Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಅನಿವಾಸಿಗಳ ಹೂಡಿಕೆಗೆ ಹೊಸ ನೀತಿ

Saturday, 07.01.2017, 2:40 AM       No Comments

ಬೆಂಗಳೂರು: ಪ್ರಪಂಚದ ನಾನಾಭಾಗದಲ್ಲಿ ನೆಲೆಸಿರುವ ದೇಶದ ಅಥವಾ ರಾಜ್ಯದ ಜನರಿಗೆ ನಮ್ಮ ನೆಲದಲ್ಲಿಯೂ ಏನಾದರೂ ಮಾಡಬೇಕೆನ್ನುವ ತುಡಿತ ಇದ್ದೇ ಇರುತ್ತದೆ. ಇಂತಹ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಹೊಸ ವೇದಿಕೆಯೊಂದನ್ನು ಕಲ್ಪಿಸಿದ್ದು ದೇಶದಲ್ಲಿಯೇ ಮೊದಲ ಬಾರಿಗೆ ಅನಿವಾಸಿ ಭಾರತೀಯರು/ಕನ್ನಡಿಗರಿಗಾಗಿ ಹೊಸ ನೀತಿ ರೂಪಿಸಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎನ್​ಆರ್​ಐ ನೀತಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಚಿವರಾದ ಆರ್. ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಅನಿವಾಸಿ ಭಾರತೀಯರ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೀತಿಯ ತಿರುಳು: ದೇಶ ಅಥವಾ ರಾಜ್ಯದ ಕಾಯಂ ಪ್ರಜೆಗಳಾಗಿದ್ದು, ಭಾರತದ ಪಾಸ್​ಪೋರ್ಟ್ ಹೊಂದಿದ್ದು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಹೊರದೇಶದಲ್ಲಿ ನೆಲೆಸಿದವರೊಂದಿಗೆ ಬಂಡವಾಳ ಹೂಡಿಕೆ ಮೂಲಕ ಮರುಬಾಂಧವ್ಯ, ಆರ್ಥಿಕ, ಸಾಮಾಜಿಕ ಹಾಗೂ ತಾಂತ್ರಿಕ ಅಭಿವೃದ್ಧಿ ಮಾಡುವುದು ನೀತಿಯ ಗುರಿ.

ಪ್ರಥಮ ಹಂತದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎನ್​ಆರ್​ಐ ವೇದಿಕೆ ರಚಿಸಲು ತೀರ್ವನಿಸಿದೆ. ರಾಜ್ಯ ಮಟ್ಟದ ವೇದಿಕೆಗೆ ಸಿಎಂ ಅಧ್ಯಕ್ಷರಾಗಿದ್ದರೆ, ಜಿಲ್ಲಾಮಟ್ಟದ ವೇದಿಕೆಗೆ ಡಿಸಿ ಹಾಗೂ ಎಸ್ಪಿ ಅಧ್ಯಕ್ಷರಾಗಿರುತ್ತಾರೆ. ಅನಿವಾಸಿಗಳಿಗೆ ನೆರವು ನೀಡುವ ಜವಾಬ್ದಾರಿಯನ್ನು ಅಧೀನ ಅಧಿಕಾರಿಗಳಿಗೂ ನೀಡಲಾಗಿದೆ.

ಓವರ್​ಸೀಸ್ ಇಂಡಿಯನ್ ಫೆಸಿಲಿಟೇಷನ್ ಸೆಂಟರ್ (ಒಐಎಫ್​ಸಿ) ಸಂಪರ್ಕ ಕೇಂದ್ರ ಸ್ಥಾಪಿಸಿ ಅದರ ಮೂಲಕ ಸರ್ಕಾರದ ಹೊಸ ನೀತಿಗಳು, ಬಂಡವಾಳ ಹೂಡಿಕೆಯ ಸಮಗ್ರ ಮಾಹಿತಿ, ಯೋಜನೆಯ ಅನುದಾನದ ಮಂಜೂರಾತಿ, ಅನುದಾನ ಬಿಡುಗಡೆ ಇತ್ಯಾದಿ ಎಲ್ಲ ಮಾಹಿತಿ ನೀಡಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಜತೆಗೆ ಈ ನೀತಿಯಡಿ ಪ್ರತ್ಯೇಕ ಕಾನೂನು ಘಟಕವನ್ನೂ ಆರಂಭಿಸಲಿದೆ.

