Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಅಪ್ಪನಂತೆ ನಾನು…

Saturday, 21.10.2017, 3:03 AM       No Comments

ಮಕ್ಕಳಿಗೆ ತಂದೆ-ತಾಯಿಯೇ ಎಲ್ಲದಕ್ಕೂ ಮಾದರಿ. ಅವರೇನೇ ಮಾಡಿದರೂ ಮಕ್ಕಳು ಅನುಕರಿಸುತ್ತಾರೆ. ದೊಡ್ಡವರಾಗುತ್ತಿದ್ದಂತೆ ಬೇರೆಯವರನ್ನು ಅನುಕರಿಸಲು ತೊಡಗಿದರೂ ಹೆಣ್ಣು ಮಕ್ಕಳಿಗೆ ಅಪ್ಪನೇ ರಿಯಲ್ ಹೀರೋ. ಹಾಗಾಗಿಯೇ ಮೊದ ಮೊದಲು ಅಪ್ಪನ ಡ್ರೆಸಿಂಗ್ ಸ್ಟೈಲ್ ನೋಡಿ ಮೆಚ್ಚಿಕೊಳ್ಳುವ ಹೆಣ್ಣು ಮಕ್ಕಳು ಕಾಲೇಜಿಗೆ ಹೋಗುವ ವಯಸ್ಸಾಗು ತ್ತಿದ್ದಂತೆ ಅಪ್ಪನ ಸ್ಟೈಲ್ ಡಿಸೈನರ್ ಆಗುತ್ತಾರೆ. ಈಗ ಆನ್​ಲೈನ್​ನಲ್ಲಿ ಅಪ್ಪ-ಮಕ್ಕಳ ಶರ್ಟ್​ಗಳು ಸಿಗುತ್ತಿದ್ದು, ಬಹಳ ಫೇಮಸ್ ಕೂಡ ಆಗಿದೆ. ಅಮ್ಮನ ಡ್ರೆಸ್​ನಂತೆ ಮಕ್ಕಳು ಧರಿಸುವ ಟ್ರೆಂಡ್​ನಂತೆಯೇ ಅಪ್ಪ-ಮಕ್ಕಳ ಡ್ರೆಸ್​ಗೂ ಡಿಮಾಂಡ್ ಸೃಷ್ಟಿಯಾಗಿದೆ. ಒಂದೇ ಬಣ್ಣದ, ಒಂದೇ ಪ್ಯಾಟರ್ನ್​ನ, ಒಂದೇ ರೀತಿಯ ಡಿಸೈನ್ ಇರುವ ಶರ್ಟ್- ಪ್ಯಾಂಟ್​ಗಳು ಇದೀಗ ಟ್ರೆಂಡಿಂಗ್​ನಲ್ಲಿವೆ. ಆಕರ್ಷಕವಾದ ಟ್ಯಾಗ್​ಲೈನ್, ಸ್ಲೋಗನ್​ಗಳಿರುವ ಶರ್ಟ್ ಗಳಲ್ಲಿ ಮಕ್ಕಳು ಮತ್ತು ಅಪ್ಪನ ಬಾಂಧವ್ಯ ನಿರೂಪಿಸಲಾಗುತ್ತದೆ. ಸಿಂಪಲ್ ಆಗಿರುವ ಇಂತಹ ಲೈನ್​ಗಳು ಕ್ಯಾಚಿಯಾಗಿ ಇರುವುದರಿಂದ ಮಕ್ಕಳಿಗೂ ನೋಡಲು ಖುಷಿಯಾಗುತ್ತದೆ. ಅಪ್ಪ-ಮಕ್ಕಳ ಈ ರೀತಿಯ ಒಂದೇ ಡ್ರೆಸ್​ನ ಫೋಟೋ ಶೂಟ್​ಗಳು ಇತ್ತೀಚೆಗೆ ಹೆಚ್ಚುತ್ತಿವೆ.

Leave a Reply

Your email address will not be published. Required fields are marked *

Back To Top