Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಅಮಿತಾಭ್ ವಿರುದ್ಧ ಟ್ವೀಟಿಗರ ಆಕ್ರೋಶ!

Tuesday, 13.03.2018, 3:02 AM       No Comments

ನಟ ಅಮಿತಾಭ್ ಬಚ್ಚನ್ ಟ್ವಿಟರ್​ನಲ್ಲಿ ಅನೇಕರ ಕಾಲೆಳೆಯುತ್ತಿರುತ್ತಾರೆ. ಹಾಸ್ಯಚಟಾಕಿ ಮೂಲಕವೇ ಸೈಲೆಂಟ್ ಆಗಿ ಕೌಂಟರ್ ನೀಡುತ್ತಾರೆ. ಆದರೆ, ಇತ್ತೀಚೆಗೆ ಟ್ವೀಟಿಗರೇ ಅಮಿತಾಭ್ ವಿರುದ್ಧ ತಿರುಗಿ ಬಿದ್ದಿದ್ದಾರೆ…! ಅದಕ್ಕೆ ಕಾರಣ ಮಹಿಳಾ ದಿನಾಚರಣೆಯಂದು ಅಮಿತಾಭ್ ಮಾಡಿದ ಟ್ವೀಟ್! ಹೌದು, ಪತ್ನಿ ಜಯಾ ಬಚ್ಚನ್, ಮಗಳು ಹಾಗೂ ಮೊಮ್ಮಗಳ ಚಿತ್ರವನ್ನು ಹಾಕಿ ಮಹಿಳಾ ದಿನಾಚರಣೆ ಶುಭಕೋರಿದ್ದಾರೆ ಅಮಿತಾಭ್. ಅದರಲ್ಲಿ ಐಶ್ವರ್ಯಾ ಚಿತ್ರವನ್ನು ಎಲ್ಲಿಯೂ ಹಾಕದ್ದಕ್ಕೆ ಅಮಿತಾಭ್ ಹಿಂಬಾಲಕರು ಕೊಂಚ ಬೇಸರಗೊಂಡಿದ್ದಾರೆ. ಅವರು ಟ್ವೀಟ್ ಒಂದರಲ್ಲಿ ಐಶ್ವರ್ಯಾ ಜತೆಗಿನ ಗ್ರೂಪ್ ಫೋಟೋ ಹಾಕಿದ್ದರೂ ಅಭಿಮಾನಿಗಳು ಸಂತಸಗೊಂಡಿಲ್ಲ. ‘ಐಶ್ವರ್ಯಾ ರೈ ಅವರ ಪ್ರತ್ಯೇಕ ಫೋಟೋ ಹಾಕಬೇಕೀತ್ತು’ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು, ‘ಅಮಿತಾಭ್ ಮನೆಯಲ್ಲಿರುವ ಮಹಿಳೆಯರ ನಡುವೆಯೇ ತಾರತಮ್ಯ ತೋರುತ್ತಿದ್ದಾರೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಮಿತಾಭ್ ಈ ಆರೋಪಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ.

‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಐಶ್ವರ್ಯಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ತೆರೆಕಂಡ ನಂತರದಲ್ಲಿ ಐಶ್ವರ್ಯಾ ಬಗ್ಗೆ ಬಚ್ಚನ್ ಕುಟುಂಬ ಅಸಮಾಧಾನಗೊಂಡಿತ್ತು ಎಂಬ ಸುದ್ದಿ ಹಬ್ಬಿತ್ತು. ಅಮಿತಾಭ್ ಇತ್ತೀಚೆಗೆ ಮಾಡಿದ ಟ್ವೀಟ್​ನಿಂದಾಗಿ ಆ ವೈಮನಸ್ಸು ಇನ್ನೂ ಬಗೆಹರಿದಿಲ್ಲವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಮಿತಾಭ್ ‘102 ನಾಟ್ ಔಟ್’ ಹಾಗೂ ‘ಥಗ್ಸ್ ಆಫ್ ಹಿಂದುಸ್ಥಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top