Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಅಭಿವೃದ್ಧಿ ಸಹಿಸದ ಪ್ರತಿಪಕ್ಷಗಳಿಂದ ವಿಭಜನಕಾರಿ ತಂತ್ರ

Monday, 10.07.2017, 3:00 AM       No Comments

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳಿಗೆ ತುಂಬ ಪ್ರಾಮುಖ್ಯತೆ ಇದೆ. ಸರ್ಕಾರ ಎಡವಿದಾಗ ಎಚ್ಚರಿಸುವುದು, ರಚನಾತ್ಮಕ ವಿರೋಧ ತೋರುವುದು ಅವುಗಳ ಕೆಲಸ. ಆದರೆ, ಇಂದಿನ ಸ್ಥಿತಿಯಲ್ಲಿ ಪ್ರತಿಪಕ್ಷಗಳು ವಿರೋಧಕ್ಕಾಗಿ ವಿರೋಧ ಎಂಬ ನೀತಿ ಅನುಸರಿಸುತ್ತಿದ್ದು, ಜನರನ್ನು ವಿಭಜಿಸಲು ಹೊರಟಿರುವುದು ವಿಪರ್ಯಾಸ.

 | ಅನಿಲ್ ಬಲೂನಿ

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ವಿರೋಧ ಪಕ್ಷಗಳು ಈಗ ತೋರುತ್ತಿರುವಂಥ ನಕಾರಾತ್ಮಕ ಮತ್ತು ವಿಭಜನಕಾರಿ ಪಾತ್ರ ಹಿಂದೆಂದೂ ಕಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್, ಭಾರತದ ಬಡವರು ಮತ್ತು ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇತರ ವಿರೋಧ ಪಕ್ಷಗಳ ಜತೆಗೆ ಗುಂಪು ಕಟ್ಟಿಕೊಂಡಿದೆ.

ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಿಂದ ನಲುಗಿದ್ದ ಭಾರತದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಕಾರ್ಯಸೂಚಿಯನ್ನು ರೂಪಿಸಿದರು.

ಪ್ರತಿಪಕ್ಷಗಳು ವೃಥಾ ಟೀಕೆ ಮಾಡುವ ಮುನ್ನ ಅಥವಾ ಗೊಂದಲ ಸೃಷ್ಟಿಸುವ ಮುನ್ನ ಕೆಲ ಸಂಗತಿಗಳನ್ನು ಗಮನಿಸಬೇಕು. ನರೇಂದ್ರ ಮೋದಿ ಅವರು ಏನನ್ನು ಬೋಧಿಸುತ್ತಾರೋ ಅದನ್ನೇ ಆಚರಿಸುತ್ತಾರೆ. ‘ಒಳ್ಳೆಯ ಉದ್ದೇಶಗಳೊಂದಿಗೆ ಉತ್ತಮ ಆಡಳಿತ ನೀಡುವುದೇ ನಮ್ಮ

ಆಡಳಿತದ ಗುರುತು, ದೃಢತೆಯೊಂದಿಗೆ ಕಾರ್ಯಕ್ರಮಗಳ ಅನುಷ್ಠಾನ ನಮ್ಮ ಗುರಿ’ ಎಂದು ಅವರು ಹೇಳುತ್ತಿದ್ದರು. ಉತ್ತಮ ಆಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಜನ ಸಮುದಾಯದ ಕಲ್ಯಾಣ, ಆರ್ಥಿಕತೆಯ ಬಲವರ್ಧನೆ ಇತ್ಯಾದಿಗಳ ವಿಚಾರದಲ್ಲಿ ಈ ಸೂತ್ರವನ್ನು ಅವರು ಪಾಲಿಸುತ್ತಿದ್ದಾರೆ.

ಪ್ರಧಾನಿಯವರ ಪ್ರಬಲ ಮತ್ತು ನಿರ್ಣಾಯಕ ಕ್ರಮಗಳು ಸರ್ಕಾರವನ್ನು ಮಾತ್ರವೇ ಅಲ್ಲ ರಾಷ್ಟ್ರವನ್ನೂ ಮುನ್ನಡೆಸುತ್ತಿರುವುದು ಸಂಪೂರ್ಣ ವಿಪಕ್ಷಗಳು, ವಿಶೇಷವಾಗಿ ಮೂಲೆಗುಂಪಾಗಿರುವ, ನಾಯಕರಿಲ್ಲದ ರಾಜಕೀಯ ಸಂಘಟನೆಯಾಗಿರುವ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆ. ಹಲವು ರಾಜ್ಯಗಳಲ್ಲಿ ನಡೆದ ಚುನಾವಣಾ ಸಮರಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿರುವ ಬಿಜೆಪಿ ಜನಪ್ರಿಯತೆಯ ವರ್ಧನೆಯೂ ವಿರೋಧ ಪಕ್ಷಗಳನ್ನು ಕಂಗೆಡಿಸಿದೆ.

ಮೊದಲಿಗೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸರ್ಕಾರವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಕಟ್ಟಿಹಾಕಲು ಯತ್ನಿಸಿದವು. ಆದರೆ ವಿಪಕ್ಷಗಳ ಸುಖಾಸುಮ್ಮನೆ ಆರೋಪಗಳಿಗೆ ಜನರು ಮರುಳಾಗಲಿಲ್ಲ. ಬಿಜೆಪಿ ವಿರೋಧಿ ತಂತ್ರಗಳೆಲ್ಲವೂ ದಯನೀಯವಾಗಿ ವಿಫಲವಾದುದನ್ನು ಕಂಡ ವಿರೋಧ ಪಕ್ಷಗಳು ಧರ್ಮ ಮತ್ತು ಜಾತಿ ಆಧಾರದಲ್ಲಿ ರಾಷ್ಟ್ರವನ್ನು ವಿಭಜಿಸುವ ಅಪಾಯಕಾರಿ ಆಟಕ್ಕೆ ಕೈಹಾಕಿದವು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾರ ಮೇಲಾದರೂ ಗುಂಪುದಾಳಿ ನಡೆದಾಗ, ಕಾಂಗ್ರೆಸ್​ಗೆ ಅದು ಕೋಮು ಘಟನೆಯಾಯಿತು; ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷಗಳ ಸದಸ್ಯರು ಬಹಿರಂಗವಾಗಿ ಗುಂಪುದಾಳಿ ನಡೆಸಿ ಕೊಂದಾಗ ಅದನ್ನು ಕಾಂಗ್ರೆಸ್ ‘ಕಾನೂನು ಸುವ್ಯವಸ್ಥೆ ಸಮಸ್ಯೆ’ ಎಂದು ಬಣ್ಣಿಸಿತು. ರಾಜಕೀಯ ಲಾಭಕ್ಕಾಗಿ, ವಿರೋಧ ಪಕ್ಷಗಳು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಅಪರಾಧಗಳನ್ನು ‘ಕೇಸರಿ ಪಡೆಗಳ ಕೃತ್ಯ’ ಎಂಬುದಾಗಿ ಬಣ್ಣ ಕಟ್ಟಿದ ಬೇಕಾದಷ್ಟು ಘಟನೆಗಳಿವೆ. ಉದಾಹರಣೆಗೆ: ಕೆಲವು ವರ್ಷಗಳ ಹಿಂದೆ ದೆಹಲಿಯ ಚರ್ಚ್ ಒಂದರಲ್ಲಿ ನಡೆದ ಕಳ್ಳತನದ ಪ್ರಕರಣವನ್ನು ‘ಬಲಪಂಥೀಯ ಕಾರ್ಯಕರ್ತರಿಂದ ಅಲ್ಪಸಂಖ್ಯಾತ ಸಂಸ್ಥೆಯ ಮೇಲೆ ನಡೆದ ದಾಳಿ’ ಎಂದು ಬಿಂಬಿಸಲಾಗಿತ್ತು. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ ವ್ಯಕ್ತಿಯೊಬ್ಬ ಕ್ರೖೆಸ್ತ ಸಂನ್ಯಾಸಿನಿ ಮೇಲೆ ನಡೆಸಿದ ಅತ್ಯಾಚಾರದ ಆರೋಪವನ್ನು ಬಲಪಂಥೀಯ ಕಾರ್ಯಕರ್ತರ ಮೇಲೆ ಹೊರಿಸಲಾಗಿತ್ತು.

ಬುದ್ಧಿಜೀವಿಗಳ ಮೌನವೇಕೆ?: ಕೇರಳದಲ್ಲಿ 2016ರ ಫೆಬ್ರುವರಿಯಲ್ಲಿ 20ರ ಹರೆಯದ ಆರ್​ಎಸ್​ಎಸ್ ಕಾರ್ಯಕರ್ತ ಸುಜಿತ್​ನನ್ನು ಆತನ ಹೆತ್ತವರ ಕಣ್ಣೆದುರಿನಲ್ಲೇ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕೊಂದದ್ದಕ್ಕಾಗಲೀ, 2016ರ ಡಿಸೆಂಬರ್​ನಲ್ಲಿ ಕೇರಳದಲ್ಲಿ ರಾಧಾಕೃಷ್ಣನ್ ಎಂಬ ಬಿಜೆಪಿ ಕಾರ್ಯಕರ್ತ ಮತ್ತು ಆತನ ಅತ್ತಿಗೆ ವಿಮಲಾ ಅವರನ್ನು ಕಮ್ಯುನಿಸ್ಟರು ಬೆಂಕಿ ಹಚ್ಚಿ ಕೊಂದ ಘಟನೆ ಬಗೆಗಾಗಲೀ, ಭಯೋತ್ಪಾದಕರು ಮತ್ತು ನಕ್ಸಲೀಯರ ಹಕ್ಕುಗಳ ಬಗ್ಗೆ ಮಾತನಾಡುವ ಬುದ್ಧಿಜೀವಿಗಳು ಮೌನ ಮುರಿಯಲೇ ಇಲ್ಲ.

