Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಅಟ್ಟಣಿಗೆ ಜೋಡಣೆಗೆ ಚಾಲನೆ

Sunday, 08.10.2017, 3:00 AM       No Comments

ಶ್ರವಣಬೆಳಗೊಳ: ವಿಂಧ್ಯಗಿರಿಯಲ್ಲಿರುವ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅಟ್ಟಣಿಗೆ ಚೋಡಣೆಗಾಗಿ ಸಾರ್ವಜನಿಕರು ಹಾಗೂ ಗಣ್ಯರು ಶ್ರಮದಾನ ಮಾಡುವ ಮೂಲಕ ಸಾಮಗ್ರಿಯನ್ನು ಬೆಟ್ಟಕ್ಕೆ ಸಾಗಿಸಿದರು.

ಅಟ್ಟಣಿಗೆ ಸಾಮಗ್ರಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು. ಬಳಿಕ ಬೆಟ್ಟದ ತಪ್ಪಲಿನಿಂದ ಗೊಮ್ಮಟೇಶ್ವರ ಮೂರ್ತಿವರೆಗೆ ಮಾನವ ಸರಪಳಿ ನಿರ್ವಿುಸಿ ಶ್ರೀಗಳ ಮಾರ್ಗದರ್ಶನದಂತೆ 2 ಮೆಟ್ಟಿಲಿಗೆ ಒಬ್ಬರಂತೆ ಸಾವಿರಕ್ಕೂ ಹೆಚ್ಚು ಜನರು ಸ್ವಯಂಪ್ರೇರಣೆಯಿಂದ ಅಟ್ಟಣಿಗೆ ವಸ್ತುಗಳನ್ನು ಬೆಟ್ಟಕ್ಕೆ ಸಾಗಿಸಿದರು.

ಸಚಿವ ಎ.ಮಂಜು ಮಾತನಾಡಿ, ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, 35 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಖರೀದಿಸಿದೆ. ಅಟ್ಟಣಿಗೆ ಮೇಲೆ 7 ಸಾವಿರ ಜನ ಕುಳಿತು ಮಹಾಮಜ್ಜನವನ್ನು ವೀಕ್ಷಿಸಬಹá-ದಾಗಿದೆ. ಕಾಮಗಾರಿಗೆ ಬಿಡá-ಗಡೆಯಾಗಿರá-ವ ಹಣದಲ್ಲಿ ಸುಮಾರು 15 ಕೋಟಿ ರೂ. ಜಿಎಸ್​ಟಿ ಹೋಗಲಿದ್ದು, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ ಅನá-ದಾನ ಪಡೆಯಲಾಗá-ವುದು. ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕೇಂದ್ರ ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಮಹೋತ್ಸವಕ್ಕೆ 40 ಲಕ್ಷ ಜನ ಆಗಮಿಸá-ವ ನಿರೀ್ಷೆಯಿದ್ದು, ಹೀಗಾಗಿ 75 ಕೋಟಿ ರೂ.ಗಳಲ್ಲಿ ತಾತ್ಕಾಲಿಕ ಶೆಡ್​ನಲ್ಲಿ 12 ನಗರ ನಿರ್ವಿುಸಲಾಗá-ವುದು. ಇದಕ್ಕಾಗಿ ಶ್ರವಣಬೆಳಗೊಳದ ಸಮೀಪದಲ್ಲಿ ಜಾಗ ಪರಿಶೀಲಿಸಲಾಗá-ತ್ತಿದೆ. ರಸ್ತೆ ಅಭಿವೃದ್ಧಿಗೆ ಸರ್ಕಾರ 90 ಕೋಟಿ ರೂ. ಬಿಡುಗಡೆ ಮಾಡಿದ್ದು, 40 ಕೋಟಿ ರೂ. ಚನ್ನರಾಯಪಟ್ಟಣ ತಾಲೂಕಿನ ರಸ್ತೆ ಅಭಿವೃದ್ಧಿಗೆ ಹಾಗೂ ಉಳಿದ 50 ಕೋಟಿಯಲ್ಲಿ ಜಿಲ್ಲೆಯ ಇತರೆ ತಾಲೂಕಿನ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗá-ವುದು ಎಂದರು.

ಡಿಸಿ ರೋಹಿಣಿ ಸಿಂಧೂರಿ ದಾಸರಿ, ಜಿಪಂ ಅಧ್ಯಕ್ಷೆ ಶ್ವೇತಾ, ಶಾಸಕ ಸಿ.ಎನ್.ಬಾಲಕೃಷ್ಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

Back To Top