Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಅಪಾಯ ಮಟ್ಟಕ್ಕೆ ವಾಯು ಗುಣಮಟ್ಟ

Monday, 06.03.2017, 9:31 AM       No Comments

ಮಂಗಳೂರು: ಜನಸಾಂದ್ರತೆ ಕಡಿಮೆ ಇರುವ ನಗರದಲ್ಲಿ ಪರಿಶುದ್ಧ ವಾತಾವರಣದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದುಕೊಂಡಿದ್ದರೆ ಅದು ತಪ್ಪಾದೀತು! ನಗರದ ವಾಯುವಿನ ಅಪಾಯದ ಸನಿಹವಿದೆ ಎಂದು ವರದಿಯೊಂದು ಹೇಳಿದೆ.

ಎಪಿಡಿ ಫೌಂಡೇಶನ್ ‘ಶುದ್ಧ ಗಾಳಿ’ ಯೋಜನೆಯನ್ವಯ ಸೇಂಟ್ ಜಾರ್ಜ್ ಹೋಮಿಯೋಪಥಿ ಜತೆಗೂಡಿ ನಡೆಸಿದ ಅಧ್ಯಯನದ ತಾಂತ್ರಿಕ ವರದಿ ಹಾಗೂ ಮಂಗಳೂರಿನ ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವರದಿಯನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಅವರಿಗೆ ಸಲ್ಲಿಸಿದೆ. ಈ ವರದಿ ಪ್ರಕಾರ ನಗರದ ಗಾಳಿಯಲ್ಲಿ ಹೆಚ್ಚು ಸೀಸದ ಅಂಶವಿದ್ದು, ಇತರ ಹಾನಿಕಾರಕ ಅಂಶಗಳೂ ಅಪಾಯದ ಮಟ್ಟಕ್ಕೆ ಸನಿಹದಲ್ಲಿವೆ ಹಾಗೂ ಇದರಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಎಪಿಡಿ ಫೌಂಡೇಶನ್ ಅಧ್ಯಕ್ಷ ಅಬ್ದುಲ್ಲಾ ರೆಹಮಾನ್ ಹಾಗೂ ರಾಜ್ಯ ಸಂಚಾಲಕ ಅರ್ಜುನ್ ರೈ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದು, ವಾಯು ಮಾಲಿನ್ಯ ತಡೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಎಪಿಡಿ ಫೌಂಡೇಶನ್ ಡಿಸೆಂಬರ್​ನಲ್ಲಿ ಸ್ವತಂತ್ರ ಸಂಶೋಧನೆ ಕೈಗೊಂಡಿತ್ತು. ಒನ್​ಅರ್ಥ್​ಎನ್ವಿರೋ ಲ್ಯಾಬ್ಸ್ ತಾಂತ್ರಿಕ ಪರಿಣತರು ಅಧ್ಯಯನ ನಡೆಸಿದ್ದು, ನಗರದ 12 ಪ್ರಮುಖ ಸ್ಥಳಗಳಿಂದ ಡಿಸೆಂಬರ್ 1ರಿಂದ 8ರ ತನಕ ಪ್ರತಿದಿನ ಎಂಟು ತಾಸು ಗಾಳಿಯ ಮಾದರಿ ಸಂಗ್ರಹಿಸಲಾಗಿತ್ತು.

ವಾಯುಮಾಲಿನ್ಯ ಕಾರಕಗಳ ಪರಿಶೀಲನೆ

ಅಧ್ಯಯನದ ಭಾಗವಾಗಿ ಆರು ವಾಯುಮಾಲಿನ್ಯ ಕಾರಕಗಳನ್ನು ಪರಿಶೀಲಿಸಲಾಗಿತ್ತು. ಇವುಗಳಲ್ಲಿ ಪಿಎಂ (ಪಾರ್ಟಿಕ್ಯುಲೇಟ್ ಮ್ಯಾಟರ್) 2.5, ಪಿಎಂ 10 ಹಾಗೂ ಸೀಸ ಕೆಲವು ಪ್ರದೇಶಗಳಲ್ಲಿ ಸಹಜತೆಗಿಂತ ಹೆಚ್ಚಾಗಿದೆ. ಪಿಎಂ 2.5 ಹಾಗೂ ಪಿಎಂ 10. 12 ಸ್ಥಳಗಳ ಪೈಕಿ ಮೂರರಲ್ಲಿ (ಬಂಟ್ಸ್ ಹಾಸ್ಟೆಲ್, ಪಂಪ್​ವೆಲ್ ಹಾಗೂ ಬೈಕಂಪಾಡಿ) ಹಾಗೂ ಪಿಎಂ 2.5 12 ಸ್ಥಳಗಳ ಪೈಕಿ ಆರು ಸ್ಥಳಗಳಲ್ಲಿ (ಪಿವಿಎಸ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಬಂದರ್, ಎಂಸಿಸಿ, ಪಂಪ್​ವೆಲ್ ಮತ್ತು ಬೈಕಂಪಾಡಿ) ಮಿತಿಗಿಂತ ಹೆಚ್ಚಾಗಿದೆ.

ದೀರ್ಘಾವಧಿಯಲ್ಲಿ ತೊಂದರೆ

ನಗರದ ಹೆಚ್ಚಿನ ಕಡೆ ಒಟ್ಟಾರೆ ವಾಯು ಗುಣಮಟ್ಟ ಉತ್ತಮವಾಗಿದೆಯೆಂದು ಅಧ್ಯಯನದಲ್ಲಿ ಕಂಡು ಬಂದರೂ, ದೀರ್ಘಾವಧಿಯಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಎಪಿಡಿ ಫೌಂಡೇಶನ್ ಸಂಬಂಧಿತ ಅಧಿಕಾರಿಗಳನ್ನು ವಿನಂತಿಸಿದೆ.

ಸಿಎನ್​ಜಿ, ಎಲ್​ಪಿಜಿ ಬೇಕು

ನಗರದಲ್ಲಿ ಸಿಎನ್​ಜಿ ಲಭ್ಯಗೊಳಿಸಬೇಕು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಸಿಎನ್​ಜಿ/ಎಲ್​ಪಿಜಿ ಉಪಯೋಗಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ದೇಶದೆಲ್ಲೆಡೆ ಬಿಎಸ್-4 ಮಾದರಿ ವಾಹನಗಳು ಕಡ್ಡಾಯವಾಗಿದ್ದರೆ, ಮಂಗಳೂರಿನ ರಸ್ತೆಗಳಲ್ಲಿ ಇನ್ನೂ ಬಿಎಸ್-3ರ ವಾಹನಗಳು ಸಂಚರಿಸುತ್ತಿವೆ ಎಂದು ಎಪಿಡಿ ಫೌಂಡೇಶನ್ನಿನ ರೆಹಮಾನ್ ಹೇಳುತ್ತಾರೆ.

Leave a Reply

Your email address will not be published. Required fields are marked *

Back To Top