Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಅಂತೂ ಸಿಕ್ಕಿತು ಪ್ರಸೂತಿ ಆರೈಕೆ ಭತ್ಯೆ

Wednesday, 05.07.2017, 3:00 AM       No Comments

ಚಾಮರಾಜನಗರ: 1300 ರೂ. ಪ್ರೋತ್ಸಾಹ ಧನ ಪಡೆಯಲು ಮೂರು ವರ್ಷಗಳಿಂದ ಅಲೆದಾಡುತ್ತಿದ್ದ ಫಲಾನುಭವಿಗೆ ಅಂತೂ ಹಣ ದೊರೆತಿದೆ. ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ನ್ಯೂಸ್​ನಲ್ಲಿ ಪ್ರಕಟವಾದ ವರದಿ ನಂತರ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಫಲಾನುಭವಿಗೆ ಪ್ರೋತ್ಸಾಹ ಧನ ತಲುಪುವಂತೆ ಮಾಡಿದ್ದಾರೆ.

ಏನಾಗಿತ್ತು?: ಗುಂಡ್ಲುಪೇಟೆಯ ವೀರನಪುರದ ಭಾಗ್ಯ ಅವರಿಗೆ 2014ರ ಅಕ್ಟೋಬರ್​ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಇದಕ್ಕಾಗಿ ಸರ್ಕಾರದ ‘ಪ್ರಸೂತಿ ಆರೈಕೆ ಯೋಜನೆ’ಯಡಿ 1300 ರೂ. ಪ್ರೋತ್ಸಾಹ ಧನ ಬರಬೇಕಿತ್ತು. ಇದನ್ನು ಪಡೆಯಲು ಸಾಕಷ್ಟು ಅಲೆದಾಟ ನಡೆಸಿದ್ದರು. ಇತ್ತೀಚೆಗೆ ಪ್ರೋತ್ಸಾಹ ಧನದ ಚೆಕ್ ಪಡೆದಿದ್ದರಾದರೂ, ಅದನ್ನು ನಗದೀಕರಿಸಲು ಬ್ಯಾಂಕ್​ಗೆ ಹೋದಾಗ ಸರ್ಕಾರದ ಖಾತೆಯಲ್ಲಿ ಹಣವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದ್ದರು.

ಭಾಗ್ಯ ಪತಿ ಮಹೇಶ್ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂರ್ಪಸಿದಾಗ ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಕೇವಲ 1300 ರೂ. ಪಡೆದು ಕೊಳ್ಳಲು ಬೆಂಗಳೂರಿಗೆ ಕೆಲಸ ಬಿಟ್ಟು, ಸಾರಿಗೆ ವೆಚ್ಚ ಭರಿಸಿಕೊಂಡು ಹೋಗಬೇಕಿತ್ತು. ಈ ಕುರಿತು ‘ದಿಗ್ವಿಜಯ’ ನ್ಯೂಸ್ ಹಾಗೂ ‘ವಿಜಯವಾಣಿ’ ವರದಿ ಪ್ರಕಟಿಸಿ ಆರೋಗ್ಯ ಇಲಾಖೆಯ ಗಮನ ಸೆಳೆದಿದ್ದವು. ಕೂಡಲೇ ಕಾರ್ಯಪ್ರವೃತ್ತ ರಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ಹಣ ತಲುಪುವಂತೆ ಮಾಡಿದ್ದಾರೆ.

 ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ನ್ಯೂಸ್​ನಲ್ಲಿ ವರದಿ ಪ್ರಕಟವಾದ ಕೇವಲ ಎರಡ್ಮೂರು ದಿನಗಳಲ್ಲಿ ಹಣ ಕೈ ಸೇರಿದೆ. ಮಾಧ್ಯಮದ ಕಾಳಜಿಗೆ ಅಭಿನಂದನೆಗಳು.

| ಮಹೇಶ್, ಫಲಾನುಭವಿ ಭಾಗ್ಯ ಅವರ ಪತಿ

Leave a Reply

Your email address will not be published. Required fields are marked *

Back To Top