Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಅತೀಂದ್ರಿಯ ಮೋಜೊ! 

Friday, 19.05.2017, 3:00 AM       No Comments

ಬೆಂಗಳೂರು: ಸಿಕ್ಸ್ತ್ ಸೆನ್ಸ್ ಅಂಶವನ್ನು ಮುಖ್ಯವಾಗಿಟ್ಟುಕೊಂಡು ಹೊಸಬರ ತಂಡವೊಂದು ‘ಮೋಜೊ’ ಎಂಬ ಸಿನಿಮಾ ಮಾಡಿದೆ. ಅಷ್ಟಕ್ಕೂ ಈ ‘ಮೋಜೊ’ ಎಂದರೇನು? ಅದಕ್ಕೆ ನಿರ್ದೇಶಕ ಶ್ರೀಶ, ‘ಮೋಜೊ ಇದೊಂದು ಆಫ್ರಿಕನ್ ಭಾಷೆಯ ಪದ. ನಾವು ಇದಕ್ಕೆ ಪರ್ಯಾಯವಾಗಿ ಪದ ಹುಡುಕುವುದಾದರೆ ‘ಜಾದೂ’ ಅಂತಲೂ ಕರೆಯಬಹುದು. ಹಾಗಂತ ಸಿನಿಮಾದಲ್ಲಿ ಎಲ್ಲಿಯೂ ಜಾದೂ ಮಾಡಿಲ್ಲ. ಕಥೆ ಸಾಗುವ ಹಾದಿಗೆ ಈ ಪದ ಸೂಕ್ತ ಅನಿಸಿದ್ದಕ್ಕೆ ಈ ಶೀರ್ಷಿಕೆ ನೀಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀಶ.

ಚಿತ್ರದ ನಾಯಕ ಮನು ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಪತ್ರಕರ್ತನ ಪಾತ್ರ ಮಾಡಿರುವ ಮನುಗೆ ಸಿಕ್ಸ್ತ್ ಸೆನ್ಸ್ (ಪೂರ್ವ ಬೋಧನಾ ಸಾಮರ್ಥ್ಯ) ಭವಿಷ್ಯವನ್ನು ತಿಳಿದುಕೊಳ್ಳುವ ಶಕ್ತಿ ಬಂದಿರುತ್ತದೆ. ಆ ಸೆನ್ಸ್​ನಿಂದ ಆತನ ಜೀವದ ಮೇಲೆ ಅದ್ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ‘ಮೋಜೊ’ ಸಿನಿಮಾ ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ಥ್ರಿಲ್ಲರ್ ಚಿತ್ರ. ಸಿನಿಮಾದ ಕಥೆ ಭಿನ್ನವಾಗಿ ರುವುದರಿಂದ ತಂತ್ರಜ್ಞರನ್ನು ಆಯ್ದುಕೊಳ್ಳುವಲ್ಲಿ ಚಿತ್ರತಂಡ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ಹೀಗಾಗಿಯೇ ಹಲವು ಹಿಟ್ ಚಿತ್ರಗಳಲ್ಲಿ ಕೈಚಳಕ ತೋರಿಸಿದ ತಂತ್ರಜ್ಞರನ್ನೇ ಆಯ್ದುಕೊಂಡಿದೆ. ‘ಲಾಸ್ಟ್ ಬಸ್’, ‘ನಾನು ನನ್ನ ಕನಸು’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಅನಂತ್ ಅರಸ್ ‘ಮೋಜೊ’ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಎಸ್.ಡಿ. ಅರವಿಂದ್ ರಾಗ ಸಂಯೋಜಿಸಿದ್ದರೆ, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಖ್ಯಾತಿಯ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇನ್ನು ಸಿನಿಮಾ ನಿರ್ಮಾಣ ವಿಚಾರಕ್ಕೆ ಬಂದರೆ ಗಜಾನನ ಭಟ್, ಸುಚೀನ್ ಬಂಡವಾಳ ಹೂಡಿದ್ದಾರೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಅನುಷಾ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸಿದ್ದ ಬೆಳಗಾವಿಯ ಸ್ಮಿತಾ ಕುಲಕರ್ಣಿ ಇಲ್ಲಿ ಕೊರವಂಜಿ ಪಾತ್ರ ನಿರ್ವಹಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದೆ. ಸದ್ಯ ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಜುಲೈ ವೇಳೆಗೆ ಸಿನಿಮಾ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

 

 

Leave a Reply

Your email address will not be published. Required fields are marked *

Back To Top