Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ಅಜೀರ್ಣದ ಸಮಸ್ಯೆ ಮತ್ತು ನಿವಾರಣೆ

Thursday, 25.05.2017, 3:00 AM       No Comments

ಯಾವುದೇ ವಯಸ್ಸಿನವರಲ್ಲಿ, ಯಾರಲ್ಲಿಯೂ ಕಂಡುಬರಬಹುದಾದ ಸಮಸ್ಯೆ ಅಜೀರ್ಣ. ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿರುವ ಅಜೀರ್ಣವು ನಾನಾ ಕಾರಣಗಳಿಂದ ಬರಬಹುದಾಗಿದೆ. ಅದನ್ನು ತಿಳಿದು ತಕ್ಕ ಔಷಧ ನೀಡಿದರೆ ಅಜೀರ್ಣ ಸಮಸ್ಯೆ ಕಡಿಮೆಯಾಗಲು ಸಾಧ್ಯ. ಇಲ್ಲಿ ಅದಕ್ಕೆ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ.

ಹೆಚ್ಚು ಆಹಾರ ಸೇವನೆಯಿಂದ ಅಜೀರ್ಣ ಸಮಸ್ಯೆ ಉಂಟಾಗಿದ್ದಲ್ಲಿ ಶುಂಠಿಯನ್ನು ಅಗಿದು ತಿನ್ನಬೇಕು. ಶುಂಠಿಯು ಜಠರದಿಂದ ಕರುಳಿಗೆ ಆಹಾರ ತೆರಳುವಂತೆ ಮಾಡುತ್ತದೆ. ಶುಂಠಿಯನ್ನು ಸ್ವಲ್ಪ ನೀರಿಗೆ ಹಾಕಿ ಬೇಯಿಸಿ, ಸ್ವಲ್ಪ ನಿಂಬೆರಸ ಹಾಗೂ 2-3 ಹನಿ ಜೇನುತುಪ್ಪ ಸೇರಿಸಿ ಕುಡಿಯುವುದು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಶುಂಠಿಯನ್ನು ಬೆಲ್ಲದೊಂದಿಗೆ ಸೇರಿಸಿ ಜಗಿದು ಸೇವಿಸುವುದರಿಂದ ತಕ್ಷಣ ವಿಶ್ರಾಂತಿ ದೊರೆಯುತ್ತದೆ.

ಅರ್ಧ ಚಮಚ ಓಮದಕಾಳನ್ನು ಜಗಿದು, ಅಗಿದು ಹೀರುವುದರಿಂದ ಅಜೀರ್ಣವು ಕಡಿಮೆಯಾಗುತ್ತದೆ. ಓಮದಕಾಳನ್ನು ಸೇವಿಸಿದ ನಂತರ ಸ್ವಲ್ಪ ಶುದ್ಧ ವಾತಾವರಣದಲ್ಲಿ ನಡೆಯುವುದು ಅಜೀರ್ಣಕ್ಕೆ ತಕ್ಷಣ ವಿಶ್ರಾಂತಿಯನ್ನು ನೀಡುತ್ತದೆ.

ಬೇಸಿಗೆ ಕಾಲದಲ್ಲಿ ಪುದೀನ ಜ್ಯೂಸ್, ಪುದೀನ ಟೀ ಅಥವಾ ಪುದೀನ ಎಲೆಗಳನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ದೇಹದ ಉಷ್ಣಾಂಶದ ಸಮಸ್ಯೆ ಕಡಿಮೆಯಾಗುತ್ತದೆ.

ಹೆಚ್ಚು ಕ್ಯಾಲರಿ ಇರುವ ಆಹಾರ ಸೇವಿಸಿದ ನಂತರ ಬಡೆಸೊಪ್ಪನ್ನು (ಸೋಂಪಿನ ಕಾಳು) ತೆಗೆದುಕೊಳ್ಳುವುದರಿಂದ ತಿಂದ ಆಹಾರವು ವೇಗವಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಹೆಚ್ಚು ಮಸಾಲೆಯುಕ್ತ ಆಹಾರ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಇರುವುದರಿಂದ ಇದು ಅಜೀರ್ಣಕ್ಕೆ ಕಾರಣವಾಗಬಲ್ಲದು.

