Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಅಂಗವಿಕಲನಿಗಾಗಿ ಜೀವನ ಮುಡಿಪು

Friday, 19.05.2017, 3:03 AM       No Comments

ಕೆಲ ಮಕ್ಕಳು ಹುಟ್ಟುವಾಗಲೇ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಮತ್ತೆ ಕೆಲವರು ಬೆಳೆಯುತ್ತ ಹೋದಂತೆ ಕಾಯಿಲೆ ಅಥವಾ ಅಪಘಾತಕ್ಕೆ ತುತ್ತಾಗಿ ಅಂಗವೈಕಲ್ಯಕ್ಕೆ ತುತ್ತಾಗುವುದಿದೆ. ಜನ ಅಂಗವಿಕಲರನ್ನು ತಾತ್ಸಾರದಿಂದ ನೋಡಿದರೂ, ತಾಯಿ ಮಾತ್ರ ತನ್ನ ಮಕ್ಕಳು ಹೇಗಿದ್ದರೂ, ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ.

ಚೀನಾದ ಝೋ ಹೊಂಗ್ಯಾನ್​ಗೆ 1988ರಲ್ಲಿ ಓರ್ವ ಮಗ ಹುಟ್ಟಿದಾಗಲೇ ಆತ ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿ ಅಂಗವೈಕಲ್ಯ ಹೊಂದಿದ್ದ. ಆತನನ್ನು ಕಂಡ ವೈದ್ಯರು ಕೂಡ ಮಗನ ಮೇಲಿನ ಆಸೆ ಬಿಟ್ಟುಬಿಡುವಂತೆ ಸೂಚಿಸಿದ್ದರು. ಬದುಕಿದ್ದರೂ, ಮುಂದೆ ಸಾಮಾನ್ಯ ಜೀವನ ನಡೆಸಲು ಆತ ಅಸಮರ್ಥನಾಗುತ್ತಾನೆ ಎಂದು ಜನರು ಝೋಗೆ ಹೇಳಿದ್ದರು. ಅವರೆಲ್ಲರ ಮಾತುಗಳನ್ನು ಕಡೆಗಣಿಸಿದ ಆಕೆ, ಅದೆಷ್ಟೇ ಕಷ್ಟವಾದರೂ, ಮಗನನ್ನು ಬೆಳೆಸುತ್ತೇನೆ. ಆತ ಹೇಗಾದರೂ ಇರಲಿ ಎಂದು ದೃಢವಾಗಿ ನಿರ್ಧರಿಸಿದ್ದಳು. ಜತೆಗೆ ಮಗುವನ್ನು ಕಡೆಗಣಿಸಿದ ಗಂಡನಿಗೂ ವಿಚ್ಛೇದನ ನೀಡಿ ತಾನೊಬ್ಬಳೇ ಸಾಕತೊಡಗಿದಳು. ವಿವಿಧ ಕೆಲಸ ಮಾಡಿ ಹಣ ಸಂಪಾದಿಸುತ್ತ ಮಗನ ಮಾನಸಿಕ ಸಾಮರ್ಥ್ಯ ಬೆಳವಣಿಗೆಗೆ ಏನೆಲ್ಲ ಅಗತ್ಯವೋ, ಅದೆಲ್ಲ ಮಾಡಿದಳು. ಬದುಕುವುದೇ ಕಷ್ಟ ಎಂದುಕೊಂಡಿದ್ದ ಅದೇ ಹುಡುಗ ಡಿಂಗ್​ಡಿಂಗ್, 29 ವರ್ಷಗಳ ಬಳಿಕ ಪೆಕಿಂಗ್ ಯುನಿವರ್ಸಿಟಿಯಲ್ಲಿ ಪರಿಸರ ವಿಜ್ಞಾನ ಮತ್ತು ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದಾನೆ. ಜತೆಗೆ ಹಾರ್ವರ್ಡ್​ನಲ್ಲಿ ಕಾನೂನು ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುತ್ತಿದ್ದಾನೆ. ಇದಕ್ಕೆಲ್ಲ ಕಾರಣವಾಗಿದ್ದು ಆತನ ತಾಯಿಯ ಕಠಿಣ ಪರಿಶ್ರಮ ಮತ್ತು ಶ್ರದ್ಧೆ, ಮಗನ ಮೇಲಿನ ಪ್ರೀತಿ..

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top