Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಅಮೆರಿಕದಲ್ಲಿ ವೆಂಕಟೇಶ್ವರಸ್ವಾಮಿ ಅದ್ದೂರಿ ರಥೋತ್ಸವ

Sunday, 09.07.2017, 3:00 AM       No Comments

ಬೆಂಗಳೂರು: ಕ್ಯಾಲಿಫೋರ್ನಿಯಾದ ಸ್ಯಾನ್​ಜೋಸ್​ನ ಬಾಲಾಜಿ ಮಠ ದೇವಸ್ಥಾನದ 5ನೇ ವಾರ್ಷಿಕೋತ್ಸವವನ್ನು ಈಚೆಗೆ ಅದ್ದೂರಿ ಯಾಗಿ ಆಚರಿಸಲಾಯಿತು. 3 ದಿನ ವಿವಿಧ ಧಾರ್ವಿುಕ ಕೈಂಕರ್ಯಗಳು ಆಯೋಜನೆ ಗೊಂಡಿದ್ದವು. ಕುಂಭಾಭಿಷೇಕ, ಕಲಶ ಪೂಜೆ, ಅಷ್ಟೋತ್ತರ ಸೇರಿ ನಾನಾ ಧಾರ್ವಿುಕ ಕಾರ್ಯಕ್ರಮಗಳು ಶ್ರೀನಾರಾಯಣನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದವು.

ಮೊದಲ ದಿನ ದ್ವಾರಪೂಜೆ, ಗೃಹಪ್ರವೇಶ ಗಳನ್ನು ಸ್ವಾಮೀಜಿ ನೆರವೇರಿಸಿದರು. ಮಹಾಲಕ್ಷಿ್ಮೕದೇವಿ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು. ನಂತರ ವೇದಮಂತ್ರಗಳನ್ನು ಪಠಿಸಲಾಯಿತು. ಸಂಜೆ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಮಹಾರಾಷ್ಟ್ರದ ನೃತ್ಯ ಸಂಯೋಜಕಿ ದೀಪಾಲಿ ವಿಚಾರೆ ತಂಡ ಕಥಕ್ ನೃತ್ಯ ಪ್ರದರ್ಶಿಸಿತು. ಗುರು ಭೂಪಾಲ್ ಸಿತಾರ್ ವಾದನ ಮೂಲಕ ರಂಜಿಸಿದರು. ಪ್ರದೀಪ್ ಜೋಶಿ ತಂಡ ಸಂಗೀತ ಧ್ವನಿ ಕಾರ್ಯಕ್ರಮ ನಡೆಸಿಕೊಟ್ಟಿತು.

ಎರಡನೇ ದಿನ 108 ಕಲಶ ಪೂಜೆ ನಡೆದು ನಂತರ ದೇವಸ್ಥಾನದ ಆವರಣದಲ್ಲಿ ಶ್ರೀವೆಂಕಟೇಶ ಶ್ರೀದೇವಿ ಮತ್ತು ಭೂದೇವಿಯರ ಉತ್ಸವ ಮೂರ್ತಿಗಳನ್ನು ಹೊತ್ತ ರಥೋತ್ಸವ ಜರುಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿ ಆಶ್ ಕಾಲ್ರಾ, ಕಾನ್​ಸೆನ್ ಚು, ಸೆನೆಟ್ ಸದಸ್ಯ ಬಾಬ್ ವೈಕೋವಸ್ಕಿ, ಕ್ಯೂಪರ್​ಟಿನೊ ಸಿಟಿಯ ಉಪಮೇಯರ್ ಸವಿತಾ ವೈದ್ಯನಾಥನ್ ಭಾಗವಹಿಸಿದ್ದರು.

ಕೊನೆ ದಿನವಾದ ನಿರ್ಜಲ ಏಕಾದಶಿಯಂದು ಪಾಂಡುರಂಗ-ರುಕ್ಮಿಣಿ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ಭಾರತೀಯ ಪರಂಪರೆಯ ಪಂಚೆ, ಸೀರೆಗಳನ್ನು ತೊಟ್ಟು ಸಂಭ್ರಮಿಸಿದರು.

ಬಾಲಾಜಿ ದೇವಸ್ಥಾನದ ಮೂಲಕ ನಿಸ್ವಾರ್ಥ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ನಾರಾಯಣನಂದ ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *

Back To Top