ತುಳಸಿಯ ಚಹ ಅಥವಾ ತುಳಸಿಯನ್ನು ಜಗಿದು ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.

ಗರ್ಭಿಣಿ ಸ್ತ್ರೀಯರಲ್ಲಿ ಅಜೀರ್ಣ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಹೆಚ್ಚು ಕ್ಯಾಲರಿಯುಕ್ತ, ಮಸಾಲೆಯುಕ್ತ, ಕರಿದ ಆಹಾರ ಸೇವಿಸದಿರುವುದು ಒಳಿತು. ಬಿಸಿನೀರನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಧೂಮಪಾನ ಹಾಗೂ ಮದ್ಯಪಾನವು ಅಜೀರ್ಣಕ್ಕೆ ಕಾರಣವಾಗಬಲ್ಲದು. ಇಂದಿನ ವ್ಯಸ್ತ ವ್ಯವಸ್ಥೆ ಜೀವನದಲ್ಲಿ ಮಾನಸಿಕ ಒತ್ತಡವನ್ನು ತಂದೊಡ್ಡುತ್ತಿದೆ. ಹಲವರಲ್ಲಿ ಇದೂ ಅಜೀರ್ಣಕ್ಕೆ ಕಾರಣವಾಗುತ್ತಿದೆ. ಹಾಗಾಗಿ ವಿಶ್ರಾಂತಿ ಕ್ರಿಯೆಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಂಡರೆ ಅಜೀರ್ಣವನ್ನು ನಿವಾರಿಸಿಕೊಳ್ಳಬಹುದು.

ಮುಖ್ಯವಾಗಿ ಆಹಾರವನ್ನು ಚೆನ್ನಾಗಿ ಅಗಿದು ಸೇವಿಸಬೇಕು. ಏಕೆಂದರೆ ಹೊಟ್ಟೆಗೆ ಹಲ್ಲುಗಳಿಲ್ಲ. ಬಹಳ ರಾತ್ರಿಯಾದ ನಂತರ ಆಹಾರ ಸೇವಿಸಬಾರದು. ಆಹಾರಸೇವನೆಯ ನಂತರ ಸ್ವಲ್ಪ ಕಾಲ ಶುದ್ಧ ವಾತಾವರಣದಲ್ಲಿ ನಡೆದಾಡುವುದು ಉತ್ತಮ. ಊಟವಾದ ಕೂಡಲೇ ವ್ಯಾಯಾಮ ಮಾಡುವುದು ಬೇಡ. ನಿಧಾನ ನಡಿಗೆ ಮಾತ್ರ ಸಾಕು.

ಹೆಚ್ಚು ಹಣ್ಣು, ಹಣ್ಣಿನ ಜ್ಯೂಸ್, ನೀರು ಕುಡಿಯುವುದು ಒಳ್ಳೆಯದು. ಸಣ್ಣ ಊಟ ಸಾಕು. ಮಲಗುವ ಮೊದಲು ಊಟ ಬೇಡ. ಊಟವಾದ ಒಂದು ಗಂಟೆಯ ನಂತರವಾದರೂ ಮಲಗುವುದು ಉತ್ತಮ. ಚೆನ್ನಾಗಿ ನಿದ್ದೆ ಮಾಡಿ. ಪುದೀನ ಎಲೆಗಳನ್ನು ತಿನ್ನಿ. ಹೀಗೆ ಸುಲಭದಾರಿಗಳು ಹಾಗೂ ವ್ಯವಸ್ಥಿತ ಆಹಾರ ಪದ್ಧತಿ, ದಿನಚರ್ಯೆಯ ಮೂಲಕ ಅಜೀರ್ಣದಿಂದ ಹೊರಬರಲು ಸಾಧ್ಯ. ಕೊನೇ ಹನಿ

ಜ್ವರವಿದ್ದಾಗ ಇಡೀ ಮೈಯನ್ನು ತಣ್ಣೀರಿನ ಬಟ್ಟೆಯಿಂದ ಒರೆಸಬೇಕು. ಹೊಟ್ಟೆಗೆ, ಎದೆಗೆ ತಂಪು ಪಟ್ಟಿಯನ್ನು ಕಟ್ಟಬೇಕು.

