೆಳೆಯಲಾಗಿದೆ. ಆದರೆ ನೀರಿನ ಕೊರತೆ ಉಂಟಾಗಿದ್ದರಿಂದ ರೋಗ ಬಾಧಿಸುತ್ತಿದೆ. ಮೊದಲೇ ತಾಲೂಕಿನಲ್ಲಿ ಅಡಕೆಗೆ ಹಳದಿ ಎಲೆರೋಗ ವ್ಯಾಪಕವಾಗಿ ಹರಡಿದೆ. ಈಗ ಭತ್ತಕ್ಕೆ ಈ ಸ್ಥಿತಿ ಬಂದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಆರಂಭದಲ್ಲಿ ನೀರಿನ ಹರಿವು ಇರುವ ಗದ್ದೆಗಳಲ್ಲಿ ಶೇ.70ರಷ್ಟು ಫಸಲು ನಿರೀಕ್ಷಿಸಲಾಗಿತ್ತು. ಆದರೆ ಮಳೆಯಿಲ್ಲದೆ ಮಕ್ಕಿಗದ್ದೆಗಳು ಒಣಗುತ್ತಿವೆ.

ತಾಲೂಕಿನ ವಿದ್ಯಾರಣ್ಯಪುರ, ತ್ಯಾವಣ, ನೆಮ್ಮಾರ್, ಕಿಗ್ಗಾ, ಮಸಿಗೆ, ಸಸಿಮನೆ, ಅಡ್ಡಗದ್ದೆ ಮೊದಲಾದೆಡೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೂರು ದಿನಗಳ ಕಾಲ ಸಮೀಕ್ಷೆ ನಡೆಸಿದ್ದಾರೆ. ವರದಿಯನ್ನು ಜಿಲ್ಲಾ ಕೃಷಿ ಕೇಂದ್ರ ಹಾಗೂ ಜಿಲ್ಲಾಧಿಕಾರಿಗೆ ಕಳುಹಿಸಿದ್ದಾರೆ. ಸರಕಾರದಿಂದ ರೈತರು ಸಹಕಾರದ ನಿರೀಕ್ಷೆಯಲ್ಲಿದ್ದಾರೆ.

16-smg-paddy

ಹಳದಿ ಎಲೆ ರೋಗದಿಂದ ಅಡಕೆ ಬೆಳೆ ಕಳೆದುಕೊಂಡಿರುವ ರೈತರಿಗೆ ಭತ್ತಕ್ಕೆ ಬೆಂಕಿ ರೋಗ ತಗುಲಿ ಆತಂಕಕ್ಕೀಡಾಗಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು.

| ಸಸಿಮನೆ ಶಿವಶಂಕರ್ ಕೃಷಿಕ

ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಆಗಿರುವುದರಿಂದ ಭತ್ತಕ್ಕೆ ಬೆಂಕಿರೋಗ ತಗುಲಿದೆ. ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಲು ಸೂಕ್ತ ಸಲಹೆ ನೀಡಲಾಗಿದೆ.

| ಜಯರಾಜ್ ಕೃಷಿ ಅಧಿಕಾರಿ

ಮಲೆನಾಡಿನ ರೈತರ ಸ್ಥಿತಿ ಅತಂತ್ರ ಸ್ಥಿತಿಯಲ್ಲಿದೆ. ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕಿದೆ. ಜಿಪಂ ಸಾಮಾನ್ಯ ಸಭೆಯಲ್ಲಿ ತಾಲೂಕಿನ ರೈತರ ಸ್ಥಿತಿ ಕುರಿತು ಮನವರಿಕೆ ಮಾಡುತ್ತೇನೆ. ಸರ್ಕಾರದಿಂದ ಪರಿಹಾರ ಕೊಇಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

| ಬಿ.ಶಿವಶಂಕರ್ ಜಿಪಂ ಸದಸ್ಯ

 

 

Leave a Reply

Your email address will not be published. Required fields are marked *

Back To Top