Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಅಮೃತ ಆಹಾರ ಹಣ್ಣುಗಳು

Thursday, 04.05.2017, 3:00 AM       No Comments

| ಡಾ. ವೆಂಕಟ್ರಮಣ ಹೆಗಡೆ

ನಮ್ಮ ದೇಹದಲ್ಲಿ ಅತಿ ಹೆಚ್ಚಾಗಿ, ವೇಗವಾಗಿ ನಡೆಯುತ್ತಿರುವಂತಹ ಆಕ್ಸಿಡೇಶನ್ ಪ್ರಕ್ರಿಯೆಯೇ ನಮ್ಮ ಹಲವಾರು ತೊಂದರೆಗಳಿಗೆ ಕಾರಣವಾಗುತ್ತಿದೆ. ಹೃದಯಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳಲು ಸಹ ಈ ಹೆಚ್ಚಾದ ಪ್ರಕ್ರಿಯೆಯೇ ಕಾರಣ. ನಮ್ಮನ್ನು ಮುಪ್ಪು ವೇಗವಾಗಿ ಅಪ್ಪಿಕೊಳ್ಳಲು ದಾರಿ ಮಾಡಿಕೊಡುತ್ತಿರುವುದು ಆಕ್ಸಿಡೇಶನ್ ಪ್ರಕ್ರಿಯೆ. ಆದರೆ ಕಡಿಮೆ ವಯಸ್ಸಿನಲ್ಲಿಯೇ ಹೆಚ್ಚು ವಯಸ್ಸಾದಂತೆ ಕಂಡುಬರಲು ವೇಗವಾಗಿ ದೇಹದಲ್ಲಿ ನಡೆಯುತ್ತಿರುವ ಆಕ್ಸಿಡೇಶನ್ ಪ್ರಕ್ರಿಯೆ ನಾಂದಿ. ಹಾಗಾಗಿ ಆಕ್ಸಿಡೇಶನ್ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕು. ಆಕ್ಸಿಡೇಶನ್ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಆಂಟಿ-ಆಕ್ಸಿಡಂಟ್ಸ್ ಬೇಕು. ಆಂಟಿ-ಆಕ್ಸಿಡಂಟ್ಸ್​ಗಳು ಹಣ್ಣುಗಳಲ್ಲಿರುತ್ತದೆ. ಹಾಗಾಗಿ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಇವು ಹೃದಯಸಂಬಂಧಿ ಸಮಸ್ಯೆಗಳಿಂದ ದೂರವಿರಲು ಸಹಾಯ ಮಾಡುತ್ತವೆ.

ಕೇವಲ ದ್ರಾಕ್ಷಿಯ ಜ್ಯೂಸ್ ಆರೈಕೆಯಿಂದ ಹೃದಯದ ಬ್ಲಾಕ್​ಗಳನ್ನು ಕಡಿಮೆ ಮಾಡಿಕೊಳ್ಳುವ ವಿಶೇಷ ರೀತಿಯ ಚಿಕಿತ್ಸೆ ಯುರೋಪ್ ದೇಶಗಳಲ್ಲಿದೆ. ಕಡಿಮೆಯಾಗಲು ಬಹು ಕಷ್ಟಕರವಾದ ಆಟೋ ಇಮ್ಯೂನ್ ಕಾಯಿಲೆಯಾದ ಅಲ್ಸರೇಟಿವ್ ಕೊಲೈಟಿಸ್​ನ್ನು ಪೇರಲೆಹಣ್ಣಿನ ಆಹಾರ ಔಷಧಿಯಿಂದ ಕಡಿಮೆ ಮಾಡಬಹುದಾಗಿದೆ. ಒಂದು ಸಂಶೋಧನೆಯಂತೆ ಹೃದಯದಲ್ಲಿ ಬ್ಲಾಕ್ ಇರುವ ರೋಗಿಗಳ ಎರಡು ಗುಂಪನ್ನು ಮಾಡಲಾಯಿತು. ಒಂದು ಗುಂಪಿಗೆ ಪ್ರತಿನಿತ್ಯ ದಾಳಿಂಬೆರಸವನ್ನು ಮೂರು ವರ್ಷಗಳ ಕಾಲ ನೀಡಲಾಯಿತು. ಆಶ್ಚರ್ಯವೆಂಬಂತೆ ಅದರಲ್ಲಿನ ಹಾರ್ಟ್ ಬ್ಲಾಕ್ ಶೇ. 30ರಷ್ಟು ಕಡಿಮೆಯಾಗಿತ್ತು. ಮತ್ತೊಂದು ಗುಂಪಿಗೆ ಯಾವುದೇ ಜ್ಯೂಸ್​ನ್ನು ನೀಡಲಿಲ್ಲ. ಇವರಲ್ಲಿನ ಬ್ಲಾಕ್ ಶೇ. 10ರಷ್ಟು ಹೆಚ್ಚಾಗಿತ್ತು. ಇದು ಹೃದಯಸಂಬಂಧಿ ಬ್ಲಾಕ್​ಗಳನ್ನು ಕಡಿಮೆ ಮಾಡುವಲ್ಲಿ ಹಣ್ಣುಗಳು ಎಷ್ಟು ಸಹಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ.