ತೀರಾ ಇತ್ತೀಚೆಗೆ, ಪ್ರತ್ಯೇಕತಾವಾದಿಗಳ ಪ್ರಚೋದನೆಯಿಂದ ಗುಂಪೊಂದು ಶ್ರೀನಗರದಲ್ಲಿ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಯೂಬ್ ಪಂಡಿತ್​ರನ್ನು ಹತ್ಯೆಗೈದಿತು. ಆದರೆ ಮಾನವ ಹಕ್ಕುಗಳ ಸ್ವಯಂಘೋಷಿತ ಚಾಂಪಿಯನ್​ಗಳು ಈ ಬರ್ಬರ ಘಟನೆಯನ್ನು ಖಂಡಿಸಿ ‘ಕ್ಯಾಂಡಲ್ ದೀಪಗಳ ಮೆರವಣಿಗೆ’ ಸಂಘಟಿಸಲಿಲ್ಲ. ಆಘಾತಕರವಾದ ವಿಚಾರವೇನೆಂದರೆ ಕೆಲವು ಮಾಧ್ಯಮಗಳು ಹತರಾದ ಪೊಲೀಸ್ ಅಧಿಕಾರಿಯೇ ಗುಂಪನ್ನು ಹಿಂಸೆಗಿಳಿಯುವಂತೆ ಉದ್ರೇಕಿಸಿದರು ಎಂದು ವರದಿ ಮಾಡುವ ಮೂಲಕ ಘಟನೆಯನ್ನೇ ತಿರುಚಲು ಯತ್ನಿಸಿದವು.

ಪ್ರತಿಪಕ್ಷಗಳು ರಚಾನಾತ್ಮಕ ಟೀಕೆ ಮಾಡಬೇಕೆ ವಿನಃ ಕೀಳುಮಟ್ಟದ ವಿರೋಧಕ್ಕೆ ಇಳಿಯಬಾರದು. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಪ್ರತಿಪಕ್ಷಗಳ ಹತಾಶೆಯನು ್ನರ್ಶಿಸುತ್ತಿದೆ. ಕಾಂಗ್ರೆಸ್ ಸಂಸದರೊಬ್ಬರು ಸೇನಾ ಮುಖ್ಯಸ್ಥರನ್ನು ‘ಗಲಿ ಕಾ ಗೂಂಡಾ’ ಎಂದು ಕರೆದಾಗ ಅಥವಾ ಸಮಾಜವಾದಿ ಪಕ್ಷದ ಹಿರಿಯ ನಾಯಕ ನಮ್ಮ ಹುತಾತ್ಮರನ್ನು ಅವಹೇಳನಕಾರಿಯಾಗಿ ನಿಂದಿಸಿದಾಗ ವಿರೋಧ ಪಕ್ಷಗಳ ಪ್ರಮುಖ ನಾಯಕರು ಮೌನಕ್ಕೆ ಶರಣಾದರು. ನಮ್ಮ ಸೇನೆ ಮತ್ತು ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಕೂಡ ಅವರ ರಾಜಕೀಯ ಆಟದ ಭಾಗವಾಗಿ ಹೋಯಿತು.

