Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಅಭಿಮಾನಿ ಹುಚ್ಚಾಟ

Wednesday, 15.11.2017, 3:01 AM       No Comments

ಸಿನಿಮಾದಲ್ಲಿ ನೋಡಿದ ಸಾಹಸವನ್ನು ರಿಯಲ್ ಲೈಫ್​ನಲ್ಲಿ ಮಾಡಲು ಹೋದರೆ ಏನಾಗಬಹುದು? ಅದರಲ್ಲೂ ‘ಬಾಹುಬಲಿ’ ರೀತಿಯ ಚಿತ್ರಗಳಲ್ಲಿನ ಭಾರಿ ಸಾಹಸವನ್ನು ಮಾಡಲು ಅಭಿಮಾನಿಗಳು ಮುಂದಾದರೆ ಮೂಳೆ ಮುರಿದುಕೊಳ್ಳುವುದು ಗ್ಯಾರಂಟಿ. ಕೇರಳದಲ್ಲಿ ಅಕ್ಷರಶಃ ಹಾಗೆಯೇ ಆಗಿದೆ.

‘ಬಾಹುಬಲಿ’ ಚಿತ್ರದಲ್ಲಿ ಮದಗಜವನ್ನು ನಾಯಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದೃಶ್ಯದಲ್ಲಿ ಪ್ರಭಾಸ್ ಸಾಹಸ ಮೆರೆದಿದ್ದರು. ಅದರಿಂದ ಸ್ಪೂರ್ತಿಗೊಂಡ ಕೇರಳದ 25ರ ಹರೆಯದ ಯುವಕನೋರ್ವ ಅದೇ ದೃಶ್ಯವನ್ನು ಫೇಸ್​ಬುಕ್ ಲೈವ್​ನಲ್ಲಿ ಮಾಡುವ ಉತ್ಸಾಹ ತೋರಿದ್ದಾನೆ. ಪ್ರಾರಂಭದಲ್ಲಿ ಆನೆಗೆ ಕೆಲವು ಬಾಳೆ ಹಣ್ಣುಗಳನ್ನು ತಿನಿಸುವ ಮೂಲಕ ಸ್ನೇಹ ಬೆಳೆಸಿಕೊಂಡ ಆತ, ನಂತರ ಇನ್ನೂ ಸಮೀಪಕ್ಕೆ ಹೋಗಿ ಸೊಂಡಿಲಿಗೆ ಮುತ್ತಿಕ್ಕಿದ್ದಾನೆ. ಇನ್ನೇನು ಪ್ರಭಾಸ್ ರೀತಿಯೇ ಸೊಂಡಿಲ ಮೇಲೆ ಕಾಲಿಟ್ಟು ಹತ್ತಲು ಪ್ರಯತ್ನಿದಾಗ ಆನೆಗೆ ವಿಪರೀತ ಕೋಪ ಬಂದಿದೆ. ಕೂಡಲೇ ಆತನನ್ನು ಸೊಂಡಿಲಿನಿಂದ ನೂಕಿದೆ. ಪರಿಣಾಮ, ಹಲವು ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದ ಯುವಕನಿಗೆ ಜ್ಞಾನ ತಪ್ಪಿದೆ. ಕುತ್ತಿಗೆಗೆ ಬಲವಾದ ಪೆಟ್ಟು ಕೂಡ ಬಿದ್ದಿದೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನಂತೆ. ಅವನ ಹುಚ್ಚು ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top