ಪೇರಲೆ (ಸೀಬೆ) ಅತಿ ಹೆಚ್ಚು ಆಂಟಿ ಆಕ್ಸಿಡೆಂಟ್ ಹೊಂದಿರುವ ಹಣ್ಣು.

ಇದರಲ್ಲಿ ವಿಟಮಿನ್ ಸಿ ಜೀವಸತ್ವವು ಹೇರಳವಾಗಿದೆ. ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯೋವಾಸ್ಕ್ಯುಲರ್ ಡಿಸೀಸೆಸ್ ಹೇಳುವಂತೆ, ಪ್ರತಿನಿತ್ಯ ಸೀಬೆ ಹಣ್ಣು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟಾಲ್ ಕರಗುತ್ತದೆ. ಟ್ರೈಗ್ಲಿಸರೈಡ್ ಕರಗುತ್ತದೆ. ರೋಗನಿರೋಧಕಶಕ್ತಿಯು ವೃದ್ಧಿಸುತ್ತದೆ. ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ವರದಿಯಂತೆ ಪ್ರತಿದಿನ ಮೂರು ಸಲ ಹಣ್ಣುಗಳನ್ನು ಸೇವಿಸುವುದರಿಂದ ಶೇ. 30 ಪ್ರತಿಶತ ಹೃದಯ ಸಮಸ್ಯೆಗಳಿಂದ ದೂರವಿರಬಹುದು. ಬೇರೆಬೇರೆ ಬಣ್ಣದ ಹಣ್ಣುಗಳು ಬೇರೆ ಬೇರೆ ರೀತಿಯ ಆಂಟಿ ಆಕ್ಸಿಡೆಂಟ್ಸ್​ಗಳನ್ನು ಹೊಂದಿರುತ್ತವೆ.

ಮಧುಮೇಹಿಗಳು ಹಣ್ಣುಗಳನ್ನು ಸೇವಿಸಲೇಬಾರದೆಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ ಮಾವಿನಹಣ್ಣು, ಚಿಕ್ಕುಹಣ್ಣು (ಸಪೋಟ), ಬಾಳೆಹಣ್ಣು ಹಾಗೂ ಹಲಸಿನ ಹಣ್ಣುಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸಬಹುದು. ಕರಬೂಜ ಕೇವಲ ಕೆಲವೇ ಗ್ರಾಂ.ಗಳಷ್ಟು ಸಕ್ಕರೆ ಅಂಶ ಹೊಂದಿರುತ್ತದೆ. ಪಪ್ಪಾಯವೂ ಮಧುಮೇಹಿಗಳಿಗೆ ಒಳ್ಳೆಯದು. ದೇಹವು ಸಕ್ಕರೆ ಅಂಶವನ್ನು ವೇಗವಾಗಿ ಹೀರಲ್ಪಡದಂತೆ ಇದು ಕಾಯುತ್ತದೆ. ಪೇರಲೆಹಣ್ಣು ಮಧುಮೇಹಿಗಳಿಗೆ ಉತ್ತಮ. ಹೀಗೆ ಹಣ್ಣುಗಳು ಆರೋಗ್ಯವರ್ಧನೆಗೆ ಸಹಾಯ ಮಾಡುತ್ತದೆ. ಆದುದರಿಂದ ಹಣ್ಣುಗಳು ಅಮೃತ ಆಹಾರ.

Leave a Reply

Your email address will not be published. Required fields are marked *

Back To Top