ಅಪರಾಧಗಳ ಅಂಕಿಸಂಖ್ಯೆಗಳನ್ನು ಗಮನಕ್ಕೆ ತೆಗೆದುಕೊಂಡರೆ, ಕಾಂಗ್ರೆಸ್ ಆಡಳಿತವಿದ್ದ 2013ರಲ್ಲಿ 823 ಕೋಮುಹಿಂಸೆಯ ಘಟನೆಗಳು ಘಟಿಸಿದ್ದವು. ಈ ಹಿಂಸಾಚಾರಗಳಲ್ಲಿ 133 ಮಂದಿ ಹತರಾಗಿದ್ದರು. 2012 ಮತ್ತು 2013ರಲ್ಲಿ ವರದಿಯಾಗಿದ್ದ 30ಕ್ಕೂ ಹೆಚ್ಚಿನ ಗುಂಪುದಾಳಿ ಘಟನೆಗಳ ಪೈಕಿ ಬಹುತೇಕ ಕೋಮು ಇಲ್ಲವೇ ಜಾತಿ ಸಂಬಂಧಿತವಾಗಿದ್ದವು. ಆದರೆ ಆಗ ತಥಾಕಥಿತ ಬುದ್ಧಿಜೀವಿಗಳು ಯಾವುದೇ ‘ಪ್ರಶಸ್ತಿ ವಾಪ್ಸಿ’ ನಡೆಯಲಿಲ್ಲ ಅಥವಾ ಪ್ರತಿಭಟನಾ ಮೆರವಣಿಗೆಯನ್ನೂ ಸಂಘಟಿಸಲಿಲ್ಲ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರದ ಆಡಳಿತವಿದ್ದಾಗ 2013ರಲ್ಲಿ 247 ಕೋಮು ಘಟನೆಗಳು ಘಟಿಸಿದ್ದವು. 2012ರಲ್ಲಿ ನಡೆದ 118 ಕೋಮು ಹಿಂಸೆಯ ಘಟನೆಗಳಿಗೆ ಹೋಲಿಸಿದರೆ ಒಂದೇ ವರ್ಷದಲ್ಲಿ ಶೇಕಡ 100ರಷ್ಟು ಹೆಚ್ಚಳ! ಮುಜಫರ್​ನಗರದ ಕುಖ್ಯಾತ ದಂಗೆಯೂ ಅಖಿಲೇಶ ಯಾದವ್ ಸರ್ಕಾರದ ಅವಧಿಯಲ್ಲೇ ಘಟಿಸಿತು. ಆಗ ಎಡಪಕ್ಷ ನಾಯಕರು ಅಖಿಲೇಶ ಯಾದವ್ ಅವರ ರಾಜೀನಾಮಗೆ

ಏಕೆ ಆಗ್ರಹಿಸಲಿಲ್ಲ?

ಏನಿವರ ಕಾರ್ಯಸೂಚಿ?: ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಈ ಸ್ವಯಂ ದೃಢೀಕೃತ ಚಾಂಪಿಯನ್ನರ ನೈಜ ಕಾರ್ಯಸೂಚಿ ಜಾಗತಿಕವಾಗಿ ಭಾರತಕ್ಕೆ ಕೆಟ್ಟ ಹೆಸರು ತರುವುದು ಮತ್ತು ಎಲ್ಲರನ್ನೂ ಒಳಗೊಂಡು ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸುವ ಪ್ರಧಾನಮಂತ್ರಿಯವರ ಅಜೆಂಡಾವನ್ನು ಹಳಿತಪ್ಪಿಸುವುದು. ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಸಂಘಟಿಸಿದವರತ್ತ ಒಮ್ಮೆ ನೋಟ ಹರಿಸಿದರೆ ಸಾಕು, ಇವರೆಲ್ಲರೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ಹಿಂದಿನ ಸರ್ಕಾರಗಳಿಂದ ಪೋಷಣೆಗೊಂಡು ಬೆಳೆದ ಸೂತ್ರದ ಗೊಂಬೆಗಳೇ ಹೊರತು ಬೇರೇನಲ್ಲ ಎಂಬುದು ಅರ್ಥವಾಗಿ ಬಿಡುತ್ತದೆ.