‘ಸಿಸ್ಟರ್ ಸಿಟಿ’: ಪ್ರಪಂಚದೆಲ್ಲೆಡೆ ಸಹಯೋಗ ಸಾಧಿಸಲು ‘ಸಿಸ್ಟರ್ ಸಿಟಿ’ ಕಲ್ಪನೆ ಹೊಂದಲಾಗಿದೆ. ಸ್ಯಾನ್​ಫ್ರಾನ್ಸಿಸ್ಕೋ -ಬೆಂಗಳೂರು, ಚೆಂಗುಡು- ಬೆಂಗಳೂರು ಹೀಗೆ ಅಂತರಾಷ್ಟ್ರೀಯ ನಗರಗಳೊಂದಿಗೆ ಜಂಟಿ ಕಾರ್ಯಕ್ರಮ ರೂಪಿಸಲು ಅನುಕೂಲವಾಗುವಂತೆ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಹೊಸ ನೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಹಲವು ಸಾಧ್ಯತೆಗಳನ್ನು ಕಂಡುಕೊಳ್ಳಲಾಗಿದೆ. ಕನ್ನಡವನ್ನು ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ನೀತಿ ಹೊಂದಿದೆ.

ಈ ನೀತಿಯ ಮೂಲಕ ಅನಿವಾಸಿಗರು ರಾಜ್ಯದಲ್ಲಿ ಬಂಡವಾಳ ಹೂಡಲು ಪೂರಕ ವಾತಾವರಣ ನಿರ್ವಿುಸುತ್ತಿದ್ದೇವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ರುವ ಕನ್ನಡಿಗರು ಇಲ್ಲಿ ಹೂಡಿಕೆ ಮಾಡಬೇಕು

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಈ ನೀತಿಯಡಿ ರಾಜ್ಯದ ಅನಿವಾಸಿಗರಿಗೆ ಎನ್​ಆರ್​ಕೆ

ಗುರುತಿನ ಚೀಟಿ ನೀಡುತ್ತೇವೆ. ನಾನು ಕನ್ನಡಿಗ ಎಂಬ ಸ್ವಾಭಿಮಾನ ಇದರಿಂದ ಹೆಚ್ಚಾಗಲಿದೆ. 250ಕೋಟಿ ರೂ.ಗಳಿಗೂ ಅಧಿಕ ಮೊತ್ತ ಹೂಡಿಕೆ ಮಾಡುವವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು

| ಆರ್.ವಿ.ದೇಶಪಾಂಡೆ, ಬೃಹತ್ ಕೈಗಾರಿಕೆ ಸಚಿವ

ಅನಿವಾಸಿಗಳು ದೊಡ್ಡ ಆಸ್ತಿ

ಬೆಂಗಳೂರು: ಅನಿವಾಸಿ ಭಾರತೀಯರು ದೇಶದ ಬಹುದೊಡ್ಡ ಆಸ್ತಿಯಾಗಿದ್ದು ರಾಜ್ಯದಲ್ಲಿ ಹೂಡಿಕೆಗೆ ಮುಂದೆ ಬರಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು. ಪೀಪಲ್ ಆಫ್ ಇಂಡಿಯನ್ ಓರಿಜಿನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಪಿಐಒಸಿಸಿಐ) ಏರ್ಪಡಿಸಿದ್ದ ‘ಬಿಜಿನೆಸ್ ಅಪಾರ್ಚುನಿಟಿ ಫಾರ್ ಡಯಾಸ್ಪೋರಾ’ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

64 ದೇಶಗಳ ಪ್ರತಿನಿಧಿಗಳು ಭಾಗಿ: ಜ.7 ರಿಂದ ಮೂರು ದಿನ ಕಾಲ 14ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ನಡೆಯಲಿದ್ದು, 64 ದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಇದು ಹೂಡಿಕೆಗಾಗಿ ಮಾತ್ರ ಆಯೋಜಿಸಿರುವ ಸಮಾವೇಶವಲ್ಲ. ಅನಿವಾಸಿ ಭಾರತೀಯರ ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಪಿಐಒಸಿಸಿಐ ಕರ್ನಾಟಕ ಕೋ-ಆರ್ಡಿನೇಟರ್ ಸಮರ್ಥ ನಾಗಭೂಷಣಂ, ಎಸ್​ಟಿಪಿಐ ಮಾಜಿ ನಿರ್ದೇಶಕ ಡಾ.ಬಿ.ವಿ. ನಾಯ್ಡು, ಎನ್​ಆರ್​ಐ ವೇದಿಕೆಯ ಆರತಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಎನ್​ಆರ್​ಐ ಜಾತ್ರೆಗೆ ಸಜ್ಜಾದ ಬೆಂಗಳೂರು