ಮಹಾಯೋಗಿ ಕೈವಾರ ತಾತಯ್ಯ

ಚಿಕ್ಕಬಳ್ಳಾಪುರ ಜಿಲ್ಲೆಯ ಪುಣ್ಯಕ್ಷೇತ್ರ ಕೈವಾರ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ ಎಂಬ ಐತಿಹ್ಯವಿದೆ. ಮಹಾನ್ ಸಂತ ಶ್ರೀ ಯೋಗಿ ನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು. 1726ರಲ್ಲಿ ಮುದ್ದಮ್ಮ-ಕೊಂಡಪ್ಪ ದಂಪತಿಯ ಮಗನಾಗಿ ಜನಿಸಿದ ಯೋಗಿ ನಾರೇಯಣರ ಜನ್ಮನಾಮ ನಾರಾಣಪ್ಪ. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭಿಣಿಯಾಗಿದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಆದಿಶೇಷನೇ ಬಂದು ಕಾಪಾಗಿದ. ಹೀಗೆ ಜನ್ಮ ತಳೆದ ನಾರಾಣಪ್ಪನವರ ತಂದೆ ಬಳೆ ವ್ಯಾಪಾರಿಗಳು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದ. ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿಯೇ ಮಗ್ನನಾಗಿರುತ್ತಿದ್ದ. ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತ. ಪ್ರೌಢವಯಸ್ಕನಾದಾಗ ಹಿರಿಯರು ಮುಂದೆ ನಿಂತು ಸೋದರತ್ತೆಯ ಮಗಳೊಂದಿಗೆ ವಿವಾಹ ನೆರವೇರಿಸಿದರು. ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೆಂಡತಿಯ ಕಾರಣದಿಂದ ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.

ಅದೊಂದು ದಿನ ಎಲ್ಲಿಗೋ ಹೋಗುತ್ತಿರುವಾಗ ದಿವ್ಯ ತೇಜಸ್ಸಿನ ಸ್ವಾಮಿಗಳೊಬ್ಬರಿಂದ ‘ಓಂ ನಮೋ ನಾರಾಯಣ’ ಎಂಬ ಬೀಜಾಕ್ಷರಿ ಮಂತ್ರೋಪದೇಶ ಸಿಕ್ಕಿತು. ‘ಬಾಯಲ್ಲಿ ಬೆಣಚುಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು. ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ’ ಎಂದು ಅವರು ಹರಸಿದರು. ಅನಂತರ ಗುಹೆಯಲ್ಲಿ ಕುಳಿತು ಆ ಬೀಜಾಕ್ಷರಿ ಮಂತ್ರ ಜಪಿಸುವಾಗ ಬೆಣಚುಕಲ್ಲಿದ್ದ ಬಾಯಲ್ಲಿ ‘ಓಂ ನಮೋ ನಾರೇಯಣಾಯ’ ಎಂದಾದಾಗ ಗಾಬರಿಯಾಯಿತು. ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ‘ಅದನ್ನೇ ಮುಂದುವರಿಸು. ನೀನು ‘‘ಯೋಗಿ ನಾರೇಯಣ’’ ಎಂದೇ ಹೆಸರಾಗುವೆ’ ಎಂಬ ಅಶರೀರವಾಣಿಯಾಯಿತು. ಮೂರು ವರ್ಷಗಳ ಕಠಿಣ ತಪದ ಫಲವಾಗಿ ಬೆಣಚುಕಲ್ಲು ಸಕ್ಕರೆಯಾಗಿತ್ತು. ನಂತರ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು, ಕಾಲಜ್ಞಾನದ ಗ್ರಂಥವನ್ನು ರಚಿಸಿದರು. ಕೈವಾರ ತಾತಯ್ಯನವರು ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. 110 ವರ್ಷ ಬದುಕಿದ್ದ ಕೈವಾರ ತಾತಯ್ಯನವರು 1836ರಲ್ಲಿ ಜೀವಂತ ಸಮಾಧಿಯಾದರು. ಕೈವಾರದಲ್ಲಿ ಪ್ರತಿವರ್ಷ ಜ್ಯೇಷ್ಠಮಾಸದ ಶುದ್ಧ ತದಿಗೆಯಂದು ಯೋಗೀಂದ್ರರ ರಥೋತ್ಸವ ನಡೆಯುತ್ತದೆ.

 

Leave a Reply

Your email address will not be published. Required fields are marked *

Back To Top