ತಮ್ಮ ದೊರೆಗಳನ್ನು ಮೆಚ್ಚಿಸಲು ಢೋಂಗಿ ಜಾತ್ಯತೀತರು ವ್ಯರ್ಥ ಓಟದಲ್ಲಿ ನಿರತರಾಗಿದ್ದಾರೆ. ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವವನು ಎಂದೇ ಪರಿಚಿತನಾಗಿರುವ ಒಬ್ಬ ವ್ಯಕ್ತಿ ‘ನನ್ನ ಹೆಸರಲ್ಲಿ ಅಲ್ಲ’ (ನಾಟ್ ಇನ್ ಮೈ ನೇಮ್ ಪ್ರತಿಭಟನೆಯನ್ನು ಜಂತರ್ ಮಂತರ್​ನಲ್ಲಿ ಸಂಘಟಿಸಿದರೆ, ಇನ್ನೊಬ್ಬ ಅಮೆರಿಕದ ಪ್ರಜೆ ತನ್ನ ‘ಲಾಭರಹಿತ’ ನ್ಯೂಸ್ ವೆಬ್​ಸೈಟ್ ಮೂಲಕ ನಮ್ಮ ಸೇನಾ ಮುಖ್ಯಸ್ಥರನ್ನು ಜನರಲ್ ಡೈಯರ್ ಜತೆಗೆ ಹೋಲಿಸುತ್ತಾನೆ. ಇದೆಲ್ಲ ಮುಕ್ತ ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ನಡೆಯುತ್ತದೆ!! ‘ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖವಾಡ ಹಾಕಿಕೊಂಡು ದೊಡ್ಡಪ್ರಮಾಣದ ಸಂಶಯಾಸ್ಪದ ವೆಬ್​ಸೈಟ್​ಗಳು ಕಳೆದ ಮೂರು ವರ್ಷಗಳಲ್ಲಿ ಆರಂಭವಾಗಿದ್ದು, ಇವುಗಳಿಗೆ ವಿದೇಶಿ ಎನ್​ಜಿಒಗಳು ಮತ್ತು ಏಜೆನ್ಸಿಗಳು ಹಣ ಒದಗಿಸುತ್ತಿವೆ- ಇವುಗಳದ್ದು ಏಕೈಕ ಕಾರ್ಯಸೂಚಿ-ನರೇಂದ್ರ ಮೋದಿಯವರನ್ನು ವಿರೋಧಿಸುವುದು, ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು. ಬಯಲಾದ ಜಾತ್ಯತೀತರ ಬಣ್ಣ: ಆದರೆ ಈಗ ಈ ತಥಾಕಥಿತ ಜಾತ್ಯತೀತರ ಬಣ್ಣ ಜನರ ಮುಂದೆ ಬಯಲಾಗಿದೆ. ನರೇಂದ್ರ ಮೋದಿ ವಿರೋಧಿ, ಬಿಜೆಪಿ ವಿರೋಧಿ ಬ್ರಿಗೇಡ್​ನ ವಿಭಜನವಾದಿ ಕಾರ್ಯಸೂಚಿಯನ್ನು ಜನರು ಅರಿತುಕೊಂಡಿದ್ದಾರೆ. ಈ ರಾಷ್ಟ್ರವಿರೋಧಿ ಶಕ್ತಿಗಳಿಗೆ ಇರುವುದು ಕೇವಲ ಒಂದೇ ಗುರಿ, ಒಂದೇ ಕಾರ್ಯಸೂಚಿ-‘ನಕಲಿ, ಸೃಷ್ಟಿತ ಕಥೆಗಳ ಮೂಲಕ ಅಪಾಯ ಹರಡಿ, ದಂಗೆಗಳನ್ನು ಎಬ್ಬಿಸಿ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ, ಚುನಾವಣಾ ಲಾಭಕ್ಕಾಗಿ ಪ್ರಜೆಗಳನ್ನು ಧ್ರುವೀಕರಣ ಮಾಡುವುದು’.

ಆದರೆ, ಇವರು ಒಂದು ಒಂದು ವಿಷಯವನ್ನು ಮರೆತಿದ್ದಾರೆ- ಇದು ಯುವಭಾರತ ಮತ್ತು ಪ್ರಜೆಗಳು ಪ್ರಬಲ ರಾಷ್ಟವನ್ನು ಕಾಣಲು ಬಯಸಿರುವ ಮತ್ತು ತ್ವರಿತ ಅಭಿವೃದ್ಧಿಯನ್ನು ಬಯಸುತ್ತಿರುವ ಅಧುನಿಕ ಭಾರತ. ಪ್ರಜಾಪ್ರಭುತ್ವದಲ್ಲಿ ಅದರ ಮತದಾರರ ನಿರ್ಣಯವೇ ಸವೋಚ್ಚ.

ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಜನಾದೇಶವನ್ನು ಪಡೆದಿದೆ ಮತ್ತು ಅಂದಿನಿಂದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಗೆಲುವು ಸಾಧಿಸುತ್ತಲೇ ಬಂದಿದೆ. ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಜನಾದೇಶವನ್ನು ಗೌರವಿಸಬೇಕು. ಈ ವಿಭಜನಕಾರಿ ಶಕ್ತಿಗಳು ಮತ್ತು ದ್ವೇಷಾಕಾಂಕ್ಷಿಗಳು ನಕಾರಾತ್ಮಕತೆಯನ್ನು ತ್ಯಜಿಸಲು ಇದು ಸಕಾಲ, ಇಲ್ಲದೇ ಇದ್ದಲ್ಲಿ ಈ ಪಕ್ಷಗಳಿಗೆ ಮತದಾರರೇ ಪಾಠ ಕಲಿಸುತ್ತಾರೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top