Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಅಭಿವೃದ್ಧಿಯ ಸವಾಲು

Wednesday, 15.03.2017, 7:48 AM       No Comments

ನೋಟು ಅಮಾನ್ಯೀಕರಣ, ಸರ್ಜಿಕಲ್ ದಾಳಿಯಂತಹ ದಿಟ್ಟ ನಿರ್ಧಾರ ಕೈಗೊಂಡು ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ದೇಶಾದ್ಯಂತ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಹಾಕುವ ಜತೆಗೆ ಜನಾಕರ್ಷಣೆ ಹಾಗೂ ಅಭಿವೃದ್ಧಿಗೂ ಆದ್ಯತೆ ನೀಡಬೇಕಾದ ಸವಾಲು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಮ್ಮ 12ನೇ ಬಜೆಟ್ ಮಂಡಿಸುತ್ತಿದ್ದಾರೆ. ಬರದಿಂದಾಗಿ ಹಿನ್ನಡೆ ಕಂಡಿರುವ ಕೃಷಿ ಕ್ಷೇತ್ರ, ಆರ್ಥಿಕತೆಯ ಆಘಾತ ಎದುರಿಸುತ್ತಿರುವ ಕೈಗಾರಿಕೆಗಳಿಗೆ ಉತ್ತೇಜನಕ್ಕೆ ಸಿಎಂ ಯಾವ ಟಾನಿಕ್ ನೀಡುತ್ತಾರೆಂಬುದು ಕುತೂಹಲ ಕೆರಳಿಸಿದೆ. ಜತೆಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಸಿದ್ಧತೆಯಾಗಿ ಜನಪ್ರಿಯತೆಗೂ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಸಿಎಂ ಬೆನ್ನೇರಿರುವುದು ಸಾಲ ಹೆಚ್ಚಾಗುವ ಆತಂಕಕ್ಕೂ ಕಾರಣವಾಗಿದೆ. ಬಿಜೆಪಿ ಯಶಸ್ಸಿಗೆ ಪ್ರಧಾನಿ ಮೋದಿ ಯುವ ಸಮುದಾಯವನ್ನು ಆಕರ್ಷಿಸುತ್ತಿರುವುದೂ ಕಾರಣ ಎಂಬ ಸತ್ಯ ಅರಿತಿರುವ ಸಿದ್ದರಾಮಯ್ಯ, ಈ ಬಾರಿ ಬಜೆಟ್​ನಲ್ಲಿ ಅಹಿಂದ ವರ್ಗಗಳ ಯುವಕರಿಗಾಗಿ ಹತ್ತು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಹಾಗೆಯೇ ಸರ್ಕಾರಕ್ಕೆ ಖ್ಯಾತಿ ತಂದುಕೊಟ್ಟಿರುವ ಭಾಗ್ಯ ಯೋಜನೆಗಳನ್ನು ವಿಸ್ತರಿಸುವ ಸಾಧ್ಯತೆಯೂ ಗೋಚರಿಸಿದೆ. ಒಟ್ಟಾರೆ ಬಜೆಟ್​ನ ಸ್ವರೂಪ, ಸವಾಲು, ನಿರೀಕ್ಷೆಗಳ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

 ಆಯವ್ಯಯಕ್ಕೆ ಸಾಲವೇ ಆಧಾರ

ರಾಜ್ಯ ಸರ್ಕಾರ ಸ್ವಂತ ಸಂಪನ್ಮೂಲ, ಕೇಂದ್ರದ ನೆರವು, ಸಾಲದಿಂದ ಈ ವರ್ಷ 1.62 ಲಕ್ಷ ಕೋಟಿ ರೂ.ನಿರೀಕ್ಷೆ ಮಾಡಿತ್ತು. ಅದರಲ್ಲಿ ವೇತನ, ಪಿಂಚಣಿ, ಸಾಮಾಜಿಕ ಪಿಂಚಣಿ, ಸಹಾಯಧನಕ್ಕಾಗಿ 98 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಆದ್ದರಿಂದ ಸಾಲ ಮಾಡದೆ ಸರ್ಕಾರಕ್ಕೆ ವಿಧಿ ಇಲ್ಲ. ಈ ಹಣಕಾಸು ವರ್ಷದ ಕೊನೆಗೆ ಸಾಲದ ಪ್ರಮಾಣ 2.08 ಲಕ್ಷ ಕೋಟಿ ರೂ. ತಲುಪಲಿದೆ. ಬಜೆಟ್ ಗಾತ್ರ ಹೆಚ್ಚಳವಾಗುವುದು ಸಾಲ ಮಾಡುವುದಕ್ಕೆ ಅನುಕೂಲವಾಗಿದೆ.

