Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಅಡ್ಡಾದಿಡ್ಡಿ ಅಭಿವೃದ್ಧಿಗೆ ನಮ್ಮ ಮೆಟ್ರೋ ತಡೆ

Saturday, 23.06.2018, 3:02 AM       No Comments

ರಾಜ್ಯ ರಾಜಧಾನಿಯ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ ಹಾಕುವ ರೀತಿಯಲ್ಲೇ ನಮ್ಮ ಮೆಟ್ರೋ 3ನೇ ಹಂತ ಸಿದ್ಧಗೊಂಡಿದ್ದು, ಮುಂಬರುವ ದಿನಗಳಲ್ಲಿ ವರ್ತಲಾಕಾರದಲ್ಲಿ ಇಡೀ ನಗರದ ಹೊರವಲಯವನ್ನು ಮೆಟ್ರೋ ಸಂರ್ಪಸಲಿದೆ.

| ಅಭಿಲಾಷ್ ಪಿಲಿಕೂಡ್ಲು

ಬೆಂಗಳೂರು: ಬೆಂಗಳೂರು ನಗರ ಸೂಕ್ತ ಸ್ವರೂಪವಿಲ್ಲದೆ ಮಿತಿಮೀರಿ ಬೆಳೆದುಬಿಟ್ಟಿದೆ. ಇದೇ ಕಾರಣದಿಂದಾಗಿ ಮೂಲಸೌಕರ್ಯ ಕೊರತೆ, ಟ್ರಾಫಿಕ್ ಸಮಸ್ಯೆ ದಿನನಿತ್ಯದ ಸಮಸ್ಯೆಯಾಗಿದೆ. ಒಮ್ಮೆ ತಪ್ಪಾಗಿ ಹೆಜ್ಜೆಯಿರಿಸಿಯಾಗಿದೆ. ಮುಂದೆ ಇಂತಹ ಮಾರಕ ಅಭಿವೃದ್ಧಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆ ನಮ್ಮ ಮೆಟ್ರೋ 3ನೇ ಹಂತವನ್ನು ಸಿದ್ಧಪಡಿಸಿದೆ.

2018-19ನೇ ಸಾಲಿನ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮೆಟ್ರೋದ 3ನೇ ಹಂತದ ನೀಲಿನಕ್ಷೆ ಪ್ರಕಟಿಸಿದ್ದಾರೆ. ರಾಜಧಾನಿಯ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆಯಾಗಲಿದ್ದು, ಬಹುತೇಕ ಪ್ರದೇಶಗಳಿಗೆ 3ನೇ ಹಂತದಲ್ಲಿ ಮೆಟ್ರೋ ಸಂಪರ್ಕ ಸಿಗಲಿದೆ. ಟ್ರಾಫಿಕ್ ಸಮಸ್ಯೆ ಮಾತ್ರವಲ್ಲದೆ ನಗರದ ಸುಸ್ಥಿರ ಹಾಗೂ ವ್ಯವಸ್ಥಿತ ಬೆಳವಣಿಗೆಗೂ ಸಹಕಾರಿಯಾಗುವಂತೆ ಮೆಟ್ರೋ ಸಾಗಲಿದೆ.

ಹೊರವಲಯದತ್ತ ದೃಷ್ಟಿ: ನಗರದ ಕೇಂದ್ರ ಪ್ರದೇಶದಲ್ಲಿ ಅಭಿವೃದ್ಧಿಗಿನ್ನು ಸ್ಥಳವೇ ಇಲ್ಲದಂತಾಗಿದೆ. ಜತೆಯಲ್ಲಿ ಲಭ್ಯವಿರುವ ಜಾಗದಲ್ಲಿ ನಿರ್ವಣವಾಗಿರುವ ಫ್ಲ್ಯಾಟ್ ಮತ್ತು ಪ್ರಾಪರ್ಟಿಗಳು ಕೋಟಿ ರೂಪಾಯಿ ಮೀರುತ್ತಿದ್ದು, ಕೈಗಟುಕದ ಸ್ಥಿತಿ ನಿರ್ವಣವಾಗಿದೆ. ಹೀಗಾಗಿ ನಗರದ ಹೊರವಲಯಗಳೇ ಪ್ರಸ್ತುತ ಹೆಚ್ಚಿನ ಬೇಡಿಕೆಯ ಸ್ಥಳವಾಗಿದೆ. ಕೈಗೆಟಕುವ ದರದಲ್ಲಿ ನಿವೇಶನ ಲಭ್ಯವಿದ್ದು, ಲ್ಯಾಂಡ್​ಬ್ಯಾಂಕ್(ಅಭಿವೃದ್ಧಿಗೆ ಲಭ್ಯವಿರುವ ಜಾಗ) ಕೂಡ ಅಧಿಕವಾಗಿದೆ.