ಬೆಂಗಳೂರು: ದೇಶದಲ್ಲಿರುವ ಹೂಡಿಕೆ ಅವಕಾಶಗಳು, ಪ್ರವಾಸೋದ್ಯಮ, ಸಂಸ್ಕೃತಿಯನ್ನು ಅನಿವಾಸಿ ಭಾರತೀಯರಿಗೆ ಪರಿಚಯಿಸುವ ಸಲುವಾಗಿ ಇಂದಿನಿಂದ 3 ದಿನ ನಡೆಯುವ ಪ್ರವಾಸಿ ಭಾರತೀಯ ದಿವಸ್​ಗೆ ಉದ್ಯಾನನಗರಿ ಬೆಂಗಳೂರು ಸಜ್ಜಾಗಿದೆ. ಕೇಂದ್ರ ಸರ್ಕಾರ ನಡೆಸುವ ಅನಿವಾಸಿ ಭಾರತೀಯರ ಜಾತ್ರೆ ಎಂದೇ ಗುರುತಿಸಲ್ಪಡುವ ಈ ಕಾರ್ಯಕ್ರಮದ ಆತಿಥ್ಯ ಇದೇ ಮೊದಲಬಾರಿಗೆ ಕರ್ನಾಟಕ ಸರ್ಕಾರ ದ್ದಾಗಿದೆ. ರಾಜ್ಯ ಸರ್ಕಾರ ಸಮಾವೇಶಕ್ಕಾಗಿ 20 ಕೋಟಿ ರೂ. ಬಿಡುಗಡೆ ಮಾಡಿದೆ.

ಬೆಂಗಳೂರಿನ ಹೊರ ವಲಯದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ವಿವಿಧ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ, ಆಹಾರ, ಸಂಸ್ಕೃತಿಯನ್ನು ಪರಿಚಯಿಸುವ ಮಳಿಗೆಗಳನ್ನು ತೆರೆದಿದ್ದಾರೆ. ಸಿಎಂ ಸಿದ್ದರಾಮಯ್ಯ, ಛತ್ತೀಸ್​ಘಡ ಸಿಎಂ ರಮಣ್​ಸಿಂಗ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಪಢ್ನವೀಸ್, ಮಧ್ಯಪ್ರದೇಶ ಸಿಎಂ ಶಿವರಾಜಸಿಂಗ್ ಚವ್ಹಾಣ್, ಕೇರಳ ಸಿಎಂ ವಿಜಯನ್ ಪಿನರಾಯ್, ಜಾರ್ಖಂಡ್ ಸಿಎಂ ರಘುಬರ್ ದಾಸ್ ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಲಿದ್ದಾರೆ.

ಸಮಾವೇಶದಲ್ಲಿ 6500 ಜನ ಅನಿವಾಸಿ ಭಾರತೀಯರು ಭಾಗವಹಿಸುತ್ತಿದ್ದಾರೆ. ಅದರಲ್ಲಿ 400 ಜನ ಕನ್ನಡಿಗರಿದ್ದಾರೆ. ಮೊದಲ ದಿನ ಕೇಂದ್ರ ಯುವ ಜನ ಸಚಿವ ವಿಜಯ್ ಗೋಯಲ್ ಯುವ ಪ್ರವಾಸಿ ಭಾರತ್ ಉದ್ಘಾಟಿಸಲಿದ್ದಾರೆ. ಮೈಕೆಲ್ ಆಸ್ಟಿನ್ ಅವರು ಯುವ ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಲಿದ್ದಾರೆ.

2ನೇ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೋರ್ಚಗಲ್ ಪ್ರಧಾನಿ ಡಾ. ಆಂಟೋನಿಯಾ ಕೋಸ್ಟಾ ಭಾಗವಹಿಸಲಿದ್ದಾರೆ. ಸೋಮವಾರ ಸಮಾರೋಪ ನಡೆಯಲಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ 30 ಜನರಿಗೆ ಪ್ರವಾಸಿ ಭಾರತ್ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಜ್ಯದಿಂದ ಏನೇನು: ರಾಜ್ಯ ಸರ್ಕಾರ 1.49 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಇನ್ವೆಸ್ಟ್ ಕರ್ನಾಟಕದ ನಂತರ ಆಕರ್ಷಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಪ್ರವಾಸಿ ಕೇಂದ್ರಗಳು ಮುಂತಾದ ಮಾಹಿತಿ ನೀಡುವ ಹೊಸ ಆಪ್ ಬಿಡುಗಡೆಯಾಗಲಿದೆ. ಕಾರ್ಯಕ್ರಮ ಸಂಬಂಧ ಭದ್ರತೆ ಕೈಗೊಳ್ಳಲಾಗಿದೆ.

 

Leave a Reply

Your email address will not be published. Required fields are marked *

Back To Top