Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ!

Monday, 17.07.2017, 3:04 AM       No Comments

ನವದೆಹಲಿ: ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ನಿಗೂಢ ಸಾವಿನ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಫ್ರಾನ್ಸ್ ಸರ್ಕಾರದ ಗೌಪ್ಯ ವರದಿಯೊಂದು ಬಹಿರಂಗವಾಗಿದೆ. ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ ಎಂಬ ಅಂಶ ಇದರಲ್ಲಿ ಉಲ್ಲೇಖವಾಗಿದೆ.

ಪ್ಯಾರಿಸ್ ಮೂಲದ ಇತಿಹಾಸಕಾರ ಜೆಬಿಪಿ ಮೋರ್ ಎಂಬುವವರು 1947ರ ಡಿಸೆಂಬರ್ 11ರಂದು ಫ್ರೆಂಚ್ ಸರ್ಕಾರ ಸಿದ್ಧಪಡಿಸಿದ್ದ ಗೌಪ್ಯ ವರದಿಯನ್ನು ಪತ್ತೆ ಹಚ್ಚಿದ್ದಾರೆ. 1945ರಲ್ಲಿ ಇಂಡೋಚೀನಾ ಪ್ರದೇಶದಿಂದ ನೇತಾಜಿ ಜೀವಂತವಾಗಿ ಪರಾರಿಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ, ನೇತಾಜಿ 1947ರವರೆಗೆ ಜೀವಂತವಾಗಿದ್ದರು. ಅವರು 1945ರ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಲಾಗಿದೆ.

ಆದರೆ, ಫ್ರೆಂಚ್ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫ್ರೆಂಚ್ ರಹಸ್ಯ ವರದಿಯನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು ಎಂದು ನೇತಾಜಿ: ಲಿವಿಂಗ್ ಡೇಂಜರಸ್ಲಿ ಎಂಬ ಪುಸ್ತಕದ ಲೇಖಕ ಕಿಂಗ್ ಶುಕ್ ನಾಗ್ ಅಭಿಪ್ರಾಯಪಟ್ಟಿದ್ದಾರೆ.

ಅಪಘಾತದಲ್ಲೇ ನಿಧನ ಎಂದಿದ್ದ ಕೇಂದ್ರ ಸರ್ಕಾರ

ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ನೇತಾಜಿ ಸಾವಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಸರ್ಕಾರ, ನೇತಾಜಿ ಅವರ ಸಾವು ವಿಮಾನ ಅಪಘಾತದಿಂದ ಸಂಭವಿಸಿತ್ತು ಎಂದಿತ್ತು. ಆದರೆ, ಈಗ ಫ್ರೆಂಚ್ ಗೌಪ್ಯ ವರದಿ ವ್ಯತಿರಿಕ್ತ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ನೇತಾಜಿ ಸಾವಿನ ರಹಸ್ಯದ ಕುರಿತು 1956ರಲ್ಲಿ ಷಾ ನವಾಜ್ ಸಮಿತಿ ಹಾಗೂ 1970ರಲ್ಲಿ ಖೋಸ್ಲಾ ಸಮಿತಿ, ನೇತಾಜಿ ಅವರು 1945 ರ ಆಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದವು. ಆದರೆ, 1999ರಲ್ಲಿ ಮುಖರ್ಜಿ ಆಯೋಗ ಮಾತ್ರ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದಿತ್ತು.

Leave a Reply

Your email address will not be published. Required fields are marked *

Back To Top