Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಅಮಿತಾಭ್​ಗೂ ಟಾರ್ಚರ್ ಕೊಡ್ತಾರೆ!

Friday, 08.06.2018, 3:00 AM       No Comments

ವಯಸ್ಸು 75 ಮೀರುತ್ತಿದ್ದರೂ ಹದಿಹರೆಯದ ತರುಣನಂತೆ ಕ್ರಿಯಾಶೀಲ ರಾಗಿರುತ್ತಾರೆ ನಟ ಅಮಿತಾಭ್ ಬಚ್ಚನ್. ಇಂದಿನ ಸಿಕ್ಸ್ ಪ್ಯಾಕ್ ಹೀರೋಗಳೇ ಗಲ್ಲಾಪೆಟ್ಟಿಗೆಯಲ್ಲಿ ಸೋಲುತ್ತಿರುವಾಗ ಈ ಇಳಿವಯಸ್ಸಿನ ಪ್ರತಿಭಾವಂತನ ಚಾಮ್ರ್ ಇಂದಿಗೂ ಕುಂದಿಲ್ಲ. ಪಾತ್ರಕ್ಕಾಗಿ ಯಾವ ಪ್ರಮಾಣದ ಬದ್ಧತೆ ತೋರಲೂ ಅವರು ಸದಾ ಸಿದ್ಧ. ಇತ್ತೀಚೆಗಷ್ಟೇ ತೆರೆಕಂಡ ‘102; ನಾಟ್ ಔಟ್’ ಸಿನಿಮಾದಲ್ಲಿ ಅವರು 102 ವರ್ಷದ ವೃದ್ಧನ ಪಾತ್ರ ಮಾಡಿದ್ದರು. ಅದಕ್ಕಾಗಿ ವಿಶೇಷ ಮೇಕಪ್​ನ ಮೊರೆಹೋಗಿದ್ದರು. ಅಷ್ಟಕ್ಕೂ ಈಗ ಯಾಕೆ ಆ ಮೇಕಪ್ ವಿಚಾರ? ಅದಕ್ಕೂ ಕಾರಣವಿದೆ. ಮತ್ತೊಂದು ಹೊಸ ಚಿತ್ರಕ್ಕಾಗಿ ವಿಭಿನ್ನ ಮೇಕಪ್ ಧರಿಸಲು ಬಿಗ್-ಬಿ ಸಿದ್ಧರಾಗುತ್ತಿದ್ದಾರೆ.

ತೆರೆಮೇಲೆ ಡಿಫರೆಂಟ್ ಆಗಿ ಕಾಣಿಸಲು ಇಂಥ ಮೇಕಪ್​ಗಳು ಸಹಾಯ ಮಾಡುತ್ತವೆ ನಿಜ. ಆದರೆ, ಅದರ ಹಿಂದೆ ಸಿಕ್ಕಾಪಟ್ಟೆ ಟಾರ್ಚರ್ ಇರುತ್ತದೆ ಎಂದರೆ ನೀವು ನಂಬಲೇಬೇಕು! ಇದನ್ನು ಸ್ವತಃ ಅಮಿತಾಭ್ ಹೇಳಿಕೊಂಡಿದ್ದಾರೆ. ‘ನಾಳೆ ದೊಡ್ಡ ಟಾರ್ಚರ್. ಎರಡು ಸಿನಿಮಾಗಳ ಲುಕ್ ಮತ್ತು ಟ್ರೇಲರ್​ಗಾಗಿ ಪ್ರಾಸ್ತೆಟಿಕ್ ಮೇಕಪ್ ಮಾಡಿಸಿಕೊಳ್ಳಬೇಕಿದೆ. ನನ್ನ ವೃತ್ತಿಬದುಕಿನಲ್ಲಿ ಇಂಥದೆಲ್ಲ ಮುಗಿದುಹೋಗಿದೆ ಎಂದುಕೊಂಡಿದ್ದೆ. ಆದರೆ ಇನ್ನೂ ಒಂದಷ್ಟು ಬಾಕಿ ಇವೆ’ ಎಂದಿದ್ದಾರೆ ಅಮಿತಾಭ್. ಇಷ್ಟೆಲ್ಲ ಮಾಹಿತಿ ನೀಡಿರುವ ಅವರು ಆ ಚಿತ್ರ ಯಾವುದು? ನಿರ್ದೇಕರು ಯಾರು? ಕಥಾವಸ್ತು ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬಾಯಿ ಬಿಟ್ಟಿಲ್ಲ. ಹಾಗಾಗಿ ಅಭಿಮಾನಿಗಳ ವಲಯದಲ್ಲಿ ಕುತೂಹಲ ಗರಿಗೆದರಿದೆ. 2009ರಲ್ಲಿ ಆರ್. ಭಾಲ್ಕಿ ನಿರ್ದೇಶನದ ‘ಪಾ’ ಚಿತ್ರದಲ್ಲಿ 12 ವರ್ಷದ ಹುಡುಗನ ಪಾತ್ರ ಮಾಡಿದ್ದಾಗಲೂ ಅಮಿತಾಭ್ ಇಂಥ ಪ್ರಾಸ್ತೆಟಿಕ್ ಮೇಕಪ್ ಹಾಕಿಸಿಕೊಂಡಿದ್ದರು. ಅವರ ಲುಕ್ ಕಂಡ ಎಲ್ಲರೂ ಬೆರಗಾಗಿದ್ದರು. ಈ ಬಾರಿ ಅವರು ಯಾವ ಗೆಟಪ್​ನಲ್ಲಿ ದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಅಂದಹಾಗೆ, ‘ಧೂಮ್ 2’ ಚಿತ್ರದಲ್ಲಿ ಹೃತಿಕ್ ರೋಷನ್, ‘ಐ’ ಚಿತ್ರದಲ್ಲಿ ವಿಕ್ರಮ್ ಮುಂತಾದ ಕಲಾವಿದರು ಪ್ರಾಸ್ತೆಟಿಕ್ ಮೇಕಪ್ ಸಹಾಯದಿಂದ ಮಿಂಚು ಹರಿಸಿದ್ದನ್ನು ನೆನಪಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

Back To Top