Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಅಕ್ಕನ ಕೊಲೆಗೂ ಹಳೇ ಪ್ರಕರಣಕ್ಕೂ ತಾಳೆ ಮಾಡಬೇಡಿ

Thursday, 14.09.2017, 3:06 AM       No Comments

ಬೆಂಗಳೂರು: ಲಂಕೇಶ್ ಪತ್ರಿಕೆ ಹಕ್ಕು ಸಂಬಂಧ 12 ವರ್ಷಗಳ ಹಿಂದೆ ನನ್ನ ಮತ್ತು ಅಕ್ಕನ(ಗೌರಿ ಲಂಕೇಶ್) ನಡುವೆ ವಿವಾದವಾಗಿತ್ತು. ಪತ್ರಿಕಾ ಕಚೇರಿಯಲ್ಲಿ ಕಂಪ್ಯೂಟರ್ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಅಕ್ಕನ ವಿರುದ್ಧ ದೂರು ನೀಡಿದ್ದೆ. ನಾನು ಪಿಸ್ತೂಲ್ ತೋರಿಸಿದೆ ಎಂದು ಆಕೆ ಪ್ರತಿದೂರು ಕೊಟ್ಟಿದ್ದಳು. ಬಳಿಕ ಸಂಧಾನ ನಡೆದು ಅನ್ಯೋನ್ಯವಾಗಿದ್ದೆವು. ನಮ್ಮ ಮಧ್ಯೆ ಯಾವುದೇ ವೈಮನಸ್ಸು ಇರಲಿಲ್ಲ. ಹಳೇ ಪ್ರಕರಣಕ್ಕೂ ಆಕೆ ಕೊಲೆಗೂ ತಾಳೆ ಮಾಡಬೇಡಿ!

ಇದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಮನದಾಳದ ಮಾತುಗಳು.

ಗೌರಿ ಲಂಕೇಶ್ ಕೊಲೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳ(ಎಸ್​ಐಟಿ) ವಿಚಾರಣೆಗೆ ಬುಧವಾರ ಇಂದ್ರಜಿತ್ ಲಂಕೇಶ್ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಅರಮನೆ ರಸ್ತೆಯಲ್ಲಿನ ಸಿಐಡಿ ಕೇಂದ್ರ ಆವರಣದ ಎಸ್​ಐಟಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಇಂದ್ರಜಿತ್​ರನ್ನು 1 ಗಂಟೆಗೂ ಅಧಿಕ ಕಾಲ ಎಸ್​ಐಟಿ ಮುಖ್ಯ ತನಿಖಾಧಿಕಾರಿ ಎಂ.ಎನ್.ಅನುಚೇತ್ ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ವಿಚಾರಣೆ ನಂತರ ಇಂದ್ರಜಿತ್ ಮಾತನಾಡಿ, ಹಳೇ ಪ್ರಕರಣ ಕೆದಕಿ ಹತ್ಯೆಗೆ ಸಂಬಂಧ ಕಲ್ಪಿಸುವ ಬೆಳವಣಿಗೆ ಬೇಸರ ತಂದಿದೆ ಎಂದು ಭಾವುಕರಾದರು. ನನ್ನ ಅಕ್ಕನ ಅಗಲಿಕೆ ಆಘಾತ ಉಂಟಾಗಿದೆ. ಇಂಥ ವೇಳೆ ಹಳೇ ವಿವಾದವು ಮರುಜೀವ ಪಡೆದುಕೊಂಡಿದ್ದು ಮತ್ತಷ್ಟು ನೋವುಂಟು ಮಾಡಿತು. ಈ ಸಲುವಾಗಿ ಅಧಿಕಾರಿಗಳಿಗೂ ಸ್ಪಷ್ಟನೆ ನೀಡಿದ್ದಾಗಿ ಹೇಳಿದರು.

ಪಲ್ಸರ್ ಬೈಕ್​ನಲ್ಲಿ ಹಂತಕರ ಸುತ್ತಾಟ?

ಇಬ್ಬರು ಹಂತಕರು ಪಲ್ಸರ್ ಬೈಕ್​ನಲ್ಲಿ ಗೌರಿ ಹತ್ಯೆಗೂ ಮುನ್ನ ಅವರ ಸುತ್ತಾಟದ ಕುರಿತು ಮಾಹಿತಿ ಕಲೆ ಹಾಕಿ ರೋಡ್ ಮ್ಯಾಪ್ ಸಿದ್ಧಪಡಿಸಿದ್ದರು ಎಂಬ ಮಾಹಿತಿ ಎಸ್​ಐಟಿ ತಂಡಕ್ಕೆ ಲಭ್ಯವಾಗಿದೆ. ಗೌರಿ ಕುರಿತು ಮಾಹಿತಿ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳು ಕೃತ್ಯ ನಡೆದ ದಿನದಂದು ಶಾರ್ಪ್ ಶೂಟರ್​ನನ್ನು ಬೈಕ್​ನಲ್ಲಿ ಕರೆತಂದು ಹತ್ಯೆ ಮಾಡಿಸಿ ಮತ್ತೆ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಮಾಜಿ ನಕ್ಸಲರಿಂದ ಎಸ್​ಐಟಿ ಭೇಟಿ

ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲ್ ಪಾತ್ರ ಇರುವುದಾಗಿ ಶಂಕೆ ವ್ಯಕ್ತವಾದ ಹಿನ್ನೆಲೆ ಸಿರಿಮನೆ ನಾಗರಾಜ್ ಮತ್ತು ಜಲ್ಪೀಕರ್ ಅಲಿಯಾಸ್ ನೂರ್ ಶ್ರೀಧರ್ ತನಿಖಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿರುವುದಾಗಿ ಮೂಲಗಳು ಹೇಳಿವೆ. ಸಾಕೇತ್ ರಾಜನ್ ಎನ್​ಕೌಂಟರ್ ಬಳಿಕ ನಕ್ಸಲ್ ಹೋರಾಟದ ದಿಕ್ಕಿನ ಬಗ್ಗೆ ಗೌರಿಗೆ ಚಿಂತೆಯಾಗಿತ್ತು. ರಕ್ತ ಕಾಂತ್ರಿಯಲ್ಲಿ ಸಾಮಾಜಿಕ ನ್ಯಾಯ ಸಾಧುವಲ್ಲ ಎಂದು ಕೆಲವರನ್ನು ನಕ್ಸಲ್ ಹೋರಾಟದಿಂದ ಹೊರಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಸರ್ಕಾರದ ಜತೆ ರ್ಚಚಿಸಿ ನಮ್ಮನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಅವರಿಂದ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಎಸ್​ಐಟಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ.

 

ಕಲಬುರಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರದ ಮೇಲೆ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಸರ್ಕಾರ ಸರಿಯಾಗಿ ತನಿಖೆ ನಡೆಸುತ್ತಿದೆ. ಸಿಕ್ಕಿರುವ ಸುಳಿವುಗಳ ಬಗ್ಗೆ ಬಹಿರಂಗ ಪಡಿಸುವುದು ಸಾಧ್ಯವಿಲ್ಲ.

| ರಾಮಲಿಂಗಾ ರೆಡ್ಡಿ ಗೃಹ ಸಚಿವ

 


ಜಿಗ್ನೇಶ್ ಮೆವಾನಿ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು

ಪುತ್ತೂರು: ಬೆಂಗಳೂರಿನಲ್ಲಿ ನಡೆದ ‘ನಾನು ಗೌರಿ‘ ಎಂಬ ಪ್ರತಿರೋಧ ಸಮಾವೇಶದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರಣ ಎಂದು ಆರೋಪಿಸಿದ ಹಾಗೂ ಮೋದಿ ತಾಯಿ ಬಗ್ಗೆ ಅತ್ಯಂತ ಕೀಳುಮಟ್ಟದ ಭಾಷೆ ಪ್ರಯೋಗಿಸಿದ ಹೋರಾಟಗಾರ ಜಿಗ್ನೇಶ್ ಮೆವಾನಿ ವಿರುದ್ಧ ಪುತ್ತೂರು ನಗರ ಠಾಣೆಗೆ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top