Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಅಕ್ಷಯ ಭಿಕ್ಷುವಿನ ಪರಮ ಧ್ಯೇಯ

Wednesday, 11.07.2018, 3:02 AM       No Comments

| ಗಂಗಾವತಿ ಪ್ರಾಣೇಶ್​

ಭೀಕರ ಬರಗಾಲದಲ್ಲಿ ಜೀವಿಗಳು ತಳಮಳಿಸಿ ಸಾಯುತ್ತಿರಲು, ಬುದ್ಧ ಅನೇಕಾನೇಕ ಧನಿಕರನ್ನು ಕರೆಸಿ, ಜೀವಿಗಳಿಗೆ ಅನ್ನದಾನ ಮಾಡಲು ಸಹಾಯ ಯಾಚಿಸಿದ. ಆಗ ಧನಿಕರೆಲ್ಲ ಸೇರಿ ಬುದ್ಧನಲ್ಲಿ ಹೇಳಿಕೊಂಡರು, ‘ನಾವೆಷ್ಟು ಪ್ರಯತ್ನಿಸಿದರೂ ಬರಗಾಲ ಹೋಗಲಾಡಿಸಲಾಗುವುದಿಲ್ಲ. ನನ್ನ ಎಲ್ಲ ಸಂಪತ್ತು ಕೊಟ್ಟರೂ, ಎಂಟು ದಿನಕ್ಕೆ ಬಾರದು..’. ಇನ್ನೊಬ್ಬ ಹೇಳಿದ ‘ನನ್ನ ಎಲ್ಲ ಸಂಪತ್ತು ದಾನ ಮಾಡಿದರೂ ಹತ್ತು ದಿನ ನಿಭಾಯಿಸಬಹುದು’, ಮಗದೊಬ್ಬ ‘ನನ್ನ ಸಂಪತ್ತು ಹದಿನೈದು ದಿನಕ್ಕೆ ಸಾಕು’ ಎಂದ. ಆಗ ಭಿಕ್ಷುಕಿಯೊಬ್ಬಳು, ‘ಬುದ್ಧದೇವ! ನನ್ನ ಸಂಪತ್ತು ಒಂದು ವರ್ಷ ಬರಗಾಲ ನಿಭಾಯಿಸಲು ಸಾಕು’ ಎಂದಳು. ಶ್ರೀಮಂತರೆಲ್ಲರೂ ಆಕೆಯತ್ತ ಅಚ್ಚರಿಯಿಂದ ನೋಡಿ ಹೀಯಾಳಿಸಿದರು. ಬುದ್ಧ ಆಕೆಗೆ ಮಾತನಾಡಲು ಅವಕಾಶ ನೀಡಿದ. ಈಗ ನೀವು ಹೇಳಿದ ದಿನಗಳೆಲ್ಲ ಸೇರಿಸಿದರೆ ಇನ್ನುಳಿದವರೂ ಒಪ್ಪಿದರೆ ಒಂದು ವರ್ಷ ಕಳೆಯಬಹುದು. ನಾನು ನಿಮ್ಮೆಲ್ಲರಲ್ಲಿ ಬೇಡಿ ತಂದು ದಾನ ಮಾಡುವೆ. ನನ್ನ ಭಿಕ್ಷಾಪಾತ್ರೆಗೆ ನೀವು ಒಬ್ಬೊಬ್ಬರೂ ಒಂದು ಹಿಡಿ ಅನ್ನ ಹಾಕಿದರೆ ಅದು ಎಷ್ಟೋ ಜನರ ಹಸಿವು ನೀಗಿಸುತ್ತದೆ ಎಂದಳು. ನಿರ್ಗತಿಕಳ ತ್ಯಾಗ, ಆತ್ಮವಿಶ್ವಾಸ ಕಂಡು ಎಲ್ಲರೂ ಬೆರಗಾದರು. ಆಕೆ ತನ್ನ ಉದ್ದೇಶ ಈಡೇರಿಸಿಕೊಂಡಳು. ತಾತ್ಪರ್ಯ ಇಷ್ಟೇ. ಯಾರನ್ನೂ ವೃತ್ತಿ, ವೇಷ ಮತ್ತು ಭಾಷೆ ಆಧರಿಸಿ ನಿಕೃಷ್ಟವಾಗಿ ಕಾಣಬೇಡಿ.

Leave a Reply

Your email address will not be published. Required fields are marked *

Back To Top