ಸಿಎಂಗಿರುವ ಸವಾಲು

 • ಬರ ನಿರ್ವಹಣೆ, ಸಾಲಮನ್ನಾ ಘೊಷಣೆ
 • ಬೆಳೆ ಪರಿಹಾರ ತುರ್ತು ವಿತರಣೆ, ನೀರಾವರಿಗೆ ಆದ್ಯತೆ
 • ಕುಸಿದಿರುವ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಟಾನಿಕ್
 • ವಿದ್ಯುತ್ ಸ್ವಾವಲಂಬನೆಗೆ ಆದ್ಯತೆ

ಕಾಡುತ್ತಿದೆ ಹಣಕಾಸು ಆತಂಕ

 • ನೋಟ್ ಬ್ಯಾನ್ ಪರಿಣಾಮ ಜನವರಿ ಅಂತ್ಯಕ್ಕೆ ಸ್ವಂತ ಸಂಪನ್ಮೂಲ ಸಂಗ್ರಹ 3687 ಕೋಟಿ ರೂ. ಕಡಿಮೆಯಾಗಿದೆ
 • ಉಳಿದ 2 ತಿಂಗಳಲ್ಲಿ 16,811 ಕೋಟಿ ರೂ. ಸಂಗ್ರಹವಾಗಬೇಕು
 • ಪ್ರಸಕ್ತ ಸ್ಥಿತಿಯಲ್ಲಿ 2,400 ಕೋಟಿ ರೂ. ಕಡಿಮೆ ಆಗುವ ಆತಂಕ

ಬಜೆಟ್ ನಿರೀಕ್ಷೆಗಳು

 • 7ನೇ ವೇತನ ಆಯೋಗ ರಚನೆ
 • ರೈತರ ಸಾಲ ಮನ್ನಾ, ಹೊಸ ತಾಲೂಕುಗಳ ರಚನೆ
 • ಅಹಿಂದ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗಕ್ಕೆ ಸಾಲ, ವೃತ್ತಿ ಶಿಕ್ಷಣಕ್ಕೆ ಉಚಿತ ಪ್ರವೇಶ, ವಿದ್ಯಾರ್ಥಿ ವೇತನ ಹೆಚ್ಚಳ
 • 15 ಲಕ್ಷ ಶೌಚಗೃಹಗಳ ನಿರ್ವಣ, 6 ಲಕ್ಷ ಮನೆಗಳ ನಿರ್ವಣ, ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ಪ್ರಮಾಣ ಹೆಚ್ಚಳ
 •  ಕ್ಷೀರಭಾಗ್ಯ ವಿಸ್ತರಣೆ, ಪರಿಶಿಷ್ಟರಿಗೆ ಉಚಿತ ವಿದ್ಯುತ್, ಖಾಸಗಿ ವಾಹನ ಚಾಲಕರಿಗೆ ವಿಮೆ, ನರೇಗಾ ಜಾಬ್ ಕಾರ್ಡ್ ಇರುವವರಿಗೆ ವಿಮೆ
 •  ಕಟ್ಟಡ ಕಾರ್ವಿುಕರಿಗೆ ಭವಿಷ್ಯ ನಿಧಿ

ಗ್ರಾಮೀಣರಿಗೆ ಏನೇನು?

 • ಸ್ತ್ರೀಶಕ್ತಿ ಸಂಘಗಳ ಸಹಾಯಧನ ಹೆಚ್ಚಳ
 • ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ
 • ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, ತಾಲೂಕು, ಜಿಲ್ಲಾಸ್ಪತ್ರೆ ಗಳನ್ನು ಮೇಲ್ದರ್ಜೆಗೆ ಏರಿಸುವುದು
 • ಎತ್ತಿನಹೊಳೆ ಸೇರಿ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲು’
 • ಉಪನಗರಗಳಾಗಿ ಕೆಜಿಎಫ್, ದೊಡ್ಡ ಬಳ್ಳಾಪುರ, ನೆಲಮಂಗಲ ಅಭಿವೃದ್ಧಿ

ಮೊದಲ ಬಾರಿ ಬುಧವಾರ

ರಾಜ್ಯದಲ್ಲಿ ಇದೇ ಮೊದಲ ಬಾರಿ ಶುಕ್ರವಾರದ ಬದಲಾಗಿ ಬುಧವಾರ ಬಜೆಟ್ ಮಂಡನೆ ಆಗುತ್ತಿದೆ. ಮಾ.17ರಂದು ಬಜೆಟ್​ಗೆ ನಿರ್ಧರಿಸಲಾಗಿತ್ತಾದರೂ, ಯುಗಾದಿಯ ನಂತರದ 2 ದಿನ ಅಧಿವೇಶನ ನಡೆಸುವುದಕ್ಕೆ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಬುಧವಾರವೇ ಬಜೆಟ್ ಮಂಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.

 

Leave a Reply

Your email address will not be published. Required fields are marked *

Back To Top