Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಅಭಿಮಾನಿಗಳ ಮಧ್ಯೆ ಮೇಟಿ ಜನ್ಮದಿನ ಆಚರಣೆ

Tuesday, 10.10.2017, 3:00 AM       No Comments

ಬಾಗಲಕೋಟೆ: ಬಾಗಲಕೋಟೆ ಮತ ಕ್ಷೇತ್ರದ ಶಾಸಕ ಎಚ್.ವೈ. ಮೇಟಿ ಅವರ 72ನೇ ಜನ್ಮದಿನವನ್ನು ಅವರ ಅಭಿಮಾನಿಗಳ ಬಳಗದಿಂದ ಸೋಮವಾರ ಆಚರಿಸಲಾಯಿತು.

ರಾಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಸಾವಿರಾರು ಅಭಿಮಾನಿಗಳು, ಬಂಧು ಗಳು, ಪಕ್ಷದ ಕಾರ್ಯಕರ್ತರು, ನಾಯಕರ ಮಧ್ಯೆದಲ್ಲಿ ಶಾಸಕ ಎಚ್.ವೈ. ಮೇಟಿ 72 ಕೆಜಿ ತೂಕದ ಬೃಹತ್ ಗಾತ್ರದ ಕೇಕ್ ಕತ್ತರಿಸಿದರು. ಬೆಳಗ್ಗೆಯಿಂದ ಸಂಜೆವರೆಗೆ ಬಂಗಾರ, ಬೆಳ್ಳಿ, ನೇಗಿಲು ಸೇರಿ ನಾನಾ ಉಡುಗೊರೆ ನೀಡಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಮುತ್ಸದ್ದಿ ರಾಜಕಾರಣಿ ಶಾಸಕ ಎಚ್.ವೈ. ಮೇಟಿ ಅಜಾತ ಶತ್ರು. ನಾಡುಕಂಡ ಅಪರೂಪದ ರಾಜಕಾರಣಿ. ಬಾಗಲಕೋಟೆ ಜಿಲ್ಲೆಯ ರಾಜಕಾರಣದಲ್ಲಿ ವಿಶೇಷ ರಾಜನೀತಿ ಅನುಸರಿಸುವ ಚಾಣಕ್ಯ. ಅವರ ರಾಜನೀತಿ ಯಾರಿಗೂ ಅರ್ಥವಾಗಲ್ಲ. ರಾಜಕೀಯ ಜೀವನದಲ್ಲಿ ಬಡವರ, ಜನಪರ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕ ಜೆ.ಟಿ. ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಪಿ.ಎಚ್. ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಅಧ್ಯಕ್ಷ ಎ.ಡಿ. ಮೊಕಾಶಿ, ಎಬಿಎಂಸಿ ಅಧ್ಯಕ್ಷ ಶಿವಾನಂದ ಅಬ್ದಲ್​ಪುರ ಇತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಶಿಕ್ಷಣನೀಡಲು ಸದಾ ಮುಂದೆ ಬರಬೇಕು. ಗ್ರಾಮೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಇಷ್ಟು ದೊಡ್ಡಮಟ್ಟದಲ್ಲಿ ನನ್ನನ್ನು ಅಭಿನಂದಿಸಿದಕ್ಕೆ ಅನಂತಾನಂತ ಧನ್ಯವಾದ.

|ಎಚ್.ವೈ.ಮೇಟಿ ಶಾಸಕ

Leave a Reply

Your email address will not be published. Required fields are marked *

Back To Top