ವರ್ತುಲ ಮೆಟ್ರೋ ಸಿದ್ಧ: ಮೆಟ್ರೋ 3ನೇ ಹಂತ ಪೂರ್ಣವಾದ ಬಳಿಕ ಪೂರ್ಣ ನಗರವನ್ನೇ ಸುತ್ತುವರಿಯುವಂತಹ ಮೆಟ್ರೋ ಮಾರ್ಗವಿರಲಿದೆ. ಜಯಪ್ರಕಾಶ(ಜೆ.ಪಿ.)ನಗರದಿಂದ ಹೊರವರ್ತಲ ರಸ್ತೆಯಲ್ಲೇ ನಾಯಂಡಹಳ್ಳಿ-ಪೀಣ್ಯ-ಹೆಬ್ಬಾಳ-ಕೆ.ಆರ್.ಪುರದವರೆಗೆ ಮೆಟ್ರೋ ಮಾರ್ಗ 3ನೇ ಹಂತದಲ್ಲಿ ನಿರ್ವಣವಾಗಲಿದೆ. 2ನೇ ಹಂತದಲ್ಲಿ ಸಿಲ್ಕ್ ಬೋರ್ಡ್​ನಿಂದ ಕೆ.ಆರ್.ಪುರದವರೆಗೆ ಮೆಟ್ರೋ ಮಾರ್ಗ ನಿರ್ವಣವಾಗಲಿದೆ. ಹೀಗೆ ಬಹುತೇಕ ವರ್ತಲ ಮೆಟ್ರೋ ನನಸಾಗಲಿದೆ. ಇದರಿಂದ ಪೀಣ್ಯ-ಹೆಬ್ಬಾಳ-ಕೆ.ಆರ್.ಪುರ ಹೊರವರ್ತಲ ರಸ್ತೆ ಪ್ರದೇಶದಲ್ಲಿ ಮತ್ತಷ್ಟು ಐಟಿ ಕಂಪನಿಗಳು ತಲೆಯೆತ್ತಲಿವೆ.

ನಿವೇಶನಗಳಿಗೂ ಮೆಟ್ರೋ ಭಾಗ್ಯ

ಪ್ರಸ್ತುತ ಮೆಟ್ರೋ ಮೊದಲನೇ ಹಂತ ನಗರದ 4 ದಿಕ್ಕುಗಳನ್ನಷ್ಟೇ ಸಂರ್ಪಸುತ್ತಿದೆ. ಮೆಟ್ರೋ 2ನೇ ಹಂತದಲ್ಲಿ ನಗರದ ಮತ್ತಷ್ಟು ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಾಗಲಿದೆ. ಮಾಗಡಿ ಟೋಲ್​ಗೇಟ್​ನಿಂದ ಮಾಗಡಿ ಮುಖ್ಯ ರಸ್ತೆಯ ಮೂಲಕ ಕಡಬಗೆರೆ, ಗೊಟ್ಟಿಗೆರೆ ಮಾರ್ಗ ವಿಸ್ತರಣೆಯಾಗಿ ಬಸವಾಪುರದವರೆಗೆ, ಆರ್.ಕೆ.ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್​ನಿಂದ ರಾಜನಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ, ಇಬಲೂರಿನಿಂದ ಕಾರ್ಮಲ್​ರಾಮ್ ಕಡೆಗೆ 3ನೇ ಹಂತದಲ್ಲಿ ಹೊಸ ಮಾರ್ಗ ನಿರ್ವಣವಾಗಿದೆ. ಈ ಪ್ರದೇಶ ಐಟಿಗಿಂತ ನಿವೇಶನಗಳಿಗೆ, ಫ್ಲ್ಯಾಟ್​ಗಳು ತಲೆ ಎತ್ತುವ ಪ್ರದೇಶಗಳಾಗಿವೆ. ಭವಿಷ್ಯದಲ್ಲಿ ಮೆಟ್ರೋ ಸಂಪರ್ಕವಿರಲಿದೆ ಎಂದು ತಿಳಿದಾಕ್ಷಣ ರಿಯಾಲ್ಟಿ ಕ್ಷೇತ್ರವೂ ಈ ಪ್ರದೇಶದತ್ತ ಆಕರ್ಷಿತವಾಗುತ್ತವೆ. ಒಟ್ಟಾರೆ 3ನೇ ಹಂತದ ಮೆಟ್ರೋ ಜಾಲ ನಗರದ 105.5 ಕಿ.ಮೀ.ಗೆ ವಿಸ್ತರಣೆಯಾಗಲಿದ್ದು, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

Leave a Reply

Your email address will not be published. Required fields are marked *

Back To Top