Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಅಭ್ಯಾಸ ನಡೆಸಿದ ಭಾರತ ತಂಡ

Tuesday, 14.11.2017, 3:00 AM       No Comments

ಕೋಲ್ಕತ: ಶಾರ್ಟ್ ಬಾಲ್​ಗಳನ್ನು ಎದುರಿಸುವುದು, ಸ್ಪಿನ್ನರ್​ಗಳಿಗೆ ರಿವರ್ಸ್ ಸ್ವೀಪ್ ಶಾಟ್​ಗಳನ್ನು ಬಳಸುವುದು ಸೋಮವಾರ ಭಾರತ ತಂಡದ ಮೊದಲ ಅಭ್ಯಾಸ ಅವಧಿಯ ಪ್ರಮುಖ ಆಕರ್ಷಣೆ ಎನಿಸಿತ್ತು. 3 ಪಂದ್ಯಗಳ ಸರಣಿಗಾಗಿ ಭಾರತ ತಂಡ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬೆವರಿಳಿಸಿತು. ತಂಡದ ಸಿಬ್ಬಂದಿ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಶಾರ್ಟ್ ಪಿಚ್ ಎಸೆತಗಳನ್ನು ಹಾಕಿದರು. ರಹಾನೆ ಅರ್ಧಗಂಟೆಗೂ ಹೆಚ್ಚಿನ ಕಾಲ ಥ್ರೋ ಡೌನ್ಸ್ ಎಸೆತಗಳನ್ನು ಎದುರಿಸಿದರು. ರಾಹುಲ್-ಧವನ್ ಜೋಡಿಯಾಗಿ ಸ್ಪಿನ್ ಹಾಗೂ ವೇಗದ ಬೌಲಿಂಗ್ ಎಸೆತಗಳನ್ನು ಎದುರಿಸಿತು. ಎರಡೂವರೆ ಗಂಟೆಗಳ ಕಾಲ ಭಾರತ ತಂಡದ ಅಭ್ಯಾಸ ಸಾಗಿತು. ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜಾ ಸೌರಾಷ್ಟ್ರ ಪರ ಆಡಿ ಬಂದಿದ್ದರಿಂದ ಸೋಮವಾರದ ಅಭ್ಯಾಸಕ್ಕೆ ಗೈರಾಗಿದ್ದರು.

ಹಾಲಿ ಭಾರತ ತಂಡದಲ್ಲಿ ಶ್ರೀಲಂಕಾ ವಿರುದ್ಧ ಗರಿಷ್ಠ ಪಂದ್ಯವಾಡಿದ ಆಟಗಾರ ಇಶಾಂತ್ ಶರ್ಮ. ಇಶಾಂತ್ ಶರ್ಮ ಶ್ರೀಲಂಕಾ ವಿರುದ್ಧ 10 ಟೆಸ್ಟ್ ಪಂದ್ಯವಾಡಿದ್ದಾರೆ, ಉಳಿದಂತೆ ಮತ್ತೆ ಯಾವ ಆಟಗಾರರೂ ಕೂಡ 6ಕ್ಕಿಂತ ಹೆಚ್ಚಿನ ಪಂದ್ಯವಾಡಿಲ್ಲ.

ಶ್ರೀಲಂಕಾ ತಂಡ ಈವರೆಗೂ ಸೋತಿರುವ ಟೆಸ್ಟ್ ಪಂದ್ಯಗಳ ಸಂಖ್ಯೆ 99. ಸರಣಿಯಲ್ಲಿ ಇನ್ನೊಂದು ಪಂದ್ಯ ಸೋತಲ್ಲಿ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳಲ್ಲಿ ಸೋತ ವಿಶ್ವದ 8ನೇ ತಂಡ ಎನಿಸಿಕೊಳ್ಳಲಿದೆ. ಬಾಂಗ್ಲಾ, ಜಿಂಬಾಬ್ವೆ ಹೊರತಾಗಿ ಮತ್ತೆಲ್ಲ ದೇಶಗಳೂ 100ಕ್ಕೂ ಅಧಿಕ ಟೆಸ್ಟ್​ನಲ್ಲಿ ಸೋಲು ಕಂಡಿವೆ.

Leave a Reply

Your email address will not be published. Required fields are marked *

Back To Top