Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ಅಮೆರಿಕದಲ್ಲೂ ಗಣೇಶೋತ್ಸವ ರಂಗು

Friday, 11.08.2017, 3:00 AM       No Comments

ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದೇಶಾದ್ಯಂತ ವಿದ್ಯಾಧಿಪತಿಯ ಉತ್ಸವಕ್ಕೆ ಭರದ ಸಿದ್ಧತೆ ಶುರುವಾಗಿವೆ. ಅಂತೆಯೇ ಲಕ್ಷಾಂತರ ಮೈಲು ದೂರದ ಅಮೆರಿಕದಲ್ಲೂ ಗಣೇಷ ಚತುರ್ಥಿ ಆಚರಣೆಗೆ ತಯಾರಿ ಜೋರಾಗಿಯೇ ನಡೆದಿದೆ. ಈ ಕುರಿತು ನ್ಯೂಜೆರ್ಸಿ ಪ್ರವಾಸದಲ್ಲಿರುವ ವಿಜಯವಾಣಿ ಓದುಗ ನಿವೃತ್ತ ಬ್ಯಾಂಕ್ ಅಧಿಕಾರಿ, ಮಂಗಳೂರಿನ ಪಿ.ಕೆ.ರವೀಂದ್ರ ಪೈ ಕಳುಹಿಸಿರುವ ವರದಿ ಇಲ್ಲಿದೆ.

 ಗಣೇಶ ಚತುರ್ಥಿ(ಆ.25) ಸಮೀಪಿಸುತ್ತಿದ್ದಂತೆ ಅಮೆರಿಕದಲ್ಲೂ ಹಬ್ಬ ಆಚರಣೆಗೆ ಭರ್ಜರಿ ಸಿದ್ಧತೆಗಳು ಆರಂಭಗೊಂಡಿದ್ದು, ಬಣ್ಣ ಬಣ್ಣದ ಗಣಪ ಮೂರ್ತಿಗಳು ಮಳಿಗೆಗಳನ್ನು ಅಲಂಕರಿಸಿವೆ.

ಭಾರತೀಯರು ಅಧಿಕ ಪ್ರಮಾಣದಲ್ಲಿರುವ ಅಮೆರಿಕದ ಕೆಲ ಭಾಗಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ರಂಗೇರಿದೆ. ಭಾರತೀಯ ಮಳಿಗೆಗಳಾದ ಪಾಟಿಧಾರ್ ಸೂಪರ್ ಬಜಾರ್, ಪಟೇಲ್ ಬ್ರದರ್ಸ್, ಅಪ್ನಾ ಸ್ಟೋರ್​ಗಳಲ್ಲಿ ಅಲ್ಲಿನ ಜನರ ಅಭಿರುಚಿಗೆ ಸಾಟಿಯಾಗುವಂಥ ನೂರಾರು ಮೂರ್ತಿಗಳು ರಾರಾಜಿಸುತ್ತಿವೆ. ಜತಗೆ ಅಲಂಕಾರಕ್ಕೆ ಬೇಕಾಗುವ ಪರಿಕರಗಳು ಕೂಡ ಇಲ್ಲಿಯೇ ಲಭ್ಯ. ಭಾರತೀಯರ ಮನೆಗಳಲ್ಲಿ ಮಾತ್ರವಲ್ಲದೆ, ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳೂ ಇಲ್ಲಿನ ಸ್ಥಳೀಯ ಜನರಿಗೆ ಆಕರ್ಷಣೆಯಾಗಿವೆ. ಮುಖ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ)ನಿಂದ ನಿರ್ವಿುತವಾದ ಮೂರ್ತಿಗಳನ್ನು ಭಾರತದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವುಗಳ ಬೇಡಿಕೆ ಕಡಿಮೆಯಾಗುತ್ತಿರುವುದು ಸ್ಪಷ್ಟ. ಜನರು ಅವೆ ಮಣ್ಣಿನ ಮೂರ್ತಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪಿಒಪಿ ಮೂರ್ತಿಗಳನ್ನು ವಿಸರ್ಜಿಸಲು ಸಮರ್ಪಕ ವ್ಯವಸ್ಥೆಗಳಿಲ್ಲದಿರುವುದು. ಸಾರ್ವಜನಿಕ ಕೆರೆಗಳಲ್ಲಿ ದೊಡ್ಡ ಪಿಒಪಿ ಮೂರ್ತಿಗಳನ್ನು ವಿಸರ್ಜಿಸಲು ಅನುಮತಿ ನೀಡಲಾಗುತ್ತದೆ. ಅದೇ ಹೊತ್ತಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಅವುಗಳನ್ನು ಹೊರತೆಗೆದು ಕೆರೆಗಳಿಗೆ ಹಾನಿಯಾಗದಂತೆ ಎಚ್ಚರಿಕೆ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ. ಈ ಹಂತದಲ್ಲಿ ಮೂರ್ತಿಗಳು ವಿಕಾರಗೊಳ್ಳುತ್ತವೆ. ಅಲ್ಲದೆ ವಿಸರ್ಜಿತ ವಿಗ್ರಹಗಳನ್ನು ಹೊರತೆಗೆಯುವುದು ಭಾವನಾತ್ಮಕವಾಗಿ ಸರಿಯಲ್ಲ ಎಂಬ ಕಾರಣ ಜನರು ಈಗ ಪರ್ಯಾಯ ಮಾರ್ಗಗಳತ್ತ ಮುಖ ಮಾಡಿದ್ದಾರೆ. ಬಹಳಷ್ಟು ಕಡೆ ಮನೆಗಳಲ್ಲೇ ಬಕೆಟ್​ಗಳಲ್ಲಿ ವಿಸರ್ಜನೆ ಮಾಡುತ್ತಾರೆ.

ಸುಮಾರು 21 ಡಾಲರ್​ನಿಂದ 250 ಡಾಲರ್​ವರೆಗೆ ತರಹೇವಾರಿ ಮೂರ್ತಿಗಳು ಇಲ್ಲಿ ಲಭ್ಯವಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿರುವುದು ವಿದೇಶದಲ್ಲೂ ಭಾರತೀಯರು ತವರು ಸಂಸ್ಕೃತಿ ಮರೆತಿಲ್ಲ ಎನ್ನುವುದಕ್ಕೆ ಸಾಕ್ಷಿ.

Leave a Reply

Your email address will not be published. Required fields are marked *

Back To Top