Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಅಂಚೆ ಕಚೇರಿಗೆ ಜನರ ಲಗ್ಗೆ

Friday, 07.07.2017, 3:00 AM       No Comments

ಬೀದರ್: ಬೇಟಿ ಪಡಾವೋ- ಬೇಟಿ ಬಚಾವೋ ಯೋಜನೆಯಡಿ ಕೇಂದ್ರ ಸರ್ಕಾರ 8ರಿಂದ 32 ವರ್ಷದ ಹೆಣ್ಮಕ್ಕಳಿಗೆ 2 ಲಕ್ಷ ರೂ. ನೀಡಲಿದೆ ಎಂದು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಎದ್ದಿರುವ ವದಂತಿ ಬಿಸಿ ಈಗ ಬೀದರ್ ಜಿಲ್ಲೆಗೂ ತಟ್ಟಿದೆ. ಈ ವದಂತಿಗೆ ಕಿವಿಗೊಟ್ಟ ನೂರಾರು ಜನ ಗುರುವಾರ ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಿಗೆ ಲಗ್ಗೆಯಿಟ್ಟು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಅಂಚೆ ಕಚೇರಿಗೆ ತೆರಳಿ ಮಗಳ ಹೆಸರಿನಲ್ಲಿ ಅರ್ಜಿ ತುಂಬಿ ಕೇಂದ್ರ ಸರ್ಕಾರಕ್ಕೆ ರವಾನಿಸಿದರೆ, ಸರ್ಕಾರ ಅವರ ಖಾತೆಗೆ ನೇರವಾಗಿ 2 ಲಕ್ಷ ರೂ. ಹಾಕಲಿದೆ ಎಂಬ ವದಂತಿ ಹಬ್ಬಿದೆ. ಇದನ್ನೇ ಸತ್ಯವೆಂದು ನಂಬಿದ ಅನೇಕರು ಬೀದರ್​ನ ಪ್ರಧಾನ ಅಂಚೆ ಕಚೇರಿ ಸೇರಿ ತಾಲೂಕು ಕೇಂದ್ರ ಹಾಗೂ ವಿವಿಧೆಡೆಯ ಅಂಚೆ ಕಚೇರಿಗಳಿಗೆ ಧಾವಿಸಿ ಅರ್ಜಿ ಸಲ್ಲಿಸಲು ನಾಮುಂದು ತಾಮುಂದು ಎಂದು ಮುಗಿಬಿದ್ದರು.

ಕೇಂದ್ರದಿಂದ ಇಂಥ ಯಾವುದೇ ಯೋಜನೆ ಇಲ್ಲ. ಇದಕ್ಕಾಗಿ ಅರ್ಜಿಯೂ ನಮ್ಮಲ್ಲಿ ಬಂದಿಲ್ಲ ಎಂದು ಅಂಚೆ ಅಧಿಕಾರಿಗಳು ಎಷ್ಟೇ ಸಮಜಾಯಿಷಿ ನೀಡಿದರೂ ಜನರು ಕೇಳುತ್ತಿಲ್ಲ. ಅರ್ಜಿಗಾಗಿ ಅತ್ತಿತ್ತ ಅಲೆದಾಟ ನಡೆಸಿದ್ದಾರೆ. ಯಾರೋ ಇಂಥ ಬೋಗಸ್ ಅರ್ಜಿ ಸಿದ್ಧಪಡಿಸಿದ್ದು, ಅದನ್ನೇ 10ರಿಂದ 200 ರೂ.ವರೆಗೆ ಕೊಟ್ಟು ಖರೀದಿಸಿ ತುಂಬಲು ಹವಣಿಸಿದ್ದಾರೆ. ಜನರ ಈ ಕ್ರಮ ಅಂಚೆ ಅಧಿಕಾರಿಗಳನ್ನೂ ಪೇಚಿಗೆ ಸಿಲುಕಿಸಿದೆ. ಇದೊಂದು ವದಂತಿ. ಜನ ಸತ್ಯ ಅರಿತುಕೊಳ್ಳ ಬೇಕೆಂದು ಅಂಚೆ ಇಲಾಖೆ ಅಧೀಕ್ಷಕ ಎಸ್.ಎಸ್. ಪಾಟೀಲ್ ಕೋರಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಲೀನಾ ನಾಯರ್ ಸಹ ‘ಇದೊಂದು ಗಾಳಿ ಸುದ್ದಿ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top