Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಅನ್ವೇಷಣೆಗಿಳಿದ ದಿಶಾ ಪೂವಯ್ಯ

Thursday, 07.12.2017, 3:04 AM       No Comments

| ಮಂಜು ಕೊಟಗುಣಸಿ ಬೆಂಗಳೂರು

ಸಸ್ಪೆನ್ಸ್ ಸಿನಿಮಾಗಳ ಮೂಲಕವೇ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿತ್ತು. ಹೊಸಬರ ಪ್ರಯತ್ನಕ್ಕೆ ಆರಂಭದಲ್ಲಿಯೇ ಯಶಸ್ಸಿನ ಏಣಿ ಸಿಕ್ಕಿತ್ತು. ಅದೇ ರೀತಿ ಇದೀಗ ಅನ್ವೇಷಿಯ ಸರದಿ. ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ದಿಶಾ ಪೂವಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಹಾಗೂ ಪಾತ್ರದ ಬಗ್ಗೆ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ.

# ಹೊಸದೇನಾದರೂ ಮಾಡಲು ಪ್ರಯತ್ನಪಟ್ಟಿದ್ದೀರಾ?

ಹೊಸ ರೀತಿಯ ಪ್ರಯತ್ನ ಮಾಡಿಲ್ಲ. ಹೊಸ ಪ್ರಯೋಗ ಮಾಡಲು ಅವಕಾಶವಿರಲಿಲ್ಲ. ತುಂಬ ಸಿಂಪಲ್ ಹುಡುಗಿ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ಖುಷಿ ಇದೆ.

# ತಿಲಕ್ ಪಾತ್ರದ ಬಗ್ಗೆ ಹೇಳಿ?

ಇಡೀ ಸಿನಿಮಾ ಸಾಗುವುದೇ ಅವರ ಪಾತ್ರದ ಮೇಲೆ. ಸಿನಿಮಾ ದಲ್ಲಿಯೇ ಸಿನಿಮಾ ತಯಾರಾಗುತ್ತಿರುತ್ತದೆ. ಅದರಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರವರು. ಆದರೆ ಅವರೊಂದಿಗೆ ನನ್ನ ಪಾತ್ರವಿಲ್ಲ. ಒಂದು ಗ್ರೂಪ್ ಹಾಡಿನಲ್ಲಿ ಅವರೊಟ್ಟಿಗೆ ನಾನು ನಟಿಸಿದ್ದು ಬಿಟ್ಟರೆ ನನಗವರು ಎದುರಾಗಿಲ್ಲ. ಇನ್ನೊಂದು ವಿಷಯ ಏನೆಂದರೆ ತಿಲಕ್ ಅವರದ್ದಿಲ್ಲಿ ಜರ್ನಲಿಸ್ಟ್ ಪಾತ್ರ. ಸಿಕ್ಸ್ ್ತ ಸೆನ್ಸ್ ಬಗ್ಗೆ ಲೇಖನ ಬರೆಯುವ ಉದ್ದೇಶ ಅವರಿಗಿರುತ್ತದೆ. ಯಾಕೆ, ಏನು ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳ ಬೇಕು.

# ನಿಮ್ಮ ಪ್ರಕಾರ ‘ಅನ್ವೇಷಿ’ ಅಂದ್ರೇನು?

ಅನ್ವೇಷಿ ಅಂದ್ರೆ ಹುಡುಕಾಟ ಎಂದರ್ಥ. ಸಿನಿಮಾದಲ್ಲಿ ಯಾಕಾಗಿ ಹುಡುಕಾಟ ನಡೆಯುತ್ತದೆ ಎಂಬುದೇ ಕಥೆ. ಸಸ್ಪೆನ್ಸ್ -ಥ್ರಿಲ್ಲರ್ ಜತೆಗೆ ಮಿಸ್ಟರಿಯೂ ಹೆಚ್ಚು ನೋಡಿಸಿಕೊಂಡು ಹೋಗುತ್ತದೆ. ಕಾಲೇಜು ವಿದ್ಯಾರ್ಥಿಗಳು ನೋಡಲೇಬೇಕಾದ ಸಿನಿಮಾ ಇದು. ಕಾಲೇಜು, ಕ್ಯಾಂಪಸ್ಸು, ತರಲೆ ಕೊನೆಗೆ ಒಂದಿಷ್ಟು ಸಂದೇಶ ಎಲ್ಲವೂ ಅನ್ವೇಷಿಯಲ್ಲಿದೆ.

# ಈ ಹಿಂದಿನ ಹಾರರ್ ಸಿನಿಮಾಕ್ಕಿಂತ ಭಿನ್ನವಾದ್ದೇನು ನಿರೀಕ್ಷಿಸಬಹುದು?

‘ಅನ್ವೇಷಿ’ ಪೂರ್ತಿ ಹಾರರ್ ಜಾನರ್​ಗೆ ಸೇರಿಸಲು ಬರುವುದಿಲ್ಲ. ಕೊನೆಯಲ್ಲಿ ಒಂದು ಸಣ್ಣ ಹಾರರ್ ಟಚ್ ಇದೆ. ಆದರೆ ಸಿನಿಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳೇ ಪ್ರಧಾನ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಹುಡುಕಾಟವಿದೆ. ಆ ಹುಡುಕಾಟದಲ್ಲಿ ಎದುರಾಗುವ ಸಮಸ್ಯೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗೆ ಎಲ್ಲವೂ ಕೌತುಕ ಸೃಷ್ಟಿಸುತ್ತದೆ.

# ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ಕಾಲೇಜ್ ವಿದ್ಯಾರ್ಥಿಯಾಗಿ ನನ್ನ ಪಾತ್ರ ಸಾಗುತ್ತ ಹೋಗುತ್ತದೆ. ರಘು ಭಟ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದೇನೆ. ಮುದ್ದು ಹುಡುಗಿ, ತುಂಬ ಬಬ್ಲಿ ರೀತಿಯ ಪಾತ್ರ.

# ಚಿತ್ರದಲ್ಲಿ ಐವರು ನಾಯಕಿಯರು, ಮೂವರು ನಾಯಕರಿದ್ದಾರಂತೆ?

ಕಾಲೇಜ್ ವಿದ್ಯಾರ್ಥಿಗಳಾಗಿ ನಾವೆಲ್ಲ ಕಾಣಿಸಿಕೊಂಡಿದ್ದೇವೆ. ನಾನೂ ಸೇರಿ ರಮ್ಯಾ ಬಾರ್ನ, ಶ್ರದ್ಧಾ, ನವ್ಯಾ ನಟಿಸಿದ್ದೇವೆ. ರಮ್ಯಾ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ. ಉಳಿದೆಲ್ಲ ಪಾತ್ರಗಳಿಗೂ ಸಮಾನ ಮಹತ್ವವಿದೆ. ಒಬ್ಬೊಬ್ಬರದ್ದು ಒಂದೊಂದು ಹುಡುಕಾಟದ ಹಾದಿ.

# ಮುಂದೆ ಯಾವ ತರಹದ ಪಾತ್ರ ಮಾಡಬೇಕೆಂಬ ಆಸೆ?

ಈವರೆಗೂ ಬಹುತಾರಾಗಣದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೆ. ಸೋಲೋ ನಾಯಕಿಯಾಗಿ ನಟಿಸಬೇಕೆಂಬ ಆಸೆ ಇದೆ. ‘ದೇವದಾಸ್’ ರೀತಿ ಸಿನಿಮಾದಲ್ಲಿ ನಟಿಸುವುದು ನನ್ನ ಆದ್ಯತೆಗಳಲ್ಲೊಂದು.

# ಸದ್ಯ ಯಾವೆಲ್ಲ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಿ?

‘ಸಾಲಿಗ್ರಾಮ’, ‘ಶಿವ ಪಾರು’ ಸಿನಿಮಾ ಬಿಡುಗಡೆ ಹಂತದಲ್ಲಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹಾಗೆಯೇ ತೆಲುಗಿನಲ್ಲಿ ತಯಾರಾದ ‘ಒಕಟೆ ಲವ್’ ಇದೇ ತಿಂಗಳಲ್ಲಿ ತೆರೆಕಾಣಲಿದೆ.

Leave a Reply

Your email address will not be published. Required fields are marked *

Back To Top