Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ಅಮೃತದಂತಹ ಅಮೃತ ಬಳ್ಳಿ

Monday, 02.10.2017, 3:01 AM       No Comments

| ಡಾ. ವೆಂಕಟ್ರಮಣ ಹೆಗಡೆ

ಅಮೃತಬಳ್ಳಿಯು ಅಮೃತಕ್ಕೆ ಸಮಾನವಾದ ಪದಾರ್ಥ. ದಿವ್ಯ ಔಷಧೀಯ ಗುಣಗಳನ್ನು ಹೊಂದಿರುವ ಅಮೃತಬಳ್ಳಿಯ ಸದ್ಬಳಕೆಯ ಪರಿಕಲ್ಪನೆ ನಮ್ಮಲ್ಲಿ ಮೂಡಬೇಕು. ಜ್ವರ ಕಡಿಮೆ ಮಾಡುವಂತಹ ಅತ್ಯಂತ ಪ್ರಭಾವಿ ಗುಣಗಳನ್ನು ಅಮೃತ ಬಳ್ಳಿ ಹೊಂದಿದೆ. ಇತ್ತೀಚಿಗೆ ನಮಗೆ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಜ್ವರ ಬರುವುದು. ಅದರಲ್ಲೂ ಚಿಕೂನ್​ಗುನ್ಯಾ ಕಾಡುವುದು ಬಹಳ ಸಮಸ್ಯೆಯಾಗಿದೆ. ಯಾವುದೇ ರೀತಿಯ ಜ್ವರವಿರುವಾಗಲೂ ಅಮೃತಬಳ್ಳಿಯ ಕಷಾಯ ಮಾಡಿ ದಿನಕ್ಕೆ ಮೂರು ಬಾರಿ 30 ಎಂಎಲ್​ಗಳಷ್ಟು ಕುಡಿಯುವುದು ಒಳ್ಳೆಯದು.

ಅಮೃತ ಬಳ್ಳಿಯು ನೋವನ್ನು ಕಡಿಮೆ ಮಾಡಲೂ ಸಹಕಾರಿ. ಅಮೃತ ಬಳ್ಳಿ ಹಾಗೂ ಶುಂಠಿಯನ್ನು ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಮೈ ಕೈ ನೋವು, ಗಂಟು ನೋವು ಕಡಿಮೆಯಾಗುತ್ತದೆ. ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಅರಿಶಿಣ ಹಾಗೂ ರಾಸ್ನಾಚೂರ್ಣ ಸೇರಿಸಿ ಕಷಾಯ ಮಾಡಿ ಕುಡಿಯುವುದು. ಅಮೃತ ಬಳ್ಳಿಯ ಪೇಸ್ಟ್ ಮಾಡಿ ನೋವಿರುವ ಭಾಗಕ್ಕೆ ಹಚ್ಚಿ ಅದನ್ನು ಹರಳೆಣ್ಣೆ ಎಲೆಯಿಂದ ಕಟ್ಟಬೇಕು. ಅದರ ಮೇಲಿಂದ ಶಾಖ ನೀಡುವುದರಿಂದ ನೋವು ಕಡಿಮೆಯಾಗುತ್ತದೆ.

ಕಣ್ಣು, ಚರ್ಮ, ಕೂದಲ ಸಮಸ್ಯೆ ನಿರ್ವಹಣೆಗೆ ಒಳ್ಳೆಯದು. ಮಧುಮೇಹ ನಿಯಂತ್ರಣಕ್ಕೂ ಸಹಕಾರಿ. ಅಮೃತಬಳ್ಳಿ, ನೆಲ್ಲಿಕಾಯಿ ಹಾಗೂ ಸ್ವಲ್ಪ ಶುದ್ಧ ಅರಿಶಿಣ ಸೇರಿಸಿ ಕಷಾಯ ಮಾಡಿ ಪ್ರತಿನಿತ್ಯ 30 ಎಂಎಲ್​ನಷ್ಟು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಇದಕ್ಕೆ ಸ್ವಲ್ಪ ಚಕ್ಕೆ ಚೂರ್ಣವನ್ನು ಸೇರಿಸಿ ಸೇವಿಸುವುದರಿಂದ ಡಯಾಬಿಟಿಕ್ ನ್ಯೂರೋಪಥಿಯನ್ನೂ ನಿಯಂತ್ರಿಸಬಹುದು. ಅನೀಮಿಯಾ(ರಕ್ತಹೀನತೆ) ಕಾಡುತ್ತಿರುವಾಗ ಅಮೃತಬಳ್ಳಿಯ ಜ್ಯೂಸ್ ಮಾಡಿ ದಿನಕ್ಕೆರಡು ಬಾರಿ ಕುಡಿಯುವುದು. ನೆಲನೆಲ್ಲಿಯನ್ನೂ ಸೇರಿಸಬಹುದು.

ಅಮೃತ ಬಳ್ಳಿ ಹಾಗೂ ಗೋಕ್ಷೀರದ ಸಂಯೋಜನೆಯು ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುವುದು. ಅಮೃತ ಬಳ್ಳಿಯು ಕ್ಯಾನ್ಸರನ್ನು ತಡೆಯುವಂತಹ, ಬಿಳಿರಕ್ತ ಕಣಗಳನ್ನು ಹೆಚ್ಚಿಸುವ ಗುಣಹೊಂದಿದೆ. ಲಿವರ್​ನ್ನು ಆರೋಗ್ಯಯುತವಾಗಿರಿಸುವಲ್ಲಿ ಅಮೃತಬಳ್ಳಿಯು ಮಹತ್ವದ ಪಾತ್ರವಹಿಸುತ್ತದೆ. ಅಮೃತಬಳ್ಳಿ ಹಾಗೂ ಶುಂಠಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಮುಟ್ಟಾದ ಸಂದರ್ಭದಲ್ಲಿನ ಹೊಟ್ಟೆನೋವು ಕಡಿಮೆಯಾಗುತ್ತದೆ. ಅಮೃತ ಬಳ್ಳಿ, ಕಾಳುಮೆಣಸು, ಜೀರಿಗೆ ಹಾಕಿ ಕಷಾಯ ಮಾಡಿ ಕುಡಿಯುವುದರಿಂದಲೂ ಶೀತ, ನೆಗಡಿ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